MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಮಕ್ಕಳನ್ನೂ ಬಿಡ್ತಾ ಇಲ್ವಾ ಒತ್ತಡ: ಇಲ್ಲಿವೆ ವಾಸ್ತು ಟಿಪ್ಸ್

ಮಕ್ಕಳನ್ನೂ ಬಿಡ್ತಾ ಇಲ್ವಾ ಒತ್ತಡ: ಇಲ್ಲಿವೆ ವಾಸ್ತು ಟಿಪ್ಸ್

ಓದು ಅಥವಾ ಮುಂಬರುವ ಪರೀಕ್ಷೆಗಳಿಂದ ನಿಮ್ಮ ಮಕ್ಕಳು ಆಗಾಗ್ಗೆ ಭಯಭೀತರಾಗ್ತಾರಾ ಮತ್ತು ಒತ್ತಡಕ್ಕೊಳಗಾಗ್ತಾರಾ? ಇದು ಒಂದು ಅಥವಾ ಎರಡು ಮಕ್ಕಳ ವಿಷಯವಲ್ಲ ದುರದೃಷ್ಟವಶಾತ್, ಇದು ಇತ್ತೀಚಿನ ದಿನಗಳಲ್ಲಿ ಪ್ರತಿ ಮಗುವಿಗೆ ಸಂಭವಿಸುತ್ತೆ ಮತ್ತು ಇದು ಅಧ್ಯಯನದ ಒತ್ತಡದಿಂದ ಮಾತ್ರ ಎಂದು ನೀವು ಹೇಳಬಹುದು. ಆದರೆ, ಬೇರೆ ರೀತಿಯಲ್ಲಿ ಹೇಳೋದಾದ್ರೆ, ತಪ್ಪಾದ ಸ್ಟಡಿ ಪ್ಲೇಸ್, ಒತ್ತಡದ ಮೂಲ ಕಾರಣ ಎಂದು ವಾಸ್ತು ಹೇಳುತ್ತೆ.

2 Min read
Suvarna News
Published : Apr 08 2023, 03:11 PM IST
Share this Photo Gallery
  • FB
  • TW
  • Linkdin
  • Whatsapp
17

ಇಂದು ಹೆಚ್ಚಿನ ಮಕ್ಕಳು, ಚಿಕ್ಕ ಹದಿಹರೆಯದವರಿಂದ ವಯಸ್ಕರವರೆಗೆ, ಎಲ್ಲರೂ ಕಡಿಮೆ ಏಕಾಗ್ರತೆಯೊಂದಿಗೆ ಆತಂಕ, ಒತ್ತಡದಿಂದ( Stress) ಬಳಲುತ್ತಿದ್ದಾರೆ. ವಿಷಯಗಳನ್ನು ದೀರ್ಘಕಾಲ ನೆನಪಿಟ್ಟುಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಅವರು ಹೇಳೋದನ್ನು ನೀವು ಆಗಾಗ್ಗೆ ಕೇಳಿರಬಹುದು. ಅದಕ್ಕೆ ಮಕ್ಕಳ ಕೋಣೆಯಲ್ಲಿನ ವಾಸ್ತು ದೋಷ ಕಾರಣವಾಗಿರಬಹುದು, ಅಲ್ಲಿ ಸ್ಟಡಿ ಟೇಬಲ್ ಪ್ಲೇಸ್, ಓದುವ ಸ್ಥಿತಿ, ಮಲಗುವ ಪ್ಲೇಸ್ ಇತ್ಯಾದಿಗಳು ಬಹಳ ಮುಖ್ಯ.

27

ಮುಂಬರುವ ಪರೀಕ್ಷೆ ವೇಳೆ ನಿಮ್ಮ ಮಗುವಿಗೆ ಯಾವುದೇ ಭಯ ಮತ್ತು ಒತ್ತಡವಿಲ್ಲದೆ ಅಧ್ಯಯನ ಮಾಡಲು ಬಿಡಿ, ಕೆಲವು ವಾಸ್ತು ಸಲಹೆಗಳೊಂದಿಗೆ, ಆತ್ಮವಿಶ್ವಾಸದಿಂದ ಎಕ್ಸಾಮ್ (Exam) ಬರೆಯಲು ನಿರ್ಭಯವಾಗೋದಲ್ಲದೆ, ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಏಕಾಗ್ರತೆ ಹೆಚ್ಚಿಸುತ್ತೆ. ವಿದ್ಯಾರ್ಥಿಗಳ ಒತ್ತಡ ಕಡಿಮೆ ಮಾಡಲು ಮತ್ತು ಏಕಾಗ್ರತೆ ಹೆಚ್ಚಿಸಲು ಕೆಲವು ವಾಸ್ತು ಸಲಹೆಗಳಿವೆ. ಇದರಿಂದ ಮಗುವಿನ ಒತ್ತಡವನ್ನು ಕಡಿಮೆ ಮಾಡಬಹುದು-

