ವಾಸ್ತು ಪ್ರಕಾರ Attached Bathroom ಒಳ್ಳೇದೋ ಅಲ್ವೋ?
ಇಂದಿನ ಕಾಲದಲ್ಲಿ, ಹೋಮ್ ಡಿಸೈನಿಂಗ್ ಸಾಕಷ್ಟು ಬದಲಾಗಿದೆ. ಹಿಂದೆ, ಜನರು ಅಂಗಳದಲ್ಲಿ ಸ್ನಾನಗೃಹಗಳನ್ನು ನಿರ್ಮಿಸುತ್ತಿದ್ದರು. ಕಡೆಗೆ ಮನೆಯೊಳಗೆ ಬಂದ ಬಚ್ಚಲು, ಇಂದು ಅಟ್ಯಾಚ್ಡ್ ಬಾತ್‌ರೂಂವರೆಗೆ ಹೋಗಿದೆ. ಆದರೆ ವಾಸ್ತು ಶಾಸ್ತ್ರ ಇದನ್ನು ಒಪ್ಪೋಲ್ಲ. ಆದರೂ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಿ ಇದನ್ನು ಸರಿ ಮಾಡಬಹುದು.
ವಾಸ್ತು ಶಾಸ್ತ್ರದ ನಿಯಮಗಳು
ಮಾಸ್ಟರ್ ಬೆಡ್ ರೂಮ್ ಗೆ(Bed room) ಜೋಡಿಸಲಾದ ಬಾತ್ ರೂಮ್ ಸಾಕಷ್ಟು ಆರಾಮದಾಯಕವಾಗಿರಬೇಕು. ಆದಾಗ್ಯೂ, ವಾಸ್ತುವಿನ ಪ್ರಕಾರ, ಅಂಥ ಮನೆಗಳಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕು. ನೀವು ಅನುಸರಿಸಬೇಕಾದ ನಿಯಮಗಳು ಯಾವುವು ಎಂಬುದನ್ನು ತಿಳಿಯೋಣ.
ಹೆಚ್ಚುತ್ತಿರುವ ನಕಾರಾತ್ಮಕತೆ(Negativity)
ಮಲಗುವಾಗ ಬಾತ್ ರೂಮ್ ಬಾಗಿಲು ತೆರೆದಿದ್ದರೆ, ಅದು ನಿಮ್ಮ ದೇಹದ ತೇಜಸ್ಸನ್ನು ದುರ್ಬಲಗೊಳಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಬಾತ್ ರೂಮ್ ಬಾಗಿಲು ಕ್ಲೋಸ್ ಆಗಿರುವಂತೆ ನೋಡಿಕೊಳ್ಳಿ. ಇಲ್ಲವಾದರೆ ನಕಾರಾತ್ಮಕತೆ ಎಲ್ಲೆಡೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
plumbing home care
ಆರೋಗ್ಯದ ಮೇಲೆ ನೀರಿನ ಸೋರಿಕೆಯ (Leakage)ಪರಿಣಾಮ
ಸ್ನಾನಗೃಹದಲ್ಲಿ ಯಾವುದೇ ರೀತಿಯ ನೀರು ಸೋರಿಕೆಯಾಗಿದ್ದರೆ, ಅದನ್ನು ತಕ್ಷಣವೇ ಸರಿಪಡಿಸಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀರಿನ ಸೋರಿಕೆಯ ಶಬ್ದ ಕೂಡ ವಾಸ್ತು ಪ್ರಕಾರ ಒಳ್ಳೆಯದಲ್ಲ ಎಂದು ನಂಬಲಾಗಿದೆ.
ಶುಚಿತ್ವವೂ ಇರಬೇಕು
ಅಟ್ಯಾಚ್ಡ್ ಬಾತ್ ರೂಮ್ ನ(Attached Bathroom) ಕೊಳಕು ನಿಮ್ಮ ಮಲಗುವ ಕೋಣೆಯಲ್ಲಿ ನಕಾರಾತ್ಮಕತೆಗೆ ಕಾರಣವಾಗಬಹುದು, ಆದ್ದರಿಂದ ಸ್ನಾನಗೃಹವನ್ನು ಚೆನ್ನಾಗಿ ಸ್ವಚ್ಛವಾಗಿಡಬೇಕು. ಬಾತ್ ರೂಮ್ ನಲ್ಲಿ ಇಂದಿಗೂ ವಾಸನೆ , ಗಲೀಜು ಇರದಂತೆ ನೋಡಿಕೊಳ್ಳಿ.
ಅಂತಹ ಟೈಲ್ ಗಳನ್ನು(Tile) ಹಾಕಬೇಡಿ
ಬಾತ್ ರೂಮ್ ನಲ್ಲಿ ಎಂದಿಗೂ ಕಪ್ಪು ಟೈಲ್ಸ್ ಬಳಸಬೇಡಿ. ಕಪ್ಪು ಟೈಲ್ಸ್ ನೆಗೆಟಿವಿಟಿಯನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಆದುದರಿಂದ ಅದನ್ನು ಹಾಕದೆ ಇದ್ದರೆ ಒಳಿತು. ಬೇರೆ ಬಣ್ಣದ ಟೈಲ್ಸ್ ಗಳನ್ನೂ ನೀವು ಬಳಕೆ ಮಾಡಬಹುದು. ಆದರೆ ಯಾವತ್ತೂ ಕಪ್ಪು ಬೇಡ.
ಬಾತ್ ರೂಮಿನಲ್ಲಿ ಸಸ್ಯಗಳು(Bathroom plants)
ನೀವು ಸ್ನಾನಗೃಹದಲ್ಲಿ ಸ್ಪೈಡರ್ ಸಸ್ಯ ಅಥವಾ ಸ್ನೇಕ್ ಪ್ಲಾಂಟ್ ಇಡಬಹುದು. ಇದು ಮನೆಗೆ ಸಕಾರಾತ್ಮಕತೆಯನ್ನು ತರುತ್ತದೆ. ಬಾತ್ ರೂಮ್ ನಲ್ಲಿರುವ ನೆಗೆಟಿವ್ ಎನರ್ಜಿ ದೂರ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಅಲ್ಲಿನ ಗಾಳಿಯನ್ನು ಶುದ್ಧಗೊಳಿಸಲು ಸಹ ಇದು ಸಹಕಾರಿಯಾಗಿದೆ.
ಬಾತ್ ರೂಮ್ ನಲ್ಲಿ ವಾಸನೆ
ಹಗುರವಾದ ಪರಿಮಳ(Smell) ಅಥವಾ ಸುವಾಸನೆಗಾಗಿ ಸ್ನಾನಗೃಹದಲ್ಲಿ ಏನನ್ನಾದರೂ ಸಿಂಪಡಿಸಿ. ಇದು ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ. ಬಾತ್ ರೂಮ್ ನಲ್ಲಿ ವಾಸನೆ ಬರುತ್ತಿದ್ದರೆ ಇದು ನಿಮ್ಮ ಮನಸಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.