ಹೆಸರು ಈ 3 ಅಕ್ಷರಗಳಿಂದ ಶುರುವಾಗುತ್ತಾ? ಲಕ್ಷ್ಮೀ ದೇವಿ ನಿಮ್ಮನ್ನ ಬಿಟ್ಟು ಹೋಗೋದೆ ಇಲ್ಲ!
Name Astro: ನಾಮ ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಹೆಚ್ಚಿನ ಮಹತ್ವವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಅವರ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯದ ಬಗ್ಗೆ ವಿವರಗಳನ್ನು ತಿಳಿಸುತ್ತದೆ. ಅಲ್ಲದೇ ಜೀವನದಲ್ಲಿ ಅದೃಷ್ಟ ಬರಲಿದೆಯೇ ಎನ್ನುವುದನ್ನು ಸಹ ತಿಳಿಸುತ್ತದೆ.

ಕೆಲವರು ಹುಟ್ಟಿನಿಂದಲೇ ಅದೃಷ್ಟವಂತರು
ನಾಮ ಜ್ಯೋತಿಷ್ಯ ಅಥವಾ ನೇಮ್ ಆಸ್ಟ್ರೋಲಾಜಿ ಜ್ಯೋತಿಷ್ಯದ ಒಂದು ಶಾಖೆಯಾಗಿದೆ. ಇದರ ಪ್ರಕಾರ, ಕೆಲವು ಅಕ್ಷರಗಳು ಹುಟ್ಟಿನಿಂದಲೇ ವಿಶೇಷ ಸಕಾರಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ಹೊಂದಿರುತ್ತವೆ. ಈ ಅಕ್ಷರಗಳಿಂದ ಪ್ರಾರಂಭವಾಗುವ ವ್ಯಕ್ತಿಗಳು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ. ಯಾವ ಮೂರು ಅಕ್ಷರಗಳ ಜನರು ಜೀವನದಲ್ಲಿ ಎಂದಿಗೂ ಸಂತೋಷ ಮತ್ತು ಸಮೃದ್ಧಿಯ ಕೊರತೆಯನ್ನು ಎದುರಿಸುವುದಿಲ್ಲ ಎನ್ನುವುದನ್ನು ನೋಡೋಣ.
'A' ಅಕ್ಷರದ ಜನರು
ನಾಮ ಜ್ಯೋತಿಷ್ಯದ ಪ್ರಕಾರ, ಇಂಗ್ಲಿಷ್ ಅಕ್ಷರ 'A' ಅಥವಾ ಕನ್ನಡ ಅಕ್ಷರ ‘ಅ’ ದಿಂದ ಪ್ರಾರಂಭವಾಗುವ ಹೆಸರುಗಳು ಹುಟ್ಟಿನಿಂದಲೇ ನಾಯಕರು. ಅವರು ಹೆಚ್ಚು ಮಹತ್ವಾಕಾಂಕ್ಷೆಯುಳ್ಳವರು ಮತ್ತು ಕಠಿಣ ಪರಿಶ್ರಮಿಗಳು. ದೃಢನಿಶ್ಚಯದ ಸ್ವಭಾವವನ್ನು ಹೊಂದಿರುವವರು, ತಾವು ಅಂದುಕೊಂಡಿದ್ದನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ. ಇವರ ಮೇಲೆ ಲಕ್ಷ್ಮೀ ದೇವಿ ಆಶೀರ್ವಾದ ಸದಾ ಇರುತ್ತದೆ. ಅಲ್ಲದೆ ಇವರಿಗೆ ಎಂದಿಗೂ ಸಂಪತ್ತಿನ ಕೊರತೆಯನ್ನು ಉಂಟಾಗುವುದಿಲ್ಲ.
'R' ಅಕ್ಷರದ ಜನರು
ಇಂಗ್ಲಿಷ್ ಅಕ್ಷರ 'R' ಅಥವಾ ಕನ್ನಡ ಅಕ್ಷರ ‘ರ’ದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ವ್ಯಕ್ತಿಗಳು ಬುದ್ಧಿವಂತರು ಮತ್ತು ಶ್ರಮಜೀವಿಗಳು. ಅವರು ಅಪಾರ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ, ಇದು ಅವರು ಆಯ್ಕೆ ಮಾಡಿದ ಯಾವುದೇ ಕ್ಷೇತ್ರದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದ ಅವರ ಜೀವನವು ಎಲ್ಲಾ ಸೌಕರ್ಯಗಳು, ಐಷಾರಾಮಿಗಳು ಮತ್ತು ಸಂಪತ್ತಿನಿಂದ ಕೂಡಿರುತ್ತದೆ.
'S' ಅಕ್ಷರದ ಜನರು
'S' ಅಥವಾ ಕನ್ನಡ ಅಕ್ಷರ ‘ಸ’ ದಿಂದ ಪ್ರಾರಂಭವಾಗುವ ಹೆಸರುಗಳು ತುಂಬಾ ಅದೃಷ್ಟಶಾಲಿಗಳು. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನು ಹೊಂದಿರುವ ಜನರು ನಿಷ್ಠಾವಂತರು, ಭಾವನಾತ್ಮಕರು ಮತ್ತು ಶುದ್ಧ ಹೃದಯಿಗಳು. ಅವರು ತಮ್ಮ ಒಳಗಿನ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ . ತಮ್ಮ ಕೆಲಸಗಳನ್ನು ಡೆಡಿಕೇಶನ್’ನಿಂದ ನಿರ್ವಹಿಸುತ್ತಾರೆ. ಕಠಿಣ ಪರಿಶ್ರಮದ ಮೂಲಕ ಕರಿಯರ್ ಹಾಗೂ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಹೆಸರು ಮತ್ತು ಅದೃಷ್ಟಕ್ಕಿಂತ ಕಠಿಣ ಪರಿಶ್ರಮ ಮುಖ್ಯ
ಜ್ಯೋತಿಷ್ಯ ಮತ್ತು ನಾಮ ಜ್ಯೋತಿಷ್ಯ ನಮಗೆ ಕೇವಲ ಮಾರ್ಗದರ್ಶನ ನೀಡುತ್ತದೆ, ಆದರೆ ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತನ್ನು ಕಠಿಣ ಪರಿಶ್ರಮ ಮತ್ತು ಪ್ರಯತ್ನ ಅಗತ್ಯ. ನಿಮ್ಮ ಹೆಸರು ಈ ಅಕ್ಷರಗಳಿಂದ ಪ್ರಾರಂಭವಾಗದಿದ್ದರೂ ಸಹ, ನಿಮ್ಮ ಕಾರ್ಯಗಳ ಆಧಾರದ ಮೇಲೆ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ.

