ಬಹುತೇಕರು ಮನೆಯಲ್ಲಿರುವ ಅಥವಾ ಬಾತ್‌ರೂಮ್‌ನಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ಉಪ್ಪನ್ನು ಬಳಸುತ್ತಾರೆ. ಉಪ್ಪು ಕೆಟ್ಟ ದೃಷ್ಟಿ ಮತ್ತು ಋಣಾತ್ಮಕ ತರಂಗಗಳನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ ಎಂಬ ನಂಬಿಕೆಯಿದೆ.
vaastu Aug 26 2026
Author: Ashwini HR Image Credits:Getty
Kannada
ಉಪ್ಪು ಸಾಕ್ಷಾತ್ 'ಲಕ್ಷ್ಮೀ' ಸ್ವರೂಪ!
ಉಪ್ಪನ್ನು 'ಲಕ್ಷ್ಮೀ' ದೇವಿ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಸಮುದ್ರದಿಂದ ಉದ್ಭವಿಸಿದ ಕಾರಣ ಉಪ್ಪಿಗೆ ಆಧ್ಯಾತ್ಮಿಕವಾಗಿ ಬಹಳ ಪವಿತ್ರ ಸ್ಥಾನವಿದೆ. ಆದ್ದರಿಂದ ಉಪ್ಪನ್ನು ಬಳಸುವಾಗ ಎಚ್ಚರಿಕೆ ವಹಿಸಿ.
Image credits: Our own
Kannada
ಈ ದಿನಗಳಲ್ಲಿ ಉಪ್ಪನ್ನು ಎಸೆಯಬೇಡಿ!
ಲಕ್ಷ್ಮೀ ಸ್ವರೂಪವಾದ ಉಪ್ಪನ್ನು ಅಮಾವಾಸ್ಯೆ, ಶುಕ್ರವಾರ ಮತ್ತು ಮಂಗಳವಾರದಂದು ಮನೆಯಿಂದ ಹೊರಗೆ ಎಸೆಯಬಾರದು ಅಥವಾ ವಿಲೇವಾರಿ ಮಾಡಬಾರದು. ಇದು ಮನೆಯಲ್ಲಿರುವ ಅದೃಷ್ಟ ಮತ್ತು ಧನಾಗಮನಕ್ಕೆ ಅಡ್ಡಿಯಾಗಬಹುದು.
Image credits: Getty
Kannada
ಉಪ್ಪಿನ ಬದಲು 'ಪಟಿಕ' ಬಳಸಿ!
ಬಾತ್‌ರೂಮ್‌ನಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಲು ಉಪ್ಪಿಗಿಂತಲೂ ಶ್ರೇಷ್ಠವಾದುದು ‘ಪಟಿಕ’. ಉಪ್ಪನ್ನು ಬಾತ್‌ರೂಮ್‌ನಲ್ಲಿ ತೆರೆದಿಟ್ಟರೆ ಅದು ಲಕ್ಷ್ಮೀ ದೇವಿಗೆ ಮಾಡುವ ಅಪಮಾನವೆಂದು ಕೆಲವು ಶಾಸ್ತ್ರಗಳು ಹೇಳುತ್ತವೆ.
Image credits: Social media
Kannada
ಪಟಿಕ ಬಳಸುವ ವಿಧಾನ
ಒಂದು ಸಣ್ಣ ಪಾತ್ರೆಯಲ್ಲಿ ಪಟಿಕದ ಹರಳನ್ನು ಇಟ್ಟು ಬಾತ್‌ರೂಮ್‌ನ ಒಂದು ಮೂಲೆಯಲ್ಲಿ ಇಡಿ. ಇದು ವಾಸ್ತು ದೋಷಗಳನ್ನು ನಿವಾರಿಸಲು ಮತ್ತು ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸದಂತೆ ತಡೆಯಲು ಹೆಚ್ಚು ಪರಿಣಾಮಕಾರಿ.
Image credits: Social media
Kannada
ನೆಮ್ಮದಿಯ ಜೀವನಕ್ಕೆ ಸರಳ ಬದಲಾವಣೆ
ಪವಿತ್ರವಾದ ಉಪ್ಪನ್ನು ಅಡುಗೆಗೆ ಮತ್ತು ಪೂಜಾ ಕಾರ್ಯಗಳಿಗೆ ಸೀಮಿತಗೊಳಿಸಿ, ನಕಾರಾತ್ಮಕ ಶಕ್ತಿ ನಿವಾರಣೆಗೆ ಪಟಿಕವನ್ನು ಬಳಸುವ ಮೂಲಕ ಮನೆಯಲ್ಲಿ ಸುಖ-ಶಾಂತಿ ನೆಲೆಸುವಂತೆ ಮಾಡಿಕೊಳ್ಳಿ.