ಫ್ಯಾಕ್ಟರಿಯಲ್ಲಿ ನಷ್ಟ ಹೆಚ್ಚಾಗುತ್ತಿದ್ರೆ ಈ ವಾಸ್ತು ಟಿಪ್ಸ್ ಟ್ರೈ ಮಾಡಿ
ವಾಸ್ತು ಶಾಸ್ತ್ರದಲ್ಲಿ, ಮನೆಗೆ ಮಾತ್ರವಲ್ಲದೆ ಕಾರ್ಖಾನೆ ಅಥವಾ ಫ್ಯಾಕ್ಟರಿಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಸಹ ಉಲ್ಲೇಖಿಸಲಾಗಿದೆ. ನಿಮ್ಮ ಕಾರ್ಖಾನೆಯು ನಷ್ಟದಲ್ಲಿ ನಡೆಯುತ್ತಿದ್ದರೆ, ಈ ನಿಖರವಾದ ವಾಸ್ತು ಸಲಹೆಗಳನ್ನು ತಿಳಿದುಕೊಳ್ಳಿ.
ಸಂತೋಷ ಮತ್ತು ಸಮೃದ್ಧಿಗಾಗಿ ವಾಸ್ತು ಶಾಸ್ತ್ರದಲ್ಲಿ ಅನೇಕ ರೀತಿಯ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಈ ನಿಯಮಗಳನ್ನು ಅನುಸರಿಸುವ ಮೂಲಕ, ತಾಯಿ ಲಕ್ಷ್ಮಿ(Goddess Lakshmi) ಮನೆಗೆ ಆಗಮಿಸುತ್ತಾಳೆ ಎಂದು ನಂಬಲಾಗಿದೆ.
ನೀವು ಫ್ಯಾಕ್ಟರಿಯನ್ನು(Factory) ನಡೆಸುತ್ತಿದ್ದರೆ, ವಾಸ್ತುವಿನ ನಿಯಮಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಚಾಲನೆಯಲ್ಲಿರುವ ಕಾರ್ಖಾನೆಯನ್ನು ಮುಚ್ಚಿದ್ದರೆ ಮತ್ತು ಸಾಲವಿದ್ದರೆ, ಈ ವಾಸ್ತು ಕ್ರಮಗಳನ್ನು ತೆಗೆದುಕೊಳ್ಳಿ..
ಫ್ಯಾಕ್ಟರಿಯ ನೆಲದ ಇಳಿಜಾರು ಈಶಾನ್ಯ ದಿಕ್ಕಿನಲ್ಲಿರಬೇಕು. ಇಳಿಜಾರು ದಕ್ಷಿಣ(South) ಅಥವಾ ಪಶ್ಚಿಮದ ಕಡೆಗೆ ಇದ್ದರೆ ಅದು ಭಾರಿ ಹಾನಿ ಉಂಟುಮಾಡಬಹುದು. ಈ ಇಳಿಜಾರನ್ನು ಉತ್ತರ ಅಥವಾ ಪೂರ್ವಕ್ಕೆ ಚಲಿಸೋ ಹಾಗೆ ಮಾಡೋದು ಪ್ರಯೋಜನಕಾರಿ.
ಫ್ಯಾಕ್ಟರಿಯ ನೆಲದಂತೆ, ಛಾವಣಿಯ ಇಳಿಜಾರು ಸಹ ಈಶಾನ್ಯದ ಕಡೆಗೆ ಇರಬೇಕು. ಇಲ್ಲದಿದ್ದರೆ ನಷ್ಟ(Loss) ಸಂಭವಿಸುತ್ತೆ.
ಕಾರ್ಖಾನೆಯಲ್ಲಿ ಬೇರೆ ಯಾವುದೇ ದಿಕ್ಕು ಎತ್ತರದಲ್ಲಿದ್ದರೆ, ನೈಋತ್ಯ ಕೋನದಲ್ಲಿ ಒಂದು ಕಂಬವನ್ನು ಇರಿಸಿ, ಅದು ಎಲ್ಲದರಿಕ್ಕಿಂತ ಎತ್ತರದಲ್ಲಿರಲಿ. ಹೀಗೆ ಮಾಡೋದರಿಂದ ಹೆಸರು, ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಗುತ್ತೆ.
ಜನರೇಟರ್ (Generator) ಅಥವಾ ಬಾಯ್ಲರನ್ನು ಆಗ್ನೇಯ ಕೋನದಲ್ಲಿ ಇರಿಸಿ. ನೀರಿಗಾಗಿ ಬೋರ್ ವೆಲ್ ಮಾಡೋದಾದ್ರೆ ಈಶಾನ್ಯ ಕೋನದಲ್ಲಿ ಮಾಡಬೇಕು.
ಈಶಾನ್ಯ ಕೋನವನ್ನು ಎಂದಿಗೂ ಒಡೆಯಬಾರದು. ವಾಸ್ತು ಶಾಸ್ತ್ರದಲ್ಲಿ(Vastu Shastra) ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಭಾರವಾದ ಸರಕುಗಳನ್ನು ಈ ಸ್ಥಳದಲ್ಲಿ ಇಡಬಾರದು.
ಕಾರ್ಖಾನೆಯೊಳಗಿನ ತೆರೆದ ಜಾಗದಲ್ಲಿ ಮರಗಳನ್ನು(Trees) ನೆಡುವ ಮೊದಲು, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ದೊಡ್ಡ ಮರಗಳನ್ನು ನೆಡಬೇಕು ಮತ್ತು ಪೂರ್ವ ಅಥವಾ ಉತ್ತರದಲ್ಲಿ ಲಾನ್ ಮತ್ತು ಸಣ್ಣ ಮರಗಳನ್ನು ನೆಡಬೇಕು ಎಂಬುದನ್ನು ನೆನಪಿನಲ್ಲಿಡಿ.