ಬುದ್ಧನ ಪ್ರತಿಮೆ ಮನೆಯಲ್ಲಿಡ್ತೀರಾ? ಹಾಗಿದ್ರೆ ವಾಸ್ತು ನಿಯಮ ಪಾಲಿಸಿ
ಭಗವಾನ್ ಬುದ್ಧನ ಪ್ರತಿಮೆಯನ್ನು ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸೋದರಿಂದ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತೆ ಎಂದು ನಂಬಲಾಗಿದೆ. ಎಲ್ಲಾ ರೀತಿಯ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ನಂಬಲಾಗಿದೆ.
ವಾಸ್ತು ತಜ್ಞರ ಪ್ರಕಾರ, ಮನೆಯ ಬಲ ಮೂಲೆಯಲ್ಲಿ ಭಗವಾನ್ ಬುದ್ಧನ(Buddha) ಪ್ರತಿಮೆ ಸ್ಥಾಪಿಸೋದು ಸಕಾರಾತ್ಮಕ ಶಕ್ತಿ ತರುತ್ತೆ. ಆದರೆ, ಮನೆಯಲ್ಲಿ ಭಗವಾನ್ ಬುದ್ಧನ ಪ್ರತಿಮೆಯನ್ನು ಸ್ಥಾಪಿಸುವ ಮೊದಲು ವಾಸ್ತು ನಿಯಮಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮನೆಯಲ್ಲಿ ಭಗವಾನ್ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲು ನೀವು ಯೋಚಿಸುತ್ತಿದ್ದರೆ, ಈ ಪ್ರಮುಖ ನಿಯಮಗಳನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಭಗವಾನ್ ಬುದ್ಧನ ಪ್ರತಿಮೆಯನ್ನು(Idol) ಸ್ಥಾಪಿಸಲು ಹೊರಟಿದ್ದರೆ, ಪ್ರತಿಮೆಯನ್ನು ನೆಲದ ಮೇಲೆ ಅಥವಾ ಲಾಕರ್ ನಲ್ಲಿ ಇಡಬೇಡಿ. ವಾಸ್ತು ಶಾಸ್ತ್ರದಲ್ಲಿ ಇದನ್ನು ನಿಷೇಧಿಸಲಾಗಿದೆ. ಭಗವಾನ್ ಬುದ್ಧನ ಪ್ರತಿಮೆಯನ್ನು ನೆಲದ ಮೇಲೆ ಇರಿಸಿದ್ರೆ, ವಾಸ್ತು ದೋಷ ಉಂಟಾಗುತ್ತೆ.
ವಾಸ್ತು ತಜ್ಞರ ಪ್ರಕಾರ, ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ನಿಮ್ಮ ಕಣ್ಣುಗಳಿಗೆ(Eyes) ಸಮಾನಾಂತರವಾಗಿ ಅಥವಾ ನಿಮ್ಮ ತಲೆಯ ಮೇಲೆ ಅಂದರೆ ಹಣೆಯ ಎತ್ತರದ ಸ್ಥಳದಲ್ಲಿ ಇರಿಸಿ. ನೆನಪಿನಲ್ಲಿಡಬೇಕಾದ ಒಂದು ವಿಷಯವೆಂದರೆ ಮನೆಯಲ್ಲಿ ಯಾವುದೇ ಸದಸ್ಯರ ಕಾಲು ಭಗವಾನ್ ಬುದ್ಧನ ಕಡೆಗೆ ಇಟ್ಟು ಕೂರುವಂತೆ ಇರಬಾರದು..
ಭಗವಾನ್ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಿದ ನಂತರ ಸುತ್ತಮುತ್ತಲಿನ ಸ್ಥಳಗಳನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ. ಹಾಗೆಯೇ, ಗಾಳಿಯನ್ನು(Air) ಶುದ್ಧೀಕರಿಸಲು, ಮನೆಯಲ್ಲಿ ಪ್ರತಿದಿನ ಸುಗಂಧಭರಿತ ಧೂಪ ಅಥವಾ ಆಗರಬತ್ತಿ ಕಡ್ಡಿಗಳನ್ನು ಬೆಳಗಿಸಿ.
ಜ್ಯೋತಿಷಿಗಳ ಪ್ರಕಾರ, ಅಡುಗೆಮನೆ, ಸ್ನಾನಗೃಹ ಅಥವಾ ಮಲಗುವ ಕೋಣೆಯಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸಬೇಡಿ. ಹಾಗೆಯೇ, ಭಗವಾನ್ ಬುದ್ಧನ ಪ್ರತಿಮೆಯ ಬಳಿ ಶೂ(Shoe) ರ್ಯಾಕ್ ಅಥವಾ ವಿದ್ಯುತ್ ಉಪಕರಣಗಳನ್ನು ಇಡಬೇಡಿ
ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು(Positive energy) ತುಂಬಲು ನೀವು ಬಯಸೋದಾದ್ರೆ, ಮನೆಯಲ್ಲಿ ಆಶೀರ್ವಾದ ಭಂಗಿಯೊಂದಿಗೆ ಭಗವಾನ್ ಬುದ್ಧನ ಪ್ರತಿಮೆ ಸ್ಥಾಪಿಸಿ. ಮನೆಯಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸೋದರಿಂದ ವಾಸ್ತು ದೋಷಗಳನ್ನು ದೂರವಾಗುತ್ತವೆ. ವಿಶೇಷವಾಗಿ, ಭಗವಾನ್ ಬುದ್ಧನ ಪ್ರತಿಮೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸೋದರಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಅನುಮತಿಸೋದಿಲ್ಲ.
ಭಗವಾನ್ ಬುದ್ಧನ ಪ್ರತಿಮೆಯನ್ನು ಪಶ್ಚಿಮಾಭಿಮುಖವಾಗಿ ಇರಿಸಿ. ನಿದ್ರಿಸುತ್ತಿರುವ ಭಗವಾನ್ ಬುದ್ಧನು ಜ್ಞಾನ (Knowledge)ಮತ್ತು ವಿಮೋಚನೆಯ ಸಂಕೇತವಾಗಿದೆ. ಮಲಗಿರುವ ಭಗವಾನ್ ಬುದ್ಧನ ಪ್ರತಿಮೆಯನ್ನು ಸ್ಥಾಪಿಸುವುದು ಮನೆಯಲ್ಲಿ ಶಾಂತಿಯನ್ನು ಕಾಪಾಡುತ್ತೆ.