Asianet Suvarna News Asianet Suvarna News

Vastu Tips: ಈ ಆಕಾರದ ಭೂಮಿ ಖರೀದಿಸಿದ್ರೆ ಲೈಫ್ ಬರ್ಬಾದ್ ಆಗೋದು ಗ್ಯಾರಂಟಿ!

ಮನೆ ಅಥವಾ ಜಮೀನು ಖರೀದಿಸುವುದು ಪ್ರತಿಯೊಬ್ಬರ ಜೀವನದ ಮೈಲಿಗಲ್ಲು. ಇದಕ್ಕಾಗಿ ಬಹಳಷ್ಟು ಶ್ರಮದ ದುಡಿಮೆಯ ವ್ಯಯವಾಗುತ್ತದೆ. ಹಾಗಿದ್ದಾಗ, ಭೂಮಿ ಖರೀದಿ ವೇಳೆ ವಾಸ್ತುವಿನ ನಿಯಮಕ್ಕೆ ಗಮನ ಹರಿಸದಿದ್ದರೆ ಹೇಗೆ?

Vastu Tips Do not buy land of this size even by mistake it will ruin your life skr
Author
First Published Feb 20, 2023, 2:40 PM IST

ವಾಸ್ತು ಶಾಸ್ತ್ರದ ಪ್ರಕಾರ ಹೊಸ ಮನೆಯನ್ನು ಖರೀದಿಸುವಾಗ, ಅದನ್ನು ನಿರ್ಮಿಸುವಾಗ ಅಥವಾ ಮನೆಯನ್ನು ಅಲಂಕರಿಸುವಾಗ ವಾಸ್ತು ನಿಯಮಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಲವರು ಮನೆ ಕಟ್ಟುವಾಗ ವಾಸ್ತು ನಿಯಮಗಳನ್ನು ಪಾಲಿಸುತ್ತಾರೆ. ಆದರೆ, ಭೂಮಿ ಖರೀದಿಸುವಾಗ ಅಲ್ಲ.ಅವರು ನಂತರ ಅದರ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ವಾಸ್ತವವಾಗಿ, ವಾಸ್ತು ಶಾಸ್ತ್ರದಲ್ಲಿ ಭೂಮಿಗೂ ಅನೇಕ ವಿಷಯಗಳನ್ನು ಬರೆಯಲಾಗಿದೆ. ಭೂಮಿಯ ವಿವಿಧ ಆಕಾರಗಳು ವ್ಯಕ್ತಿಯ ಜೀವನದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತವೆ.

ಅದಕ್ಕಾಗಿಯೇ ಮನೆ ಖರೀದಿಸುವಾಗಲೂ ಮನೆಗಾಗಿ ವಾಸ್ತು ಸಲಹೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಭೂಮಿ ಖರೀದಿಸುವಾಗಲೂ ವಾಸ್ತು ನಿಯಮಗಳನ್ನು ಪಾಲಿಸಬೇಕು.. ಹಾಗಾದರೆ ಯಾವ ರೀತಿಯ ಭೂಮಿ ನಿಮಗೆ ಹಾನಿಕಾರಕ ನೋಡೋಣ.

ನಿವೇಶನ ಆಯ್ಕೆ ಮಾಡುವಾಗ ಪರಿಗಣಿಸಬೇಕಾದ ಪ್ರಮುಖ ಅಂಶವೆಂದರೆ ಅದರ ಆಕಾರ. ನಿವೇಶನದ ಅನಿಯಮಿತ ಆಕಾರ ಮತ್ತು ವಾಸ್ತು ಪ್ರಕಾರ ಅದರ ಪರಿಣಾಮ ನೋಡೋಣ. 

ಈ ರೀತಿಯ ಭೂಮಿ ವ್ಯಕ್ತಿಯ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.. 

ವೃತ್ತ, U ಅಥವಾ L-ಆಕಾರದ ಪ್ಲಾಟ್‌ಗಳು ಕಾಣೆಯಾದ ವಿಭಾಗವನ್ನು ಅವಲಂಬಿಸಿ ಗಂಭೀರ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ದುಂಡಗಿನ, ಅಂಡಾಕಾರದ, ತ್ರಿಕೋನ, ಅರ್ಧ ವೃತ್ತ, ಮತ್ತು ನಕ್ಷತ್ರಾಕಾರದ ಪ್ಲಾಟ್‌ಗಳನ್ನು ಸಹ ತಪ್ಪಿಸಬೇಕು. ಮೂಲೆಗಳಲ್ಲಿ ಯಾವುದೇ ಪ್ರಮುಖ ವಿಸ್ತರಣೆಗಳು, ಕಡಿತಗಳು ಅಥವಾ ಇಳಿಜಾರುಗಳನ್ನು ಹೊಂದಿರುವ ಪ್ಲಾಟ್‌ಗಳನ್ನು ತಪ್ಪಿಸಿ.

