- Home
- Astrology
- Vaastu
- ದುಡಿದ ಹಣ ಎಲ್ಲಿ ಮಾಯವಾಗ್ತಿದೆ ಅಂತ ಗೊತ್ತಾಗ್ತಿಲ್ವಾ? ಮನೆಯ ಈ ಮೂಲೆಗಳನ್ನೊಮ್ಮೆ ಚೆಕ್ ಮಾಡಿ!
ದುಡಿದ ಹಣ ಎಲ್ಲಿ ಮಾಯವಾಗ್ತಿದೆ ಅಂತ ಗೊತ್ತಾಗ್ತಿಲ್ವಾ? ಮನೆಯ ಈ ಮೂಲೆಗಳನ್ನೊಮ್ಮೆ ಚೆಕ್ ಮಾಡಿ!
Vastu secrets kannada: ಎಷ್ಟೇ ದುಡಿದರೂ ಕೈಯಲ್ಲಿ ಕಾಸು ಉಳಿಯುತ್ತಿಲ್ಲ, ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಘ್ನಗಳು ಎದುರಾಗುತ್ತಿವೆ ಎಂದು ಕೊರಗುತ್ತಿದ್ದೀರಾ? ಹಾಗಾದರೆ ಯಾವುದೇ ಪೂಜೆ-ಹೋಮಗಳಿಲ್ಲದೆ, ಕೇವಲ 1 ತಿಂಗಳಲ್ಲಿ ಅದೃಷ್ಟವನ್ನೇ ಬದಲಾಯಿಸಿಕೊಳ್ಳುವ ಅದ್ಭುತ ವಾಸ್ತು ಮ್ಯಾಜಿಕ್ ಇಲ್ಲಿದೆ.
ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ?
ದುಡಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ?
ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಉಳಿಯುತ್ತಿಲ್ಲ, ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಘ್ನಗಳು ಎದುರಾಗುತ್ತಿವೆ ಎಂದಾದರೆ ಅದಕ್ಕೆ ಮನೆಯಲ್ಲಿರುವ ‘ನಕಾರಾತ್ಮಕ ಶಕ್ತಿ’ಯೇ (Negative Energy) ಮುಖ್ಯ ಕಾರಣ. ದುಬಾರಿ ಪೂಜೆ-ಹೋಮಗಳಿಲ್ಲದೆ, ಮನೆಯಲ್ಲಿರುವ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿಕೊಂಡರೆ ಕೇವಲ ಒಂದೇ ತಿಂಗಳಲ್ಲಿ ನಿಮ್ಮ ಕಷ್ಟಗಳೆಲ್ಲಾ ಮಾಯವಾಗುತ್ತವೆ!
ಮನೆಗಳಲ್ಲಿ ಅಡಗಿರುವ ಕಸದ ರಾಶಿ
ಭಾರತೀಯ ಮನೆಗಳಲ್ಲಿ ಹಳೆಯ, ನಿರುಪಯುಕ್ತ ವಸ್ತುಗಳನ್ನು ಬಿಸಾಡದೆ ಕೂಡಿಡುವ ಅಭ್ಯಾಸವಿರುತ್ತದೆ. ನೆಲ ಒರೆಸಲು ಹರಿದ ಬಟ್ಟೆಗಳು, ತಲೆಗೆ ಡೈ ಹಚ್ಚಲು ಹಳೆಯ ಟೂತ್‌ಬ್ರಶ್, ಯಾವಾಗಲೋ ಬೇಕಾಗಬಹುದೆಂದು ಕಪಾಟಿನಲ್ಲಿ ತುರುಕಿಟ್ಟ ರಾಶಿರಾಶಿ ಪ್ಲಾಸ್ಟಿಕ್ ಕವರ್‌ಗಳು ಮನೆಯಲ್ಲೇ ಉಳಿದಿರುತ್ತವೆ.
ಅನಗತ್ಯ ವಸ್ತುಗಳನ್ನು ಹೊರಹಾಕಿದರೆ 'ಕೇತು' ಆಕ್ಟಿವ್
ಅನಗತ್ಯ ವಸ್ತುಗಳನ್ನು ಹೊರಹಾಕಿದರೆ 'ಕೇತು' ಆಕ್ಟಿವ್
ವಾಸ್ತು ಶಾಸ್ತ್ರದ ಪ್ರಕಾರ, ಉಪಯೋಗಕ್ಕೆ ಬಾರದ ಹಳೆಯ ವಸ್ತುಗಳನ್ನು ಮನೆಯಿಂದ ಹೊರಹಾಕಿದಾಗ ಜ್ಯೋತಿಷ್ಯದಲ್ಲಿ ‘ಕೇತು’ (Ketu) ಗ್ರಹ ಸಕ್ರಿಯವಾಗುತ್ತದೆ. ಕೇತು ಎಂದರೆ ‘ತ್ಯಾಗ ಅಥವಾ ವಿರಕ್ತಿ’ (Detachment). ಅಗತ್ಯವಿಲ್ಲದ ವಸ್ತುಗಳ ವ್ಯಾಮೋಹ ಬಿಟ್ಟು ಹೊರಹಾಕಿದಾಗ ಜೀವನದಲ್ಲಿ ಹೊಸ ಮತ್ತು ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ.
ಇಂದೇ ಮನೆಯಿಂದ ಹೊರಹಾಕಬೇಕಾದ ವಸ್ತುಗಳಿವು!
ಇಂದೇ ಮನೆಯಿಂದ ಹೊರಹಾಕಬೇಕಾದ ವಸ್ತುಗಳಿವು!
ಮನೆಯಲ್ಲಿ ನಿಂತುಹೋಗಿರುವ ಅಥವಾ ಕೆಟ್ಟಿರುವ ಗಡಿಯಾರಗಳು.
ಒಡೆದ ಕನ್ನಡಕಗಳು ಮತ್ತು ಬಿರುಕು ಬಿಟ್ಟ ಗಾಜಿನ ವಸ್ತುಗಳು.
ಬಳಕೆಯಾಗದ ಹಳೆಯ ಪ್ಲಾಸ್ಟಿಕ್ ಕವರ್‌ಗಳು ಮತ್ತು ಬಾಟಲಿಗಳು.
ವರ್ಷಗಳಿಂದ ಮುಟ್ಟದ ಹಳೆಯ ಹರಿದ ಬಟ್ಟೆಗಳು ಹಾಗೂ ಬೂಟು-ಚಪ್ಪಲಿಗಳು.
ಕೇವಲ 1 ತಿಂಗಳಲ್ಲಿ ಕಾಣುವ ವಾಸ್ತು ಪವಾಡ
ಕೇವಲ 1 ತಿಂಗಳಲ್ಲಿ ಕಾಣುವ ವಾಸ್ತು ಪವಾಡ
ಮನೆಯ ಪ್ರತಿಯೊಂದು ಮೂಲೆ ಸ್ವಚ್ಛವಾದಾಗ ಮನಸ್ಸಿನ ಒತ್ತಡ ತಾನಾಗಿಯೇ ಕಡಿಮೆಯಾಗುತ್ತದೆ.
ತಿಂಗಳುಗಳಿಂದ ನಿಂತುಹೋಗಿದ್ದ ಕೆಲಸಗಳು ಅಡೆತಡೆಗಳಿಲ್ಲದೆ ಸರಾಗವಾಗಿ ಪೂರ್ಣಗೊಳ್ಳುತ್ತವೆ.
ಹಣಕಾಸಿನ ಹರಿವು ಸುಗಮವಾಗಿ, ವ್ಯಾಪಾರ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಹಣ ಲಾಭ ತಂದುಕೊಡಲು ಆರಂಭಿಸುತ್ತದೆ!
ಇದು ಒಂದು ದಿನದ ಕೆಲಸವಲ್ಲ, ಜೀವನಶೈಲಿ
ಮನೆಯನ್ನು ‘ಡಿಕ್ಲಟರ್’ (ಅನಗತ್ಯ ವಸ್ತು ಮುಕ್ತ) ಮಾಡುವುದು ಒಂದೇ ದಿನದ ಈವೆಂಟ್ ಅಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಮನೆಯವರೆಲ್ಲರೂ ಒಟ್ಟಾಗಿ ನಿರುಪಯುಕ್ತ ವಸ್ತುಗಳನ್ನು ತ್ಯಜಿಸಿದರೆ, ನಿಮ್ಮ ಮನೆಯೇ ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ದೇಗುಲವಾಗುತ್ತದೆ.