37

ಮಕ್ಕಳಿಗೆ ಉತ್ತರ/ ಪೂರ್ವ ಅಥವಾ ಪಶ್ಚಿಮದಲ್ಲಿ ರೂಮ್(Room) ನೀಡಬೇಕು.
ಮಗು ತನ್ನ ತಲೆಯನ್ನು ದಕ್ಷಿಣ ಅಥವಾ ಪೂರ್ವಕ್ಕೆ ಮುಖ ಮಾಡಿ ಮಲಗಬೇಕು. ನಿಮ್ಮ ತಲೆಯನ್ನು ಪಶ್ಚಿಮ ಅಥವಾ ಉತ್ತರಕ್ಕೆ ಮುಖ ಮಾಡಿ ಮಲಗೋದನ್ನು ತಪ್ಪಿಸಿ.

47

ಯಾವಾಗಲೂ ಉತ್ತರ ಅಥವಾ ಪೂರ್ವಾಭಿಮುಖವಾಗಿ ಅಧ್ಯಯನ ಮಾಡಿ.
ನಿಮ್ಮ ಸ್ಟಡಿ ಟೇಬಲನ್ನು ಜಂಕ್ ಮೆಟೀರಿಯಲ್(Junk material) ಅಥವಾ ಬೇಡದ ಪುಸ್ತಕಗಳಿಂದ ತುಂಬಬೇಡಿ. ನಿಮ್ಮ ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ನೀಡಲು ಅದನ್ನು ಸ್ವಚ್ಛವಾಗಿರಿಸಿಕೊಳ್ಳಿ.

57

ಮೀನಿನ ಅಕ್ವೇರಿಯಂ(Aquarium) ಅಥವಾ ನೀರಿನ ಫೌಂಟೈನ್ ಗಳಂತಹ ಕೆಲವು ನೀರಿನ ಮೂಲಗಳನ್ನು ಈಶಾನ್ಯದಲ್ಲಿ ಇರಿಸಿ.
ಅಧ್ಯಯನ ಮಾಡುವಾಗ, ಯಾವಾಗಲೂ ಸ್ಟಡಿ ಟೇಬಲ್ ಮುಂದೆ ನೀರು ತುಂಬಿದ ಲೋಟವನ್ನು ಇರಿಸಿ ಏಕೆಂದರೆ ಅದು ಏಕಾಗ್ರತೆಯನ್ನು ಹೆಚ್ಚಿಸುತ್ತೆ.

67

ಉತ್ತರ ದಿಕ್ಕಿನ ಗೋಡೆ ಮೇಲಿನ ಪೆಂಡುಲಮ್ ಗಡಿಯಾರವೂ ಏಕಾಗ್ರತೆಯನ್ನು ಹೆಚ್ಚಿಸುತ್ತವೆ.
ಸ್ಟಡಿ ಟೇಬಲ್ ಗಾತ್ರವು ನಿಯಮಿತವಾಗಿರಬೇಕು.
ಸ್ಟಡಿ ಟೇಬಲ್ ಗೋಡೆಯ ಪಕ್ಕದಲ್ಲಿಡಬಾರದು. ಗೋಡೆ ಮತ್ತು ಮೇಜಿನ ನಡುವೆ ಕನಿಷ್ಠ 3 ಇಂಚು ಜಾಗವನ್ನು ಬಿಡಿ.
ಸ್ಟಡಿ ಟೇಬಲ್ ಮೇಲ್ಭಾಗದಲ್ಲಿ ಓವರ್ ಹೆಡ್ ಸ್ಟೋರೇಜ್(Over head storage) ಇಡೋದನ್ನು ತಪ್ಪಿಸಿ.

77

ಮಕ್ಕಳ ಕೋಣೆಯಲ್ಲಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ. ಇದ್ದರೆ, ಬಳಕೆಯಲ್ಲಿಲ್ಲದಿದ್ದಾಗ ಅವುಗಳ ಸ್ವಿಚ್ ಆಫ್ ಮಾಡಿಡಲು ಪ್ರಯತ್ನಿಸಿ.
ಸೂರ್ಯಕಾಂತಿ(Sunflower) ಹಳದಿ ಬಣ್ಣದ ಯಾವುದೇ ವಸ್ತುವನ್ನು ಇರಿಸಿ, ಇದು ಒಟ್ಟಾರೆ ಗ್ರಹಣ ಶಕ್ತಿ ಮತ್ತು ಬುದ್ಧಿವಂತಿಕೆ ಹೆಚ್ಚಿಸುತ್ತೆ.
 

About the Author

SN
Suvarna News
ಮಕ್ಕಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved