ವಾಸ್ತು ಪ್ರಕಾರ ಮನೆಗೆ ಕಪ್ಪೆ ಬರುವುದು ಶುಭವೋ? ಅಶುಭವೋ? ಇಲ್ಲಿದೆ ಅಚ್ಚರಿಯ ಮಾಹಿತಿ!
Frog in house Vastu: ಮಳೆಗಾಲದಲ್ಲಿ ಅಥವಾ ತಂಪಾದ ವಾತಾವರಣವಿದ್ದಾಗ ಮನೆಗೆ ಕಪ್ಪೆ ಬರುವುದು ಸಹಜ. ಆದರೆ ವಾಸ್ತು ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಮನೆಗೆ ಕಪ್ಪೆ ಬರುವುದು ಕೇವಲ ಆಕಸ್ಮಿಕವಲ್ಲ, ಅದೊಂದು ದೈವಿಕ ಸಂಕೇತ ಎನ್ನಲಾಗುತ್ತದೆ.
ಖ್ಯಾತ ಸಂತ ಪ್ರೇಮಾನಂದಜೀ ಮಹಾರಾಜ್ ಹೇಳಿದ್ದೇನು?
ಖ್ಯಾತ ಸಂತ ಪ್ರೇಮಾನಂದಜೀ ಮಹಾರಾಜ್ ಹೇಳಿದ್ದೇನು?
ಸಾಮಾನ್ಯವಾಗಿ ಮಳೆಗಾಲ ಅಥವಾ ತಂಪಾದ ಹವಾಮಾನವಿದ್ದಾಗ ಮನೆಗಳ ಒಳಗೆ ಕಪ್ಪೆಗಳು ಬರುವುದು ಸಹಜ. ಆದರೆ, ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಕಪ್ಪೆಯ ಆಗಮನಕ್ಕೆ ವಿಶೇಷ ಅರ್ಥಗಳಿವೆ. ಗರುಡ ಪುರಾಣ, ಶ್ರೀಮದ್ಭಾಗವತ ಹಾಗೂ ಸ್ಕಂದ ಪುರಾಣಗಳಲ್ಲೂ ಕಪ್ಪೆಯ ಬಗ್ಗೆ ಉಲ್ಲೇಖವಿದ್ದು, ಇಂದ್ರದೇವನ ಕೃಪೆ ಮತ್ತು ಜೀವಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಖ್ಯಾತ ಸಂತ ಪ್ರೇಮಾನಂದಜೀ ಮಹಾರಾಜ್ ಅವರ ಪ್ರವಚನಗಳಲ್ಲೂ ಕಪ್ಪೆಯ ಆಗಮನದ ಕುರಿತು ಮಹತ್ವದ ವಿಚಾರಗಳು ಚರ್ಚೆಯಾಗುತ್ತಿವೆ.
ಮನೆಗೆ ಕಪ್ಪೆ ಬಂದರೆ ಏನರ್ಥ?
ಮನೆಗೆ ಕಪ್ಪೆ ಬಂದರೆ ಏನರ್ಥ?
ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಮನೆಗೆ ಕಪ್ಪೆ ಬರುವುದು ಸಕಾರಾತ್ಮಕ ಶಕ್ತಿಯ ಸಂಕೇತ. ಮನೆಯಲ್ಲಿ ಪ್ರಶಾಂತ ವಾತಾವರಣವಿದ್ದು, ಭಕ್ತಿಭಾವ ನೆಲೆಸಿದೆ ಎಂಬುದನ್ನು ಇದು ಸೂಚಿಸುತ್ತದೆ. ಅಲ್ಲದೆ, ಕಪ್ಪೆಯ ಆಗಮನವು ಜೀವನದಲ್ಲಿ ಹೊಸ ಧನಾತ್ಮಕ ಬದಲಾವಣೆ, ಆರ್ಥಿಕ ಅನುಕೂಲತೆ ಮತ್ತು ಆಧ್ಯಾತ್ಮಿಕ ಪ್ರಗತಿಯ ಮುನ್ಸೂಚನೆ ಎಂದು ನಂಬಲಾಗುತ್ತದೆ.
ಕಪ್ಪೆ ಯಾವ ಸ್ಥಳದಲ್ಲಿ ಕಂಡರೆ ಶುಭ?
ಕಪ್ಪೆ ಯಾವ ಸ್ಥಳದಲ್ಲಿ ಕಂಡರೆ ಶುಭ?
ಪೂಜಾ ಕೋಣೆಯಲ್ಲಿ: ದೇವರ ಕೋಣೆ ಅಥವಾ ದೀಪದ ಬಳಿ ಕಪ್ಪೆ ಕಂಡರೆ, ನಿಮ್ಮ ಪೂಜೆ-ಪುನಸ್ಕಾರಗಳು ದೇವರಿಗೆ ತಲುಪುತ್ತಿವೆ ಮತ್ತು ದೈವಾನುಗ್ರಹ ಲಭಿಸುತ್ತಿದೆ ಎಂದರ್ಥ.
ತುಳಸಿ ಗಿಡದ ಬಳಿ: ತುಳಸಿ ಕಟ್ಟೆಯ ಬಳಿ ಕಪ್ಪೆ ಕಾಣಿಸಿಕೊಂಡರೆ ಸಾಕ್ಷಾತ್ ಲಕ್ಷ್ಮೀದೇವಿಯ ಕೃಪೆ ಪ್ರಾಪ್ತಿಯಾಗಿ, ಧನಲಾಭ ಹಾಗೂ ಸುಖ-ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
ಅಡುಗೆ ಮನೆಯಲ್ಲಿ: ಅಡುಗೆ ಮನೆಯಲ್ಲಿ ಕಪ್ಪೆ ಬಂದರೆ, ಮನೆಯಲ್ಲಿ ಅನ್ನದ ಕೊರತೆ ಇರುವುದಿಲ್ಲ, ಸದಾ ಧಾನ್ಯ ಸಮೃದ್ಧಿ ಇರುತ್ತದೆ ಎಂಬ ನಂಬಿಕೆಯಿದೆ.
ಮನೆಯ ಮುಖ್ಯ ದ್ವಾರದಲ್ಲಿ: ಪ್ರವೇಶ ದ್ವಾರದ ಬಳಿ ಕಪ್ಪೆ ಬಂದರೆ ಲಕ್ಷ್ಮೀ ಆಗಮನ, ಧನಾಗಮನ ಮತ್ತು ಮನೆಯೊಳಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತಿದೆ ಎಂದರ್ಥ.
ಕಪ್ಪೆಯ ಶಬ್ದ: ಮನೆಯ ಬಳಿ ಕಪ್ಪೆ ಜೋರಾಗಿ ಕೂಗಿದರೆ ಒಳ್ಳೆಯ ಸಿಹಿಸುದ್ದಿ ಕೇಳಿಬರಲಿದೆ ಅಥವಾ ಮನೆಗೆ ಆತ್ಮೀಯ ಅತಿಥಿಗಳು ಬರಲಿದ್ದಾರೆ ಎಂಬ ಸಂಕೇತ.
ನೆನಪಿರಲಿ
ನೆನಪಿರಲಿ
ಇವೆಲ್ಲವೂ ಪುರಾಣ ಮತ್ತು ವಾಸ್ತು ಆಧಾರಿತ ನಂಬಿಕೆಗಳಾಗಿವೆ. ಕಪ್ಪೆ ಮನೆಗೆ ಬಂದಾಗ ಅದಕ್ಕೆ ಯಾವುದೇ ರೀತಿಯ ಹಿಂಸೆ ಮಾಡದೆ, ಸಾಯಿಸದೆ ಅತ್ಯಂತ ಸುರಕ್ಷಿತವಾಗಿ ಮನೆಯಿಂದ ಹೊರಗೆ ಬಿಡುವುದು ಶ್ರೇಯಸ್ಕರ.