March Festival Calendar 2023: ಯುಗಾದಿ, ಹೋಳಿ, ರಾಮನವಮಿ.. ಹಬ್ಬಗಳ ರಸದೌತಣ ಬಡಿಸುವ ಮಾರ್ಚ್

ಸಿಂಹ ಮುಖ ನಿವೇಶನ: ಸಿಂಹದ ಮುಖದಾಕಾರದಲ್ಲಿರುವ ನಿವೇಶನವು ವಾಣಿಜ್ಯ ಕಟ್ಟಡಕ್ಕೆ ಸೂಕ್ತವಾಗಿದೆ.
ತ್ರಿಕೋನ ಆಕಾರದ ನಿವೇಶನ: ವಿಶೇಷವಾಗಿ ಸರ್ಕಾರದಿಂದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಗನಿಗೆ ಹಾನಿಕಾರಕವಾಗಿದೆ.
ಅಂಡಾಕಾರ ಅಥವಾ ಅರ್ಧವೃತ್ತ: ಈ ಆಕಾರದ ನಿವೇಶನ ಅಶುಭ, ವಿವಿಧ ಆರೋಗ್ಯ ಸಮಸ್ಯೆಗಳು, ನಷ್ಟಗಳು ಮತ್ತು ಮನೆಯಲ್ಲಿ ಸಂತೋಷದ ಕೊರತೆಯನ್ನು ಉಂಟು ಮಾಡುತ್ತದೆ.
ವೃತ್ತಾಕಾರ: ಈ ನಿವೇಶನವು ವೃತ್ತಾಕಾರದ ಕಟ್ಟಡಗಳನ್ನು ನಿರ್ಮಿಸಲು ಮಾತ್ರ ಒಳ್ಳೆಯದು.
ಬಹು ಭುಜಾಕೃತಿಯ ನಿವೇಶನ: ಇಂಥ ಆಹಾರವು ಮೊಕದ್ದಮೆಗಳನ್ನು ಆಹ್ವಾನಿಸುತ್ತದೆ.
ಬಕೆಟ್ ಆಕಾರದ ನಿವೇಶನ: ಸಾಲಕ್ಕೆ ಕಾರಣವಾಗುತ್ತದೆ.
ಚಕ್ರದ ಆಕಾರದ ನಿವೇಶನ: ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ.
ಬಿಲ್ಲು ಆಕಾರದ ನಿವೇಶನ: ಭಯವನ್ನು ಆಕರ್ಷಿಸುತ್ತದೆ.
ಡ್ರಮ್ ಆಕಾರದ ನಿವೇಶನ: ಕುಟುಂಬ ಸದಸ್ಯರ ನಷ್ಟ ಮತ್ತು ದ್ವೇಷ ಹೆಚ್ಚಾಗುತ್ತದೆ.
ವರಾಹನ ಮುಖಿ ಅಕಾರ: ಸಂಬಂಧಿಕರ ಸಾವಿಗೆ ಕಾರಣವಾಗುತ್ತದೆ.
ಆಮೆ ಆಕಾರದ ನಿವೇಶನ: ಮಾಲೀಕರು ಮತ್ತು ಅವರ ಕುಟುಂಬ ಸದಸ್ಯರ ಸೆರೆವಾಸ.
ಕೈ ಫ್ಯಾನ್ ಆಕಾರದ ನಿವೇಶನ: ಸಂಪತ್ತಿನ ನಷ್ಟಕ್ಕೆ ಕಾರಣವಾಗುತ್ತದೆ.
ಗರಿಗಳ ಆಕಾರದ ನಿವೇಶನ: ಅಶುಭ ಮತ್ತು ದುರಾದೃಷ್ಟವನ್ನು ಉಂಟು ಮಾಡುತ್ತದೆ.
ನಕ್ಷತ್ರಾಕಾರದ ನಿವೇಶನ: ಕಾನೂನು ಮೊಕದ್ದಮೆಗಳಿಗೆ ಕಾರಣವಾಗುತ್ತದೆ.

ಈ ಬಗ್ಗೆ ವಿಶೇಷ ಗಮನ ಕೊಡಿ
ಇದರ ಹೊರತಾಗಿ, ನದಿಯ ಸವೆತದ ಸಮೀಪವಿರುವ ಭೂಮಿ ಮತ್ತು ವಕ್ರವಾದ ಭೂಮಿ ಹಿಂದುಳಿದ ಬುದ್ಧಿವಂತಿಕೆ ಅಥವಾ ಅನಕ್ಷರತೆಗೆ ಜನ್ಮ ನೀಡುತ್ತದೆ. ಯಾವ ಭೂಮಿಯಲ್ಲಿ ಹಳ್ಳವಿದೆಯೋ ಆ ಭೂಮಿ ಸುಳ್ಳಿಗೆ ಜನ್ಮ ನೀಡುತ್ತದೆ. ಇದಲ್ಲದೇ ಹೊಂಡದಲ್ಲಿ ಮನೆ ಕಟ್ಟುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇದಲ್ಲದೇ ಅಡ್ಡದಾರಿಯಲ್ಲಿ ಮನೆ ಕಟ್ಟುವುದರಿಂದ ಕೀರ್ತಿ ಹಾಳಾಗುತ್ತದೆ.

Benefits of Silver: ಬೆಳ್ಳಿ ಧರಿಸಿದವರ ಬಾಳೇ ಬಂಗಾರ! ಕಾರಣವಿದು..

ನಿವೇಶನ ಈ ಆಕಾರ ಇರಬೇಕು..
ಉತ್ತಮ ವಾಸ್ತು ಹೊಂದಿರುವ ನಿವೇಶನದ ಆಕಾರವು ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ. ಅದರಂತೆ ಚೌಕಾಕಾರ ಅಥವಾ ಆಯತಾಕಾರ, ತಪ್ಪಿದರೆ ಅಷ್ಟ ಭುಜಾಕಾರ, ಗೋ ಮುಖದ ಆಕಾರದಲ್ಲಿರುವ ಭೂಮಿಯು ಖರೀದಿಗೆ ಯೋಗ್ಯವಾಗಿರುತ್ತದೆ. 
 

Follow Us:
Download App:
  • android
  • ios