Asianet Suvarna News Asianet Suvarna News

ಮೇಲಿಂದ ಕೆಳಗೆ ಬೀಳ್ತಿರೋ ಕನಸು ಪದೆ ಪದೇ ಕಾಣ್ತಿದೆಯಾ?

ಪ್ರತಿ ದಿನ ಒಂದಲ್ಲ ಒಂದು ಕನಸು ಬೀಳ್ತಿರುತ್ತದೆ. ಕೆಲವು ಕನಸುಗಳು ನೆನಪಿದ್ರೆ ಮತ್ತೆ ಕೆಲ ಕನಸು ಮರೆತಿರುತ್ತದೆ. ಇನ್ನು ಕೆಲ ಸ್ವಪ್ನ ಪದೇ ಪದೇ ನಮ್ಮನ್ನು ಕಾಡುತ್ತದೆ. ಈ ಸ್ವಪ್ನಕ್ಕೂ ನಮ್ಮ ಭವಿಷ್ಯಕ್ಕೂ ಸಂಬಂಧವಿದೆ. 
 

Know What Does Falling Mean In A Dream According To Swapan Shastra
Author
Bangalore, First Published Aug 8, 2022, 12:45 PM IST

ನಿದ್ರೆ ಮಾಡಿದಾಗ ಕನಸು ಬೀಳೋದು ವಿಶೇಷವೇನಲ್ಲ. ಎಲ್ಲರಿಗೂ ಕನಸು ಬೀಳುತ್ತದೆ. ಕೆಲವರ ಕನಸು ಸುಂದರವಾಗಿದ್ದರೆ ಮತ್ತೆ ಕೆಲವರ ಕನಸು ಭಯಾನಕವಾಗಿರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಎಲ್ಲಾ ಕನಸುಗಳ ಕೆಲವು ಅರ್ಥಗಳನ್ನು ಹೇಳಲಾಗಿದೆ. ಸ್ವಪ್ನ ಶಾಸ್ತ್ರದ ಪ್ರಕಾರ, ಯಾವುದೇ ಕನಸು ಅನಗತ್ಯವಾಗಿ ಬರುವುದಿಲ್ಲ. ಪ್ರತಿಯೊಂದು ಕನಸಿನ ಹಿಂದೆ ಖಂಡಿತವಾಗಿಯೂ ಕೆಲವು ಚಿಹ್ನೆಗಳು ಅಡಗಿರುತ್ತವೆ. ಅನೇಕ ಬಾರಿ ಕಟ್ಟಡ ಅಥವಾ ಆಕಾಶದಿಂದ ಕೆಳಗೆ ಬಿದ್ದಂತ ಕನಸು ಬೀಳುತ್ತದೆ. ಮಂಚದಿಂದ ಕೆಳಗೆ ಬಿದ್ದಂತೆ ಕನಸು ಕಾಣುವುದಿದೆ. ಈ ಕನಸಿಗೂ ಅನೇಕ ಅರ್ಥವಿದೆ. ಇಂದು ನಾವು  ಎತ್ತರದಿಂದ ಬೀಳುವ ಕನಸು ಬಿದ್ರೆ ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಹೇಳ್ತೇವೆ.  

ಆರ್ಥಿಕ ನಷ್ಟ (Financial Loss) : ಸ್ವಪ್ನ ಶಾಸ್ತ್ರದ  ಪ್ರಕಾರ, ಒಬ್ಬ ಉದ್ಯಮಿ (Businessman) ಕನಸಿನಲ್ಲಿ ಎತ್ತರದಿಂದ ಬೀಳುವುದನ್ನು ನೋಡಿದರೆ, ಈ ಕನಸನ್ನು ಆದಾಯದ ಕೊರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಒಬ್ಬ ಮಹಿಳೆ ಅಂತಹ ಕನಸನ್ನು ಪದೇ ಪದೇ ಕಾಣ್ತಿದ್ದರೆ ಅದು ತನ್ನ ಗಂಡನ ಆದಾಯ (Income) ದಲ್ಲಿ ನಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಬದಲಾವಣೆ ಸೂಚನೆ:  ಒಬ್ಬ ವ್ಯಕ್ತಿಯು ಕನಸಿನಲ್ಲಿ ಎತ್ತರದ ಸ್ಥಳದಿಂದ ಕೆಳಗೆ ಬೀಳುವುದನ್ನು ಕಂಡರೆ, ಅದು ಆತನ ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಯ ಸಂಕೇತವಾಗಿದೆ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ.

Zodiac Signs: ಸಂಗಾತಿಗೆ ಸುಳ್ಳು ಹೇಳೋದ್ರಲ್ಲಿ ಈ ರಾಶಿಯವರು ನಿಸ್ಸೀಮರು

ಆರೋಗ್ಯದಲ್ಲಿ ಎಚ್ಚರಿಕೆ : ಸ್ವಪ್ನ ಶಾಸ್ತ್ರದ ಪ್ರಕಾರ, ನೀವು ಆಕಾಶದಿಂದ ಅಥವಾ ಮೋಡಗಳಿಂದ ಬೀಳುವ ಕನಸು ಕಾಣುತ್ತಿದ್ದರೆ ನೀವು ಸಾಕಷ್ಟು ದಣಿದಿದ್ದೀರಿ ಎಂದರ್ಥ. ಹಾಗೆ ಅಪಘಾತಗಳನ್ನು ತಪ್ಪಿಸಲು ನೀವು ಎಚ್ಚರವಾಗಿರಬೇಕು ಎಂಬ ಸೂಚನೆ.  ಈ ರೀತಿಯ ಕನಸು ಮೆದುಳಿನಲ್ಲಿ ಮಾನಸಿಕ ಮತ್ತು ದೈಹಿಕ ಬಳಲಿಕೆಯನ್ನು ತರುತ್ತದೆ. ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಸಾಕಷ್ಟು ನಿದ್ದೆ ಮಾಡಬೇಕು.

ಚೇತರಿಕೆ ವಿಳಂಬ : ಅನಾರೋಗ್ಯದ ವ್ಯಕ್ತಿಯು ಕನಸಿನಲ್ಲಿ ಎತ್ತರದಿಂದ ಬೀಳುವುದನ್ನು ನೋಡಿದರೆ ಅದು ಅಶುಭ ಸಂಕೇತ. ರೋಗಿಯ ಆರೋಗ್ಯದ ಚೇತರಿಕೆಯಲ್ಲಿ ವಿಳಂಬವಾಗಬಹುದು ಎಂದರ್ಥ.

ಶುಕ್ರವಾರ ಯಾವ ದಾನ ಮಾಡಿದ್ರೆ, ತಾಯಿ ಲಕ್ಷ್ಮಿ ಒಲಿಯುತ್ತಾಳೆ?

ಹಣದ ಬಗ್ಗೆ ಎಚ್ಚರಿಕೆ ಅಗತ್ಯ : ಕುದುರೆಯಿಂದ ಬೀಳುವ ಕನಸು ಕಾಣುತ್ತಿದ್ದರೆ, ನಿಮ್ಮ ಎದುರಾಳಿಯು ನಿಮಗೆ ಉತ್ತಮ ಚಾಲೆಂಜ್  ನೀಡಲಿದ್ದಾನೆ ಎಂದರ್ಥ. ಅದು ನಿಮಗೆ ಹಾನಿ ಮಾಡಬಹುದು. ಹಾಗಾಗಿ ಇಂಥ ಕನಸು ಬಿದ್ರೆ ಜಾಗರೂಕರಾಗಿರಿ. 
ಮತ್ತೊಂದೆಡೆ, ನೀವು ಆನೆ ಮೇಲಿಂದ ಕೆಳಗೆ ಬೀಳುವ ಕನಸು ಕಾಣುತ್ತಿದ್ದರೆ, ನಿಮ್ಮ ಆರ್ಥಿಕ ಸ್ಥಿತಿಯು ಹದಗೆಡುತ್ತದೆ ಎಂಬ ಸಂಕೇತವಾಗಿದೆ. 
ನೀವು ಛಾವಣಿಯಿಂದ ಬೀಳುವ ಕನಸು ಕಾಣುತ್ತಿದ್ದರೆ ನಿಮ್ಮನ್ನು ಮನೆಯಿಂದ ಹೊರಗಿಡುವ ಸಾಧ್ಯತೆಯಿದೆ ಎಂಬುದರ ಸೂಚನೆಯಾಗಿದೆ. 

ಜೀವನದಲ್ಲಿ ಭಾರೀ ಒತ್ತಡ : ಎತ್ತರದ ಕಟ್ಟಡ ಅಥವಾ ಸೇತುವೆಯಿಂದ ಕೆಳಕ್ಕೆ ತಳ್ಳಲ್ಪಡುವ ಕನಸು ಕಾಣುತ್ತಿದ್ದರೆ ನೀವು ಕೆಲಸದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಇತ್ತೀಚಿನ ಒಪ್ಪಂದದ ಬಗ್ಗೆ ಚಿಂತಿತರಾಗಿದ್ದೀರಿ ಮತ್ತು ನೀವು ಸುತ್ತಮುತ್ತಲಿನ ಪರಿಸರವನ್ನು ನಂಬುವುದಿಲ್ಲ ಎಂದರ್ಥ.  
ನೀವು ಬಂಡೆಯ ಅಂಚಿನಿಂದ ಜಿಗಿಯುವ ಬಗ್ಗೆ ಕನಸು ಕಾಣುತ್ತಿದ್ದರೆ, ಜೀವನ ಅಥವಾ ಕೆಲಸದಲ್ಲಿ ಸಾಕಷ್ಟು ಒತ್ತಡವಿದೆ ಮತ್ತು ನೀವು ಅಪಾಯವನ್ನು ತಪ್ಪಿಸಲು ಬಯಸುತ್ತೀರಿ ಎಂಬುದು ಇದರ ಅರ್ಥ.

ಕಠಿಣ ಪರಿಸ್ಥಿತಿ ಎದುರಾಗಬಹುದು : ಪಾರ್ಟಿಯಲ್ಲಿ ಎಡವಿ ಬೀಳುವ ಕನಸು ಕಾಣ್ತಿದ್ದರೆ, ಇತರರ ಮುಂದೆ ನೀವು ಮೂರ್ಖರಾಗುವ ಸಾಧ್ಯತೆಯಿದೆ ಎಂಬ ಸೂಚನೆ. ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯಿದೆ ಎಂದರ್ಥ.  
ಕೆಳಗೆ ಬಿದ್ದು ಗಾಯಗೊಂಡಿರುವಂತೆ ಕನಸು ಕಂಡ್ರೆ ಜೀವನದಲ್ಲಿ ಕಷ್ಟ ಎದುರಾಗಲಿದೆ ಎಂದರ್ಥವಾಗಿದೆ.

ಕೆಲವು ಗಂಭೀರ ಕಾಯಿಲೆ ಸೂಚನೆ : ಮಗ ಕೆಳಗೆ ಬಿದ್ದಂತೆ ಕನಸು ಮಹಿಳೆಯರಿಗೆ ಕಂಡ್ರೆ  ಮಗುವಿನ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಏಕೆಂದರೆ ಮಗು ಕೆಲವು ಗಂಭೀರ ಅನಾರೋಗ್ಯದಿಂದ ಬಳಲುವ ಸೂಚನೆ ಇದಾಗಿದೆ.  

Follow Us:
Download App:
  • android
  • ios