Vastu Tips: ಮನೆಯ ನೆಮ್ಮದಿ ಹಾಳು ಮಾಡುವ ಜೇಡರ ಬಲೆ

ಮನೆಯಲ್ಲಿ ಜೇಡರ ಬಲೆಯಿದ್ದರೆ ಅದರಿಂದ ವಾಸ್ತು ದೋಷವು ಉಂಟಾಗಿ ನಿಮ್ಮ ಕುಟುಂಬದೊಂದಿಗಿನ ನಿಮ್ಮ ಸಂಬಂಧವನ್ನು ಹಾನಿಗೊಳಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು.

Vastu Tips Spiders webs are inauspicious here's why skr

ಮನೆಯಲ್ಲಿ ಶುಚಿತ್ವವು ಜನರನ್ನು ರೋಗಗಳಿಂದ ದೂರವಿಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಶುಚಿತ್ವವು ದೇವ-ದೇವತೆಗಳಿಗೂ ಸಂಬಂಧಿಸಿದೆ. ಸ್ವಚ್ಛವಾದ ಮನೆಯಲ್ಲಿ ಮಾತ್ರ ದೇವರು ನೆಲೆಸುತ್ತಾನೆ. ಸಾಮಾನ್ಯವಾಗಿ, ಜನರು ತಮ್ಮ ಮನೆಯ ಕೆಳಗಿನ ಭಾಗವನ್ನು ಸ್ವಚ್ಛಗೊಳಿಸುತ್ತಾರೆ, ಆದರೆ ಮೇಲಿನ ಭಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದಿಲ್ಲ. ಆದ್ದರಿಂದ ಅಂತಹ ಭಾಗಗಳಲ್ಲಿ ಜೇಡರ ಬಲೆಗಳು ರೂಪುಗೊಳ್ಳುತ್ತವೆ. ಅವು ಮತ್ತಷ್ಟು ಧೂಳನ್ನು ತುಂಬಿಕೊಂಡು ನೋಡಲೂ ಅಸಹ್ಯವಾಗಿ ಕಾಣಿಸುತ್ತವೆ. ಇದನ್ನು ಹಬ್ಬಹರಿದಿನಗಳ ಸಂದರ್ಭದಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಮನೆಯಲ್ಲಿರುವ ಜೇಡರ ಬಲೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಜೇಡರ ಬಲೆಗಳನ್ನು ಸ್ವಚ್ಛತೆಯ ದೃಷ್ಟಿಯಿಂದ ಮಾತ್ರವಲ್ಲದೆ ವಾಸ್ತು ಶಾಸ್ತ್ರದ ಪ್ರಕಾರವೂ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಜೇಡರ ಬಲೆಗಳ ರಚನೆಯು ಅದರಲ್ಲಿ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತದೆ, ಇದರಿಂದಾಗಿ ನಕಾರಾತ್ಮಕತೆಯು ಮನೆಯ ಉಳಿದ ಭಾಗಗಳಿಗೆ ಹರಡುತ್ತದೆ. 

ನೀವು ನೋಡಿರಬಹುದು, ಭೂತ ಬಂಗಲೆಯೆಂದು ಯಾವುದನ್ನು ತೋರುತ್ತಾರೋ ಅಲ್ಲೆಲ್ಲ ಜೇಡರ ಬಲೆ ತುಂಬಿ ತುಳುಕುತ್ತಿರುತ್ತದೆ. ಜೇಡರ ಬಲೆ ಇರುವಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ಎಂಬುದನ್ನು ಈ ದೃಶ್ಯಗಳು ಕೂಡಾ ಸೂಚಿಸುತ್ತವೆ. 

ದೃಷ್ಟಿ ತಾಕದಿರಲೆಂದು ಮಗುವಿನ ಕೈ, ಕಾಲುಗಳಿಗೆ ಕಪ್ಪು ದಾರ ಕಟ್ಟೋದು ಸರಿಯೇ?

ಜೇಡದ ಬಲೆಯಲ್ಲಿ ಅಸಂಖ್ಯಾತ ಸೂಕ್ಷ್ಮಾಣುಜೀವಿಗಳಿದ್ದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇನ್ನು ಈ ಬಲೆಗಳ ರಚನೆ ಕೂಡಾ ಹೇಗಿರುತ್ತದೆಂದರೆ, ನಕಾರಾತ್ಮಕ ಶಕ್ತಿಯು ಅದರಲ್ಲಿ ಸುಲಭವಾಗಿ ಸಿಕ್ಕಿ ಹಾಕಿಕೊಳ್ಳುತ್ತದೆ. ಇದರಿಂದಾಗಿ ನಕಾರಾತ್ಮಕತೆಯು ಮನೆಯ ಉಳಿದ ಭಾಗಗಳಿಗೆ ಹರಡುತ್ತದೆ. ಅದೇ ಸಮಯದಲ್ಲಿ, ಅದು ಮನೆಯಲ್ಲಿ ಅಪಶ್ರುತಿಗೆ ಕಾರಣವಾಗುತ್ತದೆ. ಇದು ಸಂತೋಷ ಮತ್ತು ಸಮೃದ್ಧಿಯ ನಾಶಕ್ಕೆ ಕಾರಣವಾಗುತ್ತದೆ. ಮನೆಯಲ್ಲಿನ ಗೊಂದಲದಿಂದಾಗಿ, ವ್ಯಕ್ತಿಯು ಬಯಸಿದರೂ ತನ್ನ ಮನಸ್ಸನ್ನಿಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. 

ವಾಸ್ತು ಶಾಸ್ತ್ರದ ಪ್ರಕಾರ ಜೇಡರ ಬಲೆ ಇರುವ ಮನೆ ಯಾವಾಗಲೂ ಬಿಕ್ಕಟ್ಟುಗಳಿಂದ ಸುತ್ತುವರೆದಿರುತ್ತದೆ. ಆ ಮನೆಯ ಸದಸ್ಯರು ಯಾವಾಗಲೂ ಒರಟು ತೊಂದರೆಗಳನ್ನು ಎದುರಿಸುತ್ತಾರೆ.

ಗೋಡೆಗಳು, ಛಾವಣಿಗಳು ಜೇಡರ ಬಲೆಗಳಿಂದ ಮುಚ್ಚಲ್ಪಟ್ಟಿರುವ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ಮನೆಯ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಮನೆಯಲ್ಲಿ ಜೇಡರ ಬಲೆಗಳಿದ್ದರೆ ಮನೆಯ ಸುಖ-ಸಮೃದ್ಧಿ ನಶಿಸಲಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ನಕಾರಾತ್ಮಕ ಶಕ್ತಿಯಿಂದಾಗಿ, ಮನೆಯ ಪರಿಸರವು ತುಂಬಾ ಪ್ರಕ್ಷುಬ್ಧವಾಗುತ್ತದೆ. ಈ ಕಾರಣಕ್ಕಾಗಿ, ಜೇಡರ ಬಲೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಜೇಡರ ಬಲೆಗಳ ರಚನೆಯು ಅದರಲ್ಲಿ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತದೆ. ಜೇಡರ ಬಲೆಯಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನಿಲ್ಲುವುದಿಲ್ಲ, ಇದರಿಂದ ಮನೆಯ ಯಾವುದೇ ಮೂಲೆಯಲ್ಲಾಗಲಿ ಅಥವಾ ಮನೆಯ ಭಾಗದಲ್ಲಾಗಲಿ ನೆಗೆಟಿವ್ ಎನರ್ಜಿ ತುಂಬಿಕೊಂಡಿರುತ್ತದೆ. 

Love 2023: ಹೊಸ ವರ್ಷದಲ್ಲಿ ಈ 5 ರಾಶಿಯವರು ಪ್ರೀತಿ, ಪ್ರಣಯ, ವಿವಾಹದಲ್ಲಿ ಲಕ್ಕಿ

ಮನೆಯಲ್ಲಿ ಋಣಾತ್ಮಕ ಶಕ್ತಿಯ ವಾಸವಿರುವುದರಿಂದ ಭಿನ್ನಾಭಿಪ್ರಾಯ, ರೋಗರುಜಿನಗಳು ಮತ್ತು ಇತರ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ. ಹಣದ ಕೊರತೆ ಎದುರಾಗುತ್ತದೆ. ಯಾವಾಗ ನೋಡಿದರೂ ಹಣಕಾಸಿನ ಅಡಚಣೆ ಹೆಚ್ಚಾಗುತ್ತದೆ. ನಿಮ್ಮ ಮನೆಯನ್ನು ವಾಸ್ತು ದೋಷಗಳಿಂದ ಮುಕ್ತವಾಗಿಡಲು ನೀವು ಬಯಸಿದರೆ, ನಿಮ್ಮ ಮನೆಯಲ್ಲಿ ಜೇಡರ ಬಲೆಗಳನ್ನು ಕಂಡ ತಕ್ಷಣ ಅವುಗಳನ್ನು ಸ್ವಚ್ಛಗೊಳಿಸಿ. ಇದರಿಂದ ಮನೆಯೂ ಸುಂದರವಾಗುವುದು, ವಾಸ್ತು ದೋಷ ಮುಕ್ತವೂ ಆಗುವುದು. ಧನಾತ್ಮಕ ಶಕ್ತಿ ಹರಿವಿಗೆ ಅನುವಾಗಿ ಮನೆಯಲ್ಲಿ ಸಂತೋಷ ನೆಲೆಸುವುದು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios