Asianet Suvarna News Asianet Suvarna News

ಬರೀ negative thoughts ಬರುತ್ತಾ? ತಪ್ಪಿಸಿಕೊಳ್ಳೋದ್ ಹೀಗೆ..

ಕೆಲವೊಮ್ಮೆ ತಲೆಯಲ್ಲಿ ನೆಗೆಟಿವ್ ಯೋಚನೆಗಳ ಹೊರತಾಗಿ ಬೇರೇನೂ ಬರುವುದೇ ಇಲ್ಲ ಎಂಬ ಮಟ್ಟಕ್ಕೆ ಹೋಗುತ್ತದೆ. ನಮ್ಮ ಯೋಚನೆಗಳು ನಮ್ಮ ನಿಯಂತ್ರಣದಲ್ಲೇ ಇರುವುದಿಲ್ಲ. ಅವುಗಳಿಂದ ಹೊರ ಬರಲು ಸರಳ ಪರಿಹಾರ ಇಲ್ಲಿವೆ.

How to overcome negative thoughts skr
Author
Bangalore, First Published Jan 4, 2022, 12:14 PM IST

ನಕಾರಾತ್ಮಕ ಯೋಚನೆ(negative thoughts)ಯಿಂದ ಯಾವುದಾದರೂ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೀರಾ? ಒಂದು ವೇಳೆ ಹಾಗೆ ನೆಗೆಟಿವ್ ಯೋಚನೆಗಳನ್ನಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಹುಡುಕದರೆ ಒಂದೋ ತಪ್ಪು ಮಾಡಿರುತ್ತೀರಿ, ಇಲ್ಲವೇ ಅಪರಾಧವೇ ಮಾಡಿರುತ್ತೀರಿ! ನೆಗೆಟಿವ್ ಯೋಚನೆಗಳು ಮನಸ್ಸನ್ನು ಕೆಡಿಸುವ ಜೊತೆಗೆ, ದೈನಂದಿನ ಬದುಕಿನ ಮಧ್ಯೆ ನುಸುಳಿ ಬದುಕನ್ನೇ ಹಾಳುಗೆಡವುತ್ತವೆ. ನೆಗೆಟಿವ್ ಥಿಂಕಿಂಗ್‌ನ ಪರಿಣಾಮ ಸುತ್ತಮುತ್ತಲಿನವರ ಮೇಲಷ್ಟೇ ಅಲ್ಲದೆ ಸ್ವತಃ ಯೋಚಿಸುತ್ತಿರುವವರ ಮೇಲೂ ನೆಗೆಟಿವ್ ಆಗಿಯೇ ಆಗುತ್ತದೆ. ಆದರೆ, ಈ ನೆಗೆಟಿವ್ ಯೋಚನೆಗಳಿಂದ ಹೊರ ಬರಬೇಕೆಂದು ಮನಸ್ಸು ಮಾಡಿದಿರಾದರೆ ಮಾತ್ರ ಖಂಡಿತಾ ದಾರಿಗಳು ಇದ್ದೇ ಇವೆ. ಒಮ್ಮೆ ಇವುಗಳಿಂದ ಕಳಚಿಕೊಂಡು ಪಾಸಿಟಿವ್‌ನತ್ತ ಮುಖ ಮಾಡಿದರೆ ಬದುಕೂ ಪಾಸಿಟಿವ್‌(positive)ಗಳನ್ನೇ ನಿಮಗೆ ತಂದು ಕೊಡಲಿದೆ. ಅರ್ಧ ಬಾಗಿಲು ಮುಚ್ಚಿದೆ ಎಂದು ನೋಡುವುದಕ್ಕಿಂತ ಇನ್ನರ್ಧ ಬಾಗಿಲು ತೆರೆದಿದೆಯಲ್ಲಾ ಎಂದು ನೋಡುವ ಮನೋಧರ್ಮ ನಮ್ಮದಾಗಬೇಕು. ಅಂದರೆ ನಮ್ಮ ಬಳಿ ಏನಿಲ್ಲ ಎಂದು ಯೋಚಿಸುವ ಬದಲು ಏನೆಲ್ಲ ಇದೆ ಎಂಬುದರ ಬಗ್ಗೆ ಯೋಚಿಸೋಣ. ಹಾಗಿದ್ದರೆ ನೆಗೆಟಿವ್ ಯೋಚನೆಗಳಿಂದ ಕಳಚಿಕೊಳ್ಳುವುದು ಹೇಗೆ?

ಸ್ಮೈಲ್(smile)
ಇಂದಿನ ಜೀವನಶೈಲಿ ಎಷ್ಟೊಂದು ಒತ್ತಡದಾಯಕವಾಗಿದೆ ಎಂದರೆ ನಾವು ದಿನದಲ್ಲಿ ಒಮ್ಮೆಯಾದರೂ ಸ್ಮೈಲ್ ಮಾಡಿದರೆ ಹೆಚ್ಚು ಎನ್ನುವಂತಾಗಿದೆ. ಬದುಕಿನಲ್ಲಿ ನಗುವಿಗಿಂತಾ ಹೆಚ್ಚಾದುದು ಬೇರೊಂದಿಲ್ಲ. ಹಾಗಾಗಿ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಕನ್ನಡಿ(mirror) ಮುಂದೆ ನಿಂತಾಗಲೆಲ್ಲ ಸ್ಮೈಲ್ ಮಾಡಿ. ಯಾರೇ ಪರಿಚಯದವರು ಕಂಡರೂ ಸ್ಮೈಲ್ ಮಾಡಿ. ಅಪರಿಚಿತ ಪುಟ್ಟ ಮಕ್ಕಳಿಗೂ ಸ್ಮೈಲ್ ಮಾಡಿ. ಫೋನಿನಲ್ಲಿ ಮಾತನಾಡುವ ಮುಂಚೆ ನಗು ತಂದುಕೊಂಡು ಮಾತನಾಡಿ. ಇದರಿಂದ ಮೂಡ್ ಬದಲಾಗಿ ಒತ್ತಡ ಕಡಿಮೆಯಾಗುತ್ತದೆ.

ಧ್ಯಾನ(meditation)
ಕಾಡುವ ಸಾವಿರಾರು ಯೋಚನೆಗಳ ನಡುವೆ ನಾವು ಏಕಾಗ್ರತೆ ಸಾಧಿಸುವುದನ್ನು, ಮೈಂಡ್‌ಗೆ ಸ್ವಲ್ಪ ಬಿಡುವು ಕೊಡುವುದನ್ನೇ ಮರೆತು ಬಿಟ್ಟಿರುತ್ತೇವೆ. ಇದರಿಂದ ಕೂಡಾ ಅದು ನೆಗೆಟಿವ್ ಯೋಚನೆಗಳ ಜಾಲದಲ್ಲಿ ಸಿಲುಕಿದಾಗ ಹೊರಬರಲು ತಿಣುಕಾಡುತ್ತದೆ. ಹಾಗಾಗಿ, ಪ್ರತಿದಿನ ಒಂದಿಷ್ಟು ಹೊತ್ತು ಧ್ಯಾನ ಮಾಡಿ ಎಲ್ಲ ಯೋಚನೆಗಳಿಗೆ ಪೂರ್ಣ ವಿರಾಮ ಹಾಕಿ. ಯೋಗ(yoga) ಕೂಡಾ ನಿಮ್ಮ ಗಮನವನ್ನು ಉಸಿರಿನ ಮೇಲೆ ಕೇಂದ್ರೀಕರಿಸುವಂತೆ ಮಾಡುತ್ತದೆ.  ಇವೆರಡೂ ವಿಧಾನದಲ್ಲಿ ಹೆಚ್ಚು ರಿಲ್ಯಾಕ್ಸ್(relax) ಆಗುತ್ತೀರಿ. ಅಲ್ಲದೆ, ಜಗತ್ತಿನ ಎಲ್ಲ ವಿಷಯಗಳನ್ನೂ ತಲೆಯಲ್ಲಿ ತುಂಬಿಸಿಕೊಳ್ಳುವ ಬದಲು ನಿಮಗೆಷ್ಟು ಅಗತ್ಯವೋ ಅಷ್ಟನ್ನೇ ಯೋಚಿಸಿ. 

Vaastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..

ಸಹವಾಸ
ಮೊದಲೇ ನೆಗೆಟಿವ್ ಯೋಚನೆಗಳು ಜಾಸ್ತಿ. ನಿಮ್ಮ ಸಂಗದಲ್ಲಿರುವವರೂ ನೆಗೆಟಿವ್ ಆಗೇ ಯೋಚಿಸಿ, ನೆಗೆಟಿವ್ ಕಾಮೆಂಟ್ ಮಾಡುತ್ತಾ, ನಿಮ್ಮ ಯೋಚನೆಗಳು ಸರಿಯೆನ್ನುವಂಥ ಮಾತನಾಡುತ್ತಿದ್ದರೆ,  ನಿಮ್ಮ ಕತೆ ಮುಗಿಯಿತಷ್ಟೇ. ಗಾಸಿಪ್ ಮಾಡುವವರೊಂದಿಗೆ ಸಮಯ ವ್ಯರ್ಥ(time waste) ಮಾಡಬೇಡಿ. ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬುದನ್ನು ಕೇಳಿದ್ದೀರಷ್ಟೇ. ಹಾಗಾಗಿ, ಸದಾ ಪಾಸಿಟಿವ್ ಆಗಿ ಮಾತನಾಡುವವರೊಡನೆ ಸ್ನೇಹ ಮಾಡಿ. ನಿಮ್ಮನ್ನು ಎಲ್ಲದಕ್ಕೂ ಪ್ರೇರೇಪಿಸುತ್ತಾ ಉತ್ಸಾಹದ ಚಿಲುಮೆಯಾಗಿರುವವರ ಸಂಗದಲ್ಲಿರಿ. ಸಹವಾಸದಿಂದ ಸರಿಯಾದ ಯೋಚನೆಗಳು ಬರಲಾರಂಭಿಸುತ್ತವೆ.

ಮೇಷಕ್ಕೆ Coffee Addiction, ನಿಮ್ಮ ರಾಶಿಯ ವ್ಯಸನ ಏನು ನೋಡಿ..

ಕೌಂಟರ್ ಕೊಡಿ
ನಕಾರಾತ್ಮಕ ಯೋಚನೆಗಳು ಬಂದಾಗೆಲ್ಲ ಅದಕ್ಕೆ ವಿರುದ್ಧವಾಗಿ ಪ್ರಯತ್ನಪೂರ್ವಕವಾಗಿ ಯೋಚಿಸಿ. ಉದಾಹರಣೆಗೆ, ಈ ಬಾರಿ ನನ್ನ ಸಂಬಳ(salary) ಹೆಚ್ಚಾಗಿಲ್ಲ. ಬಹುಷಃ ನನ್ನ ನಸೀಬೇ ಸರಿ ಇಲ್ಲ ಎಂದುಕೊಳ್ಳುವ ಬದಲು, ಈ ಬಾರಿ ಸಂಬಳ ಹೆಚ್ಚಲಿಲ್ಲ ನಿಜ. ಮುಂದಿನ ಬಾರಿಗೆ ಇನ್ನೂ ಹೆಚ್ಚು ಪ್ರಯತ್ನ ಹಾಕಿ ಹೆಚ್ಚು ಸಂಬಳ ಪಡೆದೇ ತೋರಿಸುತ್ತೇನೆ ಎಂದುಕೊಳ್ಳಿ. ಕೊರೋನಾ ಕಾಲದಲ್ಲೂ ಸಂಬಳ ಬರುತ್ತಿದೆಯಲ್ಲ, ನಾನು ಅದೃಷ್ಟವಂತನೇ ಇರಬೇಕು ಎಂದುಕೊಳ್ಳಿ. 

ಜವಾಬ್ದಾರರಾಗಿ(be responsible)
ಯಾವಾಗಲೂ ಸಂತ್ರಸ್ತರಂತೆ ಅದಿಲ್ಲ, ಇದಿಲ್ಲ, ಮೋಸವಾಯ್ತು, ಅಂದುಕೊಂಡಿದ್ದಾಗಿಲ್ಲ, ದುರದೃಷ್ಟ, ಹಣೆಬರಹ ಎಂದು ಹಳಿಯುತ್ತಾ ಕೂರಬೇಡಿ. ಬದಲಿಗೆ ನನ್ನ ಜೀವನದ ಜವಾಬ್ದಾರಿ ನಾನೇ ತಗೋತೀನಿ. ಇನ್ನು ಮುಂದೆ ಎಲ್ಲ ನಿರ್ಧಾರಗಳನ್ನು ಸರಿಯಾಗಿ ಮಾಡಿ ಯಶಸ್ಸು ಪಡೀತೀನಿ ಎಂದುಕೊಳ್ಳಿ. ನಿಮ್ಮ ಬದುಕಿನ ಸಂಪೂರ್ಣ ಹೊಣೆ ಹೊತ್ತುಕೊಳ್ಳಿ. 

ಪಾಸಿಟಿವ್ ಕೋಟ್ಸ್(quotes)
ನಿಮ್ಮ ಮನೆಯ ಗೋಡೆಗಳು, ಫ್ರಿಡ್ಜ್, ಕಂಪ್ಯೂಟರ್ ಸ್ಕ್ರೀನ್, ಮೊಬೈಲ್ ವಾಲ್‌ಪೇಪರ್- ಹೀಗೆ ಎಲ್ಲ ಕಡೆ ಪಾಸಿಟಿವ್ ಕೋಟ್‌ಗಳನ್ನು ಹೆಚ್ಚಿಸಿ. ಸದಾ ಕಣ್ಣಿಗೆ ಪಾಸಿಟಿವ್ ಕೋಟ್‌ಗಳು ಬೀಳುತ್ತಿದ್ದರೆ ಅವು ನಿಮಗೆ ಪಾಸಿಟಿವ್ ಆಗಿ ಯೋಚಿಸಲು ರಿಮೈಂಡರ್‌ನಂತೆ ಕೆಲಸ ಮಾಡುತ್ತವೆ. 
 

Follow Us:
Download App:
  • android
  • ios