MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • Hussain Mansuri: ಮಾನವತೆಯ ರಾಯಭಾರಿ ಹುಸೈನ್‌ ಮನ್ಸೂರಿಗೆ ಏನಾಯ್ತು?

Hussain Mansuri: ಮಾನವತೆಯ ರಾಯಭಾರಿ ಹುಸೈನ್‌ ಮನ್ಸೂರಿಗೆ ಏನಾಯ್ತು?

Hussain mansuri: ಯಾವುದೇ ಧರ್ಮ ಜಾತಿ ನೋಡದೆ ಬಡವರಿಗೆ, ಬೀದಿ ಬದಿ ಮಕ್ಕಳಿಗೆ ಕ್ಯಾನ್ಸರ್ ರೋಗಿಗಳಿಗೆ ಹೀಗೆ ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸಹಾಯ ಮಾಡುವ ಮುಂಬೈನ ಖ್ಯಾತ ಮಾನವತಾವಾದಿ ತೊಂದರೆಗೊಳಗಾಗಿದ್ದಾರೆ, ಅವರು ಕುಂಟುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಏನಾಯ್ತು ?

2 Min read
Author : Ravi Janekal
Published : Jun 24 2026, 11:48 AM IST
Share this Photo Gallery
  • FB
  • TW
  • Linkdin
  • Whatsapp
15
Hussain mansuri: ಹುಸೈನ್ ಮನ್ಸೂರಿ
Image Credit : Asianet News

Hussain mansuri: ಹುಸೈನ್ ಮನ್ಸೂರಿ

ಹುಸೈನ್ ಮನ್ಸೂರಿ(Hussain mansuri) ಯಾರಿಗೆ ತಾನೇ ಗೊತ್ತಿಲ್ಲ? ಸೋಷಿಯಲ್ ಮೀಡಿಯಾ ಬಳಸುವ ಪ್ರತಿಯೊಬ್ಬರಿಗೆ ಅವರ ಪರಿಚಯ ಇದ್ದೇ ಇರುತ್ತೆ. ಅವರಲ್ಲಿನ ಮಾನವೀಯ ಗುಣಗಳಿಂದಾಗಿ ದೇಶಾದ್ಯಂತ ಧರ್ಮಾತೀತವಾಗಿ ಕೋಟ್ಯಂತರ ಜನ ಫಾಲೋವರ್ಸ್‌ಗಳಿದ್ದಾರೆ. ಬಡವರು, ಕ್ಯಾನ್ಸರ್‌ ರೋಗಿಗಳು, ಬೀದಿ ಬದಿ ಮಕ್ಕಳು, ಅನಾಥರಿಗೆ ಸಹಾಯ ಮಾಡುವ ವಿಡಿಯೋ ಮೂಲಕವೇ ಅವರು ತುಂಬಾ ಪ್ರಸಿದ್ಧರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
What Happened Hussain mansuri? ಹುಸೈನ್ ಮನ್ಸೂರಿಗೆ ಏನಾಯ್ತು?
Image Credit : Asianet News

What Happened Hussain mansuri? ಹುಸೈನ್ ಮನ್ಸೂರಿಗೆ ಏನಾಯ್ತು?

ಇತ್ತೀಚೆಗೆ ಹುಸೈನ್ ಮಾನ್ಸೂರಿ ಇಬ್ಬರ ಸಹಾಯದಿಂದ ಕುಂಟುತ್ತ ನಡೆಯುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಕಾಲು, ಪಾದದ ಗಾಯಕ್ಕೆ ಪ್ಲಾಸ್ಟರ್ ಹಾಕಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅದಕ್ಕೆ ಕುಂಟುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ 'ಅಯ್ಯೋ ದೇವ್ರೇ, ದೇವ್ರಂಥ ಮನುಷ್ಯನಿಗೆ ಏನಾಯ್ತು?' ಅಂತಾ ಪ್ರತಿಯೊಬ್ಬರೂ ಅತ್ಯಂತ ಕಾಳಜಿಯಿಂದ ವಿಚಾರಿಸುತ್ತಿದ್ದಾರೆ.

Related Articles

Related image1
Viral Note: 'ನನ್ನ ಚಿಕ್ಕಮ್ಮನಿಗೆ ಬೇಗ ಸಾವು ಕೊಡು ದೇವ್ರೇ..!: ಹುಂಡಿಯಲ್ಲಿ ಸಿಕ್ಕ 20 ರೂ. ನೋಟಿನ ಬರಹ ವೈರಲ್
Related image2
McGrail-Bateup: ಆ್ಯಂಬುಲೆನ್ಸ್‌ ಸೈರನ್‌ನಷ್ಟು ಜೋರಾಗಿ ಕೂಗುವ ಈ ವ್ಯಕ್ತಿ ವಿಶ್ವದ ಜೋರು ಧ್ವನಿಯವ!
35
ಹುಸೈನ್ ಮನ್ಸೂರಿಗೆ ಅಪಘಾತ?
Image Credit : Asianet News

ಹುಸೈನ್ ಮನ್ಸೂರಿಗೆ ಅಪಘಾತ?

ಹೌದು, ಹುಸೈನ್ ಮನ್ಸೂರಿಗೆ ಸಣ್ಣದಾಗಿ ಆಕ್ಸಿಡೆಂಟ್ ಆಗಿದೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ (ಜೂನ್ 11, 2026ರ ಪೋಸ್ಟ್) ಅವರೇ ಹೇಳಿಕೊಂಡಂತೆ,'ಚಾರ್ ದಿನ್ ಪೆಹ್ಲೆ ಆಕ್ಸಿಡೆಂಟ್ ಹೋ ಗಯಾ ಥಾ, ಡಿವೈಡರ್ ಪೆ ಚಲ್ ರಹಾ ಥಾ… ಪೈರ್ ಲಗ್ ಕೆ ಬೆಂಡ್ ಹೋ ಗಯಾ. ಸೋಮವಾರ್ ಕಾ ಆಪರೇಷನ್ ಹೈ.'(ನಾಲ್ಕು ದಿನಗಳ ಹಿಂದೆ ಆಕ್ಸಿಡೆಂಟ್ ಆಯ್ತು. ಡಿವೈಡರ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕಾಲಿಗೆ ಬಲವಾದ ಪೆಟ್ಟು ಬಿದ್ದು ಮೂಳೆ ಮುರಿದಿದೆ. ಸೋಮವಾರ ಆಪರೇಷನ್ ಇದೆ) ಎಂದು ಬರೆದುಕೊಂಡಿದ್ದಾರೆ.

45
ಮಾನವತೆಯ ರಾಯಭಾರಿ ಹುಸೇನ್ ಮನ್ಸೂರಿ
Image Credit : Asianet News

ಮಾನವತೆಯ ರಾಯಭಾರಿ ಹುಸೇನ್ ಮನ್ಸೂರಿ

ಹುಸೈನ್ ಮನ್ಸೂರಿ ಮುಂಬೈನ ಖ್ಯಾತ ಮಾನವತಾವಾದಿ(ಫಿಲಾಂಟ್ರೋಪಿಸ್ಟ್), ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Influencer) ಬಡವರು, ಕ್ಯಾನ್ಸರ್ ರೋಗಿಗಳು, ಬೀದಿಬದಿ ಮಕ್ಕಳು, ಅನಾಥರು ಹೀಗೆ ನಿರ್ಗತಿಕರಿಗೆ ಬಡವರಿಗೆ ಸಹಾಯ ಮಾಡುವಲ್ಲಿ ಬಹಳ ಜನಪ್ರಿಯರು. ಅವರ ಇನ್ನೊಂದು ವಿಶೇಷ ಗುಣವೆಂದರೆ ಹೀಗೆ ಸಹಾಯ ಮಾಡುವಾಗ ಧರ್ಮ ಜಾತಿ, ಮೇಲು-ಕೀಳು ಅಂತಾ ಎಂದೂ ನೋಡಿದವರಲ್ಲ. ಪ್ರತಿಯೊಬ್ಬರಿಗೂ ಮಾನವೀಯತೆಯಿಂದ ಮಿಡಿಯುವ ಅವರ ವಿಡಿಯೋಗಳು ಎಂಥವರಿಗೂ ಮನಸು ಕರುಗುವಂತೆ ಮಾಡುತ್ತೆ.

55
ಹುಸೈನ್ ಮನ್ಸೂರಿಗೆ ಏನಾಯ್ತು?
Image Credit : Asianet News

ಹುಸೈನ್ ಮನ್ಸೂರಿಗೆ ಏನಾಯ್ತು?

ಬಡವರಿಗೆ ದೀನ-ದಲಿತರಿಗೆ ಸಹಾಯ ಮಾಡುವ ಹುಸೈನ್ ಮನ್ಸೂರಿ ಹುಟ್ಟಾ ಶ್ರೀಮಂತರೇನೂ ಅಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಕುಟುಂಬದಲ್ಲಿ ಹುಟ್ಟಿ, ಸ್ಲಂನಲ್ಲಿ ಬದುಕಿ ಬೆಳೆದವರು. ಅವರೇ ಹೇಳುವಂತೆ ಬಾಲ್ಯದ ಜೀವನ ತುಂಬಾ ಕಷ್ಟಕರವಾಗಿತ್ತು. ಹಸಿವು, ಸೆಕೆಂಡ್ ಹ್ಯಾಂಡ್ ಬಟ್ಟೆ ತೊಡುವುದರಲ್ಲೇ ಬಾಲ್ಯ ಕಳೆದುಹೋಯ್ತು. ಕನಿಷ್ಟ ಮೂಲಭೂತ ಅಗತ್ಯಗಳಿಗೆ ಪರದಾಡುವಂತ ಸ್ಥಿತಿ ಇತ್ತು. ಇದೆಲ್ಲದರ ನಡುವೆ ತಂದೆ-ತಾಯಿ ಕಷ್ಟದಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುವಾಗ ಪಡಬಾರದ ಕಷ್ಟಪಟ್ಟ ಬಗ್ಗೆಯೂ ಸ್ಮರಿಸಿದ್ದಾರೆ. 

ಇಂಥ ಕಡುಬಡತನದಲ್ಲಿ ಬೆಳೆದ ಹುಸೇನ್ ಮನ್ಸೂರಿ ಕಡು ಬಡವರು, ಅನಾಥರು ಕಂಡಾಗ ಬಾಲ್ಯದ ಜೀವನ ನೆನಪಾಗಿ ಸಹಾಯಕ್ಕೆ ದಾವಿಸುತ್ತಾರೆ. ಹೀಗೆ ಸಹಾಯ ಮಾಡುತ್ತಲೇ ಅವರಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾವಿಗಳಾಗಿದ್ದಾರೆ ಕೋಟ್ಯಂತರ ಫಾಲೋವರ್ಸ್‌ಗಳಿದ್ದಾರೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ತತ್ವದಂತೆ ಸೋಷಿಯಲ್ ಮೀಡಿಯಾದಿಂದ ಬರುವ ಹಣವನ್ನು ಬಡವರಿಗಾಗಿ ಖರ್ಚು ಮಾಡುತ್ತಲೇ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಇಂಥ ಮಾನವೀಯ ಗುಣವುಳ್ಳುವರು ಅಪಘಾತಕ್ಕೀಡಾಗಿದ್ದಾರೆ ಅವರು ಬೇಗ ಗುಣಮುಖರಾಗಲಿ ಎಂಬ ಹಾರೈಕೆ ನಮ್ಮದು, ಹುಸೈನ್ ಮನ್ಸೂರಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ವೈರಲ್ ಸುದ್ದಿ
ಸುದ್ದಿ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
McGrail-Bateup: ಆ್ಯಂಬುಲೆನ್ಸ್‌ ಸೈರನ್‌ನಷ್ಟು ಜೋರಾಗಿ ಕೂಗುವ ಈ ವ್ಯಕ್ತಿ ವಿಶ್ವದ ಜೋರು ಧ್ವನಿಯವ!
Recommended image2
Google job Quit: ಗೂಗಲ್‌ ಕಂಪನಿಯ ಕೆಲಸ ಬಿಟ್ಟ 23ರ ಯುವತಿ, 'ಹಣಕಾಸು ಭದ್ರತೆ ಎನ್ನುವುದೇ ಟ್ರ್ಯಾಪ್' ಎಂದಿದ್ದೇಕೆ?
Recommended image3
Viral Trisha Post: ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!
Related Stories
Recommended image1
Viral Note: 'ನನ್ನ ಚಿಕ್ಕಮ್ಮನಿಗೆ ಬೇಗ ಸಾವು ಕೊಡು ದೇವ್ರೇ..!: ಹುಂಡಿಯಲ್ಲಿ ಸಿಕ್ಕ 20 ರೂ. ನೋಟಿನ ಬರಹ ವೈರಲ್
Recommended image2
McGrail-Bateup: ಆ್ಯಂಬುಲೆನ್ಸ್‌ ಸೈರನ್‌ನಷ್ಟು ಜೋರಾಗಿ ಕೂಗುವ ಈ ವ್ಯಕ್ತಿ ವಿಶ್ವದ ಜೋರು ಧ್ವನಿಯವ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved