ಕಾಲೇಜ್ಗೆ ಪ್ರವೇಶ ಬೇಕಿದ್ದರೆ 9 ಗಂಟೆ ಎಕ್ಸಾಮ್ ಬರಿಬೇಕಂತೆ!
*ಅತಿ ಹೆಚ್ಚು ಅಂದರೆ 3 ಗಂಟೆ ಎಕ್ಸಾಮ್ ಓಕೆ, ಚೀನಾದಲ್ಲಿ 9 ಗಂಟೆ ಪರೀಕ್ಷೆ ಬರಿಬೇಕಂತೆ
*ಕಾಲೇಜ್ ಅಡ್ಮಿಷನ್ ಬೇಕಂದ್ರೆ ಈ 9 ಗಂಟೆ ಎಕ್ಸಾಮ್ ಬರೆದು ಪಾಸಾಗಲೇಬೇಕು
*ಚೀನಾದಲ್ಲಿ ಈ ಎಕ್ಸಾಮ್‌ಗೆ ಗಾವೊಕಾವೊ ಪರೀಕ್ಷೆ ಎಂದು ಕರೆಯುತ್ತಾರೆ
ನಮ್ಮ ದೇಶದಲ್ಲಿ ಸ್ಕೂಲ್ ಇರಬಹುದು, ಕಾಲೇಜ್ ಇರಬಹುದು ಪರೀಕ್ಷೆ (Examination) ಬರೆಯುವ ಕಾಲಾವಧಿ ಎಷ್ಟು ಇರುತ್ತೆ ಹೇಳಿ. ಗರಿಷ್ಠ 3 ತಾಸು..ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 90 ನಿಮಿಷ, 1 ಗಂಟೆ, ಹೆಚ್ಚು ಅಂದ್ರೆ 3 ಗಂಟೆ ಇರಬಹುದು. ಆದ್ರೆ ಚೀನಾದಲ್ಲಿ (China) ಪುಟ್ಟ ಮಕ್ಕಳು (Children) ಎಂಥ ಕಠಿಣ ಪರೀಕ್ಷೆ ಬರೆಯಬೇಕು ಗೊತ್ತಾ..? ಬರೋಬ್ಬರಿ 9 ತಾಸು ಎಕ್ಸಾಂ ಬರೆಯಬೇಕು. ಅದರಲ್ಲಿ ಪಾಸ್ ಆದ್ರಷ್ಟೇ ಕಾಲೇಜು (Collage) ಮೆಟ್ಟಿಲು ಹತ್ತೋಕೆ ಸಾಧ್ಯ. ಬಹುಶಃ ಇಂಥ ಕಠಿಣ ಪರೀಕ್ಷೆ ಬೇರೆ ಯಾವ ದೇಶದಲ್ಲೂ ಇಲ್ಲ ಅನ್ಸುತ್ತೆ. ಚೀನಾ ದೇಶ ಈಗ ಏಷ್ಯಾದಲ್ಲೇ ಬಲಿಷ್ಠ ರಾಷ್ಟ್ರವಾಗಿ ಅಭಿವೃದ್ಧಿ ಕಂಡಿದೆ. ಆ ದೇಶದಲ್ಲಿ ಶಿಕ್ಷಣ ಪೂರ್ಣಗೊಳಿಸುವವರ ಸಂಖ್ಯೆ ಬಹಳ ಕಡಿಮೆ. ಯಾಕಂದ್ರೆ ಅಲ್ಲಿರುವ ಕಠಿಣ ಶಿಕ್ಷಣ ಪದ್ಧತಿ. ಶಾಲಾ ಹಂತದಲ್ಲೇ ಮಕ್ಕಳು ಅಗ್ನಿಪರೀಕ್ಷೆ ಎದುರಿಸಬೇಕು. 9 ಗಂಟೆಗಳ ಕಾಲ ಪರೀಕ್ಷೆ ಬರೆಯಲು ಸಾಧ್ಯವಾಗದ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಸರಿದಿದ್ದಾರೆ. ಚೀನಾದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ತುಂಬಾ ಕಟ್ಟುನಿಟ್ಟಾಗಿ ತರಬೇತಿ ನೀಡಲಾಗುತ್ತದೆ. ಸೀನಿಯರ್ ಸೆಕೆಂಡರಿ ನಂತರ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಕಲಿಕೆಗೆ ಗುಡ್ ಬೈ ಹೇಳುತ್ತಾರೆ. ಅದಕ್ಕೆ ಕಾರಣ ಗಾವೊಕಾವೊ ಎಕ್ಸಾಂ(Gaokao Examination).
ಚೀನಾದ ಶಿಕ್ಷಣ ವ್ಯವಸ್ಥೆ, ನಮ್ಮ ದೇಶದ ರೀತಿಯಂತಿಲ್ಲ. ಇಲ್ಲಿ ಗಾವೊಕಾವೊ ಅನ್ನೋದು ಅತ್ಯಂತ ಪ್ರಮುಖ ಘಟ್ಟವಾಗಿದೆ. ಗಾವೊಕಾವೊ ಚೀನಾದ ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಯಾಗಿದೆ. ಈ ಗಾವೊಕಾವೊ ಪ್ರವೇಶ ಪರೀಕ್ಷೆಯು ಬರೋಬ್ಬರಿ 9 ಗಂಟೆಗಳ ಅವಧಿಯದ್ದಾಗಿರುತ್ತದೆ.
Amazon Academy: ಮುಂದಿನ ವರ್ಷ ಆಗಸ್ಟ್‌ನಿಂದ ಅಮೆಜಾನ್ ಅಕಾಡೆಮಿ ಸ್ಥಗಿತ
ಅಲ್ಲಿ ಶಾಲಾ ಶಿಕ್ಷಣದಲ್ಲಿ ಒಟ್ಟು 4 ಹಂತಗಳು ಇರುತ್ತವೆ. ಈ ನಾಲ್ಕನ್ನು ದಾಟಿದ ವಿದ್ಯಾರ್ಥಿಗಳು ಮಾತ್ರ ಮುಂದಿನ ಹಂತ ಪ್ರವೇಶಿಸಲು ಸಾಧ್ಯ. ಮೊದಲ ಹಂತ ಪ್ರಿ-ಸ್ಕೂಲಿಗೆ ಇಲ್ಲಿ ಹೆಚ್ಚಿನ ಮಹತ್ವವಿದೆ. ಪ್ರಿಸ್ಕೂಲ್ ನಂತರ, ಅವರು ಒಟ್ಟು ಆರು ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿ ಓದಬೇಕು. ನಂತರ ಮೂರು ವರ್ಷಗಳ ಕಾಲ ಜೂನಿಯರ್ ಸೆಕೆಂಡರಿ ಶಾಲೆ, ಅದಾದ ಮೇಲೆ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮೂರು ವರ್ಷಗಳ ಶಿಕ್ಷಣ ಪಡೆಯಬೇಕು. ಈ ಹಂತದಲ್ಲಿ ಗ್ರಾಮೀಣ ಪ್ರದೇಶದ ಸಾಕಷ್ಟು ವಿದ್ಯಾರ್ಥಿಗಳು ಶಾಲೆ ತೊರೆದು, ಜೀವನೋಪಾಯಕ್ಕೆ ಇತರ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಇನ್ನು ಕೆಲವರು ಎರಡನೇ ಹಂತವನ್ನು ತಲುಪಿದ ನಂತರ ಮತ್ತೆ ಅಧ್ಯಯನ ಮುಂದುವರಿಸುತ್ತಾರೆ.
6 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಇಲ್ಲಿ ಪ್ರಾಥಮಿಕ ಶಿಕ್ಷಣವು (Primary Education) ಉಚಿತವಾಗಿದೆ. ಒಂದು ತರಗತಿಯಲ್ಲಿ ಸುಮಾರು 35 ವಿದ್ಯಾರ್ಥಿಗಳು ಮಾತ್ರ ಇರುತ್ತಾರಂತೆ. ಈ ಸಮಯದಲ್ಲಿ, ಪೋಷಕರು ಪುಸ್ತಕ ಮತ್ತು ಸಮವಸ್ತ್ರಕ್ಕಾಗಿ (Uniform) ಮಾತ್ರ ಹಣವನ್ನು ಪಾವತಿಸಬೇಕು. ಮಾಧ್ಯಮಿಕ ಹಂತ ಮುಗಿದ ಬಳಿಕ ರಾಷ್ಟ್ರೀಯ ಉನ್ನತ ಶಿಕ್ಷಣ (Higher Education) ಪ್ರವೇಶ ಪರೀಕ್ಷೆಯಾದ ಗಾವೊಕಾವೊ ಎದುರಿಸಬೇಕು. ಒಂಬತ್ತು ಗಂಟೆಗಳ ಅವಧಿ ಪರೀಕ್ಷೆ ಬರೆದು ಪಾಸ್ ಆಗಬೇಕು. ಸಾಮಾನ್ಯವಾಗಿ 40% ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಈ ಪರೀಕ್ಷೆಯ ಆಧಾರದ ಮೇಲೆ, ಚೀನೀ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುತ್ತಾರೆ. ಭವಿಷ್ಯದಲ್ಲಿ ಆ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ.
ಈ ಕಾಲೇಜು ಪ್ರವೇಶ ಪರೀಕ್ಷೆಯು ಪ್ರತಿ ವರ್ಷ ಜೂನ್ ಆರಂಭದಲ್ಲಿ ಎರಡು ದಿನಗಳವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಇಡೀ ಚೀನಾವು ಸ್ತಬ್ಧವಾದಂತೆ ಕಾಣುತ್ತದೆ. ಗಾವೊಕಾವೊವನ್ನು ಸಾರ್ವಜನಿಕ ರಜೆಗೆ ಸಮಾನವಾಗಿ ರಾಷ್ಟ್ರೀಯ ಕಾರ್ಯಕ್ರಮದಂತೆ ಪರಿಗಣಿಸಲಾಗುತ್ತದೆ. ವಾಸ್ತವವಾಗಿ, ಒಂದು ಚೈನೀಸ್ ಹೇಳಿಕೆಯು ಈ ಪರೀಕ್ಷೆಯನ್ನು "ಸಾವಿರಾರು ಸೈನಿಕರು ಮತ್ತು ಹತ್ತಾರು ಸಾವಿರ ಕುದುರೆಗಳು ಒಂದೇ ಲಾಗ್ ಬ್ರಿಡ್ಜ್‌ನಲ್ಲಿ ಸ್ಟ್ಯಾಂಪ್‌ಪೇಡ್‌ಗೆ ಹೋಲಿಸುತ್ತದೆ.
Project Zimadari: ಕಣಿವೆ ರಾಜ್ಯದ ಶಿಕ್ಷಣದಲ್ಲಿ ಕ್ರಾಂತಿ ಸೃಷ್ಟಿಸಿದ ಜಿಮಾದಾರಿ ಕಾರ್ಯಕ್ರಮ!
ಈ ಗಾವೊಕಾವೋ ಪರೀಕ್ಷೆಯನ್ನ ಎಷ್ಟು ಕಟ್ಟುನಿಟ್ಟಾಗಿ ನಡೆಸಲಾಗುತ್ತೆ ಅಂದ್ರೆ, ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಲೋಹದ ಶೋಧಕಗಳನ್ನು ಬಳಸಲಾಗುತ್ತದೆ. ಗಾವೊಕಾವೋ ಪರೀಕ್ಷೆಯನ್ನು ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆ ಎಂದೇ ಕರೆಯಲಾಗುತ್ತದೆ. ಮಕ್ಕಳಿಗೆ ಇಷ್ಟು ಕಠಿಣ ರೀತಿಯಲ್ಲಿ ಪರೀಕ್ಷೆ ಬರೆಸುವ ವಿಧಾನದ ಬಗ್ಗೆ ಇತರೆ ದೇಶಗಳಿಂದ ಭಾರೀ ಟೀಕೆಗಳು ವ್ಯಕ್ತವಾಗುತ್ತವೆ. ಆದ್ರೆ ಈ ಡ್ರ್ಯಾಗನ್ ರಾಷ್ಟ್ರ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ.