- Home
- Astrology
- Vaastu
- ಮಸಾಲೆ ಡಬ್ಬಿಯಲ್ಲಿ ಹಣಕಾಸಿನ ಸಮಸ್ಯೆಗೆ ರಹಸ್ಯ ಪರಿಹಾರ! 3 ವಸ್ತುಗಳನ್ನಿಟ್ಟು ಮ್ಯಾಜಿಕ್ ನೋಡಿ
ಮಸಾಲೆ ಡಬ್ಬಿಯಲ್ಲಿ ಹಣಕಾಸಿನ ಸಮಸ್ಯೆಗೆ ರಹಸ್ಯ ಪರಿಹಾರ! 3 ವಸ್ತುಗಳನ್ನಿಟ್ಟು ಮ್ಯಾಜಿಕ್ ನೋಡಿ
ವಾಸ್ತು ಶಾಸ್ತ್ರದ ಪ್ರಕಾರ, ಆರ್ಥಿಕ ಸಮಸ್ಯೆಗಳನ್ನು ದೂರ ಮಾಡಲು ಅಡುಗೆಮನೆಯ ಮಸಾಲೆ ಡಬ್ಬಿ ಪ್ರಮುಖ ಪಾತ್ರ ವಹಿಸುತ್ತದೆ. ಮಸಾಲೆ ಡಬ್ಬಿಯ ತಳಭಾಗದಲ್ಲಿ3 ವಸ್ತು ಇಡುವುದರಿಂದ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ. ಇದು ಹಣಕಾಸಿನ ಸಂಕಷ್ಟಗಳನ್ನು ಕಡಿಮೆ ಮಾಡುವ ಸರಳ ವಾಸ್ತು ಪರಿಹಾರವಾಗಿದೆ.

ಆರ್ಥಿಕ ಸಮಸ್ಯೆಗೆ ಪರಿಹಾರ
ಜೀವನದಲ್ಲಿನ ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿ ಪರಿಹಾರಗಳಿವೆ. ವಾಸ್ತುಶಾಸ್ತ್ರದ ಪ್ರಕಾರ ನಡೆದುಕೊಂಡ್ರೆ ಮನೆಯಲ್ಲಿ ಸಂಪತ್ತು, ನೆಮ್ಮದಿ ನೆಲೆಸಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ರೆ ಅಥವಾ ಅತ್ಯಧಿಕವಾಗಿ ಹಣ ಫೋಲಾಗುತ್ತಿದ್ರೆ ಸರಳ ನಿಯಮವೊಂದನ್ನು ಪಾಲನೆ ಮಾಡುವಂತೆ ವಾಸ್ತುಶಾಸ್ತ್ರದಲ್ಲಿ ವಿವರಿಸಲಾಗಿದೆ.
ಅಡುಗೆಮನೆ
ಮನೆಯಲ್ಲಿ ಅಡುಗೆಕೋಣೆಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಮನೆಯನ್ನು ಕಟ್ಟುವಾಗಲೇ ಅಡುಗೆಮನೆ ಯಾವ ದಿಕ್ಕಿನಲ್ಲಿರಬೇಕು? ನೀರಿನ ಸರಬರಾಜು ಯಾವ ಭಾಗದಿಂದ ಬರಬೇಕು ಎಂಬುದನ್ನು ಎಲ್ಲರೂ ಯೋಚಿಸಿರುತ್ತಾರೆ. ವಾಸ್ತುಪ್ರಕಾರವೇ ಮನೆ ನಿರ್ಮಾಣವಾದರೂ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆಗೆ ಪರಿಹಾರ ಏನು ಎಂದು ನೋಡೋಣ ಬನ್ನಿ.
ಮಸಾಲೆಡಬ್ಬಿ
ಅಡುಗೆಮನೆಯಲ್ಲಿ ಮಸಾಲೆ ಡಬ್ಬಿ ಇದ್ದೇ ಇರುತ್ತದೆ. ಈ ಡಬ್ಬಿಯಲ್ಲಿ ಚಿಕ್ಕ ಚಿಕ್ಕ ಭಾಗಗಳನ್ನಾಗಿ ಮಾಡಲಾಗಿರುತ್ತದೆ ಅಥವಾ ಚಿಕ್ಕ ಬಟ್ಟಲುಗಳನ್ನಿಡಲಾಗಿರುತ್ತದೆ. ಇವುಗಳಲ್ಲಿ ಸಾಸಸೆ, ಜೀರಿಗೆ, ಅರಿಶಿನ, ಲವಂಗ, ಚಕ್ಕೆ ಸೇರಿದಂತೆ ಇನ್ನಿತರ ಮಸಾಲೆ ಪದಾರ್ಥಗಳನ್ನು ಶೇಖರಿಸಿಡಲಾಗಿರುತ್ತದೆ. ಈ ಡಬ್ಬದ ತಳಭಾಗದಲ್ಲಿ ಅಂದ್ರೆ ಬಟ್ಟಲುಗಳ ಕೆಳಗೆ ಮೂರು ವಸ್ತುಗಳನ್ನಿಡಬೇಕೆಂದು ನಮ್ಮ ಹಿರಿಯರು ಹೇಳುತ್ತಾರೆ. ಆ ಮೂರು ವಸ್ತುಗಳು ಯಾವವು ಗೊತ್ತಾ
ಮೂರು ವಸ್ತುಗಳು
ಮಸಾಲೆಡಬ್ಬಿಯ ಕೆಳಗೆ ಎರಡು ಲವಂಗ, ಎರಡು ಏಲಕ್ಕಿ ಮತ್ತು ಹಣ ಇಡಬೇಕೆಂದು ಮನೆಯಲ್ಲಿ ಹೇಳುತ್ತಿರುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಈ ಪದ್ಧತಿಯನ್ನು ಇಂದಿಗೂ ಅನುಸರಿಸಿಕೊಂಡು ಬರಲಾಗುತ್ತಿದೆ. ಹಣವನ್ನಿಡುವಾಗ ಒಂದು ರೂಪಾಯಿ ನಾಣ್ಯ ಮತ್ತು 10 ರೂಪಾಯಿ ಮುಖಬೆಲೆಯ ನೋಟ್‌ನ್ನು ಡಬ್ಬದಲ್ಲಿಡಬೇಕು. ನಂತರ ಈ ಮೂರು ವಸ್ತುಗಳ ಮೇಲೆ ಮಸಾಲೆಯ ಬಟ್ಟಲುಗಳನ್ನಿಡಬೇಕು.
ಗ್ರಾಮೀಣ ಭಾಗದಲ್ಲಿ ಬಲವಾದ ನಂಬಿಕೆ
ಈ ರೀತಿಯಾಗಿ ಮೂರು ವಸ್ತುಗಳನ್ನಿಡೋದರಿಂದ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಿರುತ್ತಾಳೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ರೆ ಈ ಪರಿಹಾರ ಅನುಸರಿಸಿದ್ರೆ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತೆ ಎಂಬ ಬಲವಾದ ನಂಬಿಕೆಯಿದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.
