ಕಾರ್‌ನಲ್ಲಿ ಗರ್ಭಿಣಿ ಪತ್ನಿಯೇ ಇರಲಿಲ್ಲ; ರಸ್ತೆಮಧ್ಯೆ ಪ್ರತಿಭಟಿಸಿದ ವ್ಯಕ್ತಿಯ ಡ್ರಾಮಾ ಬಯಲು
ರಾಜ್ಯಪಾಲರ ಮಾರ್ಗದಲ್ಲಿ ವಾಹನ ತಡೆದಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಎಂದು ಹೇಳಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಕಾರಿನಲ್ಲಿ ಪತ್ನಿ ಇರಲಿಲ್ಲ ಎಂಬ ಸತ್ಯಾಂಶ ಬಯಲಾಗಿದೆ.

ವ್ಯಕ್ತಿಯ ಹೈಡ್ರಾಮಾ ಬಯಲು
ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿತ್ತು. ಈ ವಿಡಿಯೋ ವೈರಲ್ ಬಳಿಕ, ವಿಐಪಿ ಸಂಸ್ಕೃತಿ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಇದೀಗ ಪೊಲೀಸ್ ತನಿಖೆ ವೇಳೆ ವ್ಯಕ್ತಿಯ ಹೈಡ್ರಾಮಾ ಬಯಲಾಗಿದೆ.
ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲು
ರಾಜ್ಯಪಾಲರ ಮಾರ್ಗದಲ್ಲಿ ವಾಹನಗಳನ್ನು ತಡೆಹಿಡಿಯಲಾಗಿತ್ತು. ಇದರಿಂದ ಕೋಪಗೊಂಡ ಮೋಹಿತ್ ಎಂಬಾತ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದನು. ಈ ಮೋಹಿತ್ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ವೈರಲ್ ಆಗಿತ್ತು. ಆದ್ರೆ ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಮೋಹಿತ್ ಕಾರ್‌ನಲ್ಲಿ ಆತನ ಪತ್ನಿಯೇ ಇರಲಿಲ್ಲ ಎಂದು ತಿಳಿದು ಬಂದಿದೆ.
ವ್ಯಕ್ತಿ ಜೊತೆ ಗರ್ಭಿಣಿ ಪತ್ನಿ ಇರಲಿಲ್ಲ
ಪತ್ರಿಭಟನೆ ಕುಳಿತ ವ್ಯಕ್ತಿ ಜೊತೆ ಗರ್ಭಿಣಿ ಪತ್ನಿ ಇರಲಿಲ್ಲ. ಮನೆಗೆ ಹೋಗಬೇಕಿದ್ದ ಮೋಹಿತ್ ಅವಸರದಲ್ಲಿ ಪತ್ನಿ ಗರ್ಭಿಣಿ ಕಾರಿನಲ್ಲಿ ಇದ್ದಾಳೆ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದನು. ಈ ಘಟನೆಯನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಬೆನ್ನಲ್ಲೇ ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದ್ದ ಮೋಹಿತ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರತಿಭಟನೆ ನಡೆಸಿದ್ದು ಯಾಕೆ?
ಹೆಚ್‌ಎಎಲ್ ಪೊಲೀಸರ ವಿಚಾರಣೆ ವೇಳೆ ಮನೆಗೆ ತುರ್ತಾಗಿ ಹೋಗಬೇಕಿದ್ದೆ.ಮನೆಯಲ್ಲಿದ್ದ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಮನೆಯಲ್ಲಿ ಗರ್ಭಿಣಿ ಪತ್ನಿ ಇರುವ ಒತ್ತಡದಲ್ಲಿದ್ದರಿಂದ ನಾನು ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದೆ. ಪೊಲೀಸರ ಮೇಲೆ ವೈಯುಕ್ತಿಕ ಟಾರ್ಗೆಟ್ ಇಲ್ಲ ಎಂದು ಮೋಹಿತ್ ಹೇಳಿಕೆ ದಾಖಲಿಸಿದ್ದಾನೆ.
ಇದನ್ನೂ ಓದಿ: ಲವ್ ಮಾಕ್ಟೇಲ್ ಸಿನಿಮಾ ಕಥೆ ಹೇಳಿ ನರ್ಸ್‌ಗೆ ತಾಳಿ ಕಟ್ಟಿದ ಭೂಪ; ವಿದೇಶದಿಂದ ಬರುತ್ತಿದ್ದಂತೆ ಶಾಕ್!
ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ
ನಾನು 15 ನಿಮಿಷಗಳಿಂದ ಹೆಚ್‌ಎಎಲ್ ISRO ಜಂಕ್ಷನ್ ನಲ್ಲಿ ಕಾಯುತ್ತಿದ್ದೆ. 15 ನಿಮಿಷಗಳ ಕಾಲ ವಾಹನಗಳನ್ನ ಪೊಲೀಸರು ತಡೆದಿದ್ದರು. ಈ ಹಿನ್ನೆಲೆ ನಾನು ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದೆ ಎಂದು ಪೊಲೀಸರ ಮುಂದೆ ಮೋಹಿತ್ ಹೇಳಿಕೆ ದಾಖಲಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸದೆ ಹೇಳಿಕೆ ದಾಖಲಿಸಿಕೊಂಡು ಮೋಹಿತ್‌ನನ್ನು ಪೊಲೀಸರು ಕಳುಹಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಎಕ್ಸ್ ಖಾತೆ ಮೂಲಕ ಮಾಹಿತಿ ನೀಡಿದ್ದಾರೆ. ಇತ್ತ ಮೋಹಿತ್ ಸಹ ಎಕ್ಸ್ ಖಾತೆಯಲ್ಲಿ ಘಟನೆ ಬಗ್ಗೆ ಬರೆದುಕೊಂಡಿದ್ದಾನೆ.
ಇದನ್ನೂ ಓದಿ: 40 ವರ್ಷವಾದ್ರೂ ಮಾಳವ್ವ ಹೋಟೆಲ್‌ನ ರುಚಿ ಕಡಿಮೆಯಾಗಿಲ್ಲ; ಇಲ್ಲಿ ಜನಕ್ಕೆ ಇವ್ರೇ ಅನ್ನಪೂರ್ಣೇಶ್ವರಿ

