ಜೀವನದಲ್ಲಿ ಸುಖವಾಗಿರಬೇಕಾ? ಸೂರ್ಯಾಸ್ತದ ನಂತ ಹೀಗ್ ಮಾಡಿ
ಸೂರ್ಯಾಸ್ತದ ನಂತರ ನೀವು ಕೆಲವು ಸಣ್ಣ ಕ್ರಮಗಳನ್ನು ತೆಗೆದುಕೊಂಡರೆ, ನಿಮ್ಮ ಜೀವನದ ಸಮಸ್ಯೆಗಳೆಲ್ಲಾ ದೂರ ಆಗುತ್ತೆ ಅಂತೆ, ಜೊತೆಗೆ ಜೀವನದಲ್ಲಿ ಸಂತೋಷ ತರುತ್ತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.
ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನ ಸಂತೋಷದಿಂದ ಕೂಡಿರಲಿ ಎಂದು ಬಯಸುತ್ತಾನೆ, ಅದಕ್ಕಾಗಿ ಅವನು ತುಂಬಾನೆ ಕಠಿಣ ಶ್ರಮವಹಿಸ್ತಾನೆ(Hard work). ಆದರೆ ಕೆಲವೊಮ್ಮೆ ಪ್ರಯತ್ನಗಳು ಯಶಸ್ವಿಯಾಗೋದಿಲ್ಲ. ಆಗ ಆ ವ್ಯಕ್ತಿ ಕೆಲವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳೋದು ಅವಶ್ಯಕ.
ಸಾಮಾನ್ಯವಾಗಿ, ಜನರು ಬೆಳಿಗ್ಗೆ ತಮ್ಮ ನೆಚ್ಚಿನ ದೇವರನ್ನು ಪೂಜಿಸುತ್ತಾರೆ ಅಥವಾ ಸೂರ್ಯ ದೇವರಿಗೆ ನೀರನ್ನು ಅರ್ಪಿಸುತ್ತಾರೆ. ಸಹಜವಾಗಿ, ಬೆಳಿಗ್ಗೆ ತೆಗೆದುಕೊಂಡ ಕ್ರಮಗಳಿಂದ ನೀವು ಪ್ರಯೋಜನ ಪಡೆಯಬಹುದು. ಆದರೆ ಬೆಳಿಗ್ಗೆ ಮಾತ್ರವಲ್ಲ, ಸಂಜೆಯೂ(Evening) ಸಹ, ನೀವು ಕೆಲವು ಸಣ್ಣ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಯೋಜನ ಪಡೆಯಬಹುದು.
ಹೌದು, ಜೀವನದ ದುಃಖಗಳನ್ನು ತೆಗೆದುಹಾಕಲು ಕೆಲವು ಸುಲಭ ಪರಿಹಾರಗಳು ಸಹಾಯಕವಾಗಬಹುದು. ಸಾಮಾನ್ಯವಾಗಿ, ಜನರು ಸಂಜೆ ಮಾಡಬಾರದ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆದರೆ ನಿಜವಾಗಿ ಏನು ಮಾಡಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಆದ್ದರಿಂದ ಇಲ್ಲಿ ಸೂರ್ಯಾಸ್ತದ(Sunset)ಸಮಯದಲ್ಲಿ ನೀವು ಯಾವ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಯೋಣ, ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತೆ-
ದೀಪ ಪ್ರಜ್ವಲನ
ಜೀವನವನ್ನು ಉಜ್ವಲಗೊಳಿಸಲು, ಜೀವನದಲ್ಲಿ ಸಂತೋಷ ಮತ್ತು ಖ್ಯಾತಿಯನ್ನು ಪಡೆಯಲು, ರಾತ್ರಿ ದೇಗುಲಕ್ಕೆ ಹೋಗಿ ದೀಪ(Deepam) ಇಡಬೇಕು. ನಿಮ್ಮ ಕೆಲಸಕ್ಕೆ ಏನಾದರೂ ಅಡ್ಡಿಯಾಗುತ್ತಿದ್ದರೆ ಮತ್ತು ಆ ನೋವುಗಳನ್ನು ತೊಡೆದುಹಾಕಲು ನೀವು ಬಯಸೋದಾದ್ರೆ, ಅರಳಿ ಮರದ ಕೆಳಗೆ ಚೌಮುಖ ತುಪ್ಪದ ದೀಪವನ್ನು ಬೆಳಗಿಸಬೇಕು.
ಚಂದ್ರನಿಗೆ(Moon) ಅರ್ಘ್ಯ ಸಮರ್ಪಿಸಿ
ನಿಮ್ಮ ಮನಸ್ಸು ಯಾವಾಗಲೂ ತೊಂದರೆಗೀಡಾಗಿದ್ದರೆ ಮತ್ತು ಅಸಮಾಧಾನಗೊಂಡಿದ್ದರೆ, ರಾತ್ರಿಯಲ್ಲಿ ಚಂದ್ರದೇವನಿಗೆ ಅರ್ಘ್ಯ ಸಮರ್ಪಿಸಿ. ಸ್ವಲ್ಪ ಹಾಲು ಮತ್ತು ಬಿಳಿ ಶ್ರೀಗಂಧವನ್ನು ಸಹ ಸೇರಿಸಬೇಕು. ಅರ್ಘ್ಯವನ್ನು ಸಲ್ಲಿಸುವಾಗ, ಓಂ ಶ್ರೀಂ ಶ್ರೀಂ ಚಂದ್ರಮಾಸೆ ನಮಃ ಎಂದು ಪಠಿಸಿ. ಇದನ್ನು ಮಾಡೋದರಿಂದ, ಮನಸ್ಸು ಶಾಂತವಾಗಿರುತ್ತೆ ಮತ್ತು ನೀವು ಸಾಕಷ್ಟು ಒಳ್ಳೆಯದನ್ನು ಅನುಭವಿಸುತ್ತೀರಿ.
ಕಂಬಳಿ ದಾನ(Donate) ಮಾಡಿ
ಜೀವನದಲ್ಲಿ ರಾಹುವಿನಿಂದಾಗಿ ನೀವು ತೊಂದರೆಗೀಡಾಗಿದ್ದರೆ ಮತ್ತು ಅದಕ್ಕೆ ಚಿಕಿತ್ಸೆ ಪಡೆಯಲು ಬಯಸೋದಾದ್ರೆ, ರಾತ್ರಿಯಲ್ಲಿ ಕಂಬಳಿಗಳನ್ನು ದಾನ ಮಾಡಿ. ನೀವು ಅಗತ್ಯವಿರುವವರಿಗೆ ಕಂಬಳಿಗಳನ್ನು ವಿತರಿಸಿದಾಗ, ಅದು ನಿಮ್ಮ ಜೀವನದ ಅಡೆತಡೆಗಳನ್ನು ತೆಗೆದುಹಾಕುತ್ತೆ.
ಬಡವರಿಗೆ ಆಹಾರ(Food) ಒದಗಿಸಿ
ವ್ಯಕ್ತಿಯ ಜೀವನದಲ್ಲಿ ತೊಂದರೆಗೆ ಮುಖ್ಯ ಕಾರಣ ಆತನ ಕೆಲಸ. ನಿಮ್ಮ ವಿಷಯದಲ್ಲಿ ಹೀಗಿದ್ದರೆ ಮತ್ತು ಕೆಲಸದಲ್ಲಿ ಪ್ರಗತಿ ಸಾಧಿಸಲು ನೀವು ಬಯಸೋದಾದ್ರೆ, ರಾತ್ರಿಯಲ್ಲಿ ದೇವಾಲಯದ ಹೊರಗೆ ಕುಳಿತಿರುವ ಹಸಿದ ವ್ಯಕ್ತಿಗೆ ಆಹಾರ ನೀಡಬೇಕು.
ಈ ತಪ್ಪುಗಳನ್ನು ಮಾಡಬೇಡಿ
ಉತ್ತಮ ಜೀವನಕ್ಕಾಗಿ(Life) ಸೂರ್ಯಾಸ್ತದ ನಂತರ ಈ ಕೆಲಸಗಳನ್ನು ಮಾಡಲೇಬೇಡಿ. ರಾತ್ರಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದ್ದರೂ, ಕೆಲವು ಕೆಲಸ ಮಾಡೋದನ್ನು ತಪ್ಪಿಸಬೇಕು. ಇಲ್ಲಿ ಕೆಳಗೆ ನೀಡಲಾದ ಕೆಲಸಗಳನ್ನು ಮಾಡದೇ ಇದ್ದರೆ ಜೀವನ ನೆಮ್ಮದಿಯಾಗಿರುತ್ತೆ.
ಸೂರ್ಯಾಸ್ತದ ನಂತರ ಎಂದಿಗೂ ಸ್ನಾನ ಮಾಡಬೇಡಿ. ಇದನ್ನು ಮಾಡೋದರಿಂದ, ಮಾತೆ ಲಕ್ಷ್ಮಿ(Goddess Lakshmi) ಕೋಪಗೊಳ್ಳುತ್ತಾಳೆ ಎಂದು ನಂಬಲಾಗಿದೆ.
ಸೂರ್ಯಾಸ್ತದ ನಂತರ ಯಾವುದೇ ವ್ಯಕ್ತಿ ಮನೆಯನ್ನು ಗುಡಿಸುವಂತಿಲ್ಲ. ಹೀಗೆ ಮಾಡಿದ್ರೆ ಲಕ್ಷ್ಮಿಗೆ ಸಿಟ್ಟು ಬರುತ್ತೆ.
ಸೂರ್ಯಾಸ್ತದ ನಂತರ ಹಾಲು, ಮೊಸರು ಮತ್ತು ಅರಿಶಿನವನ್ನು ದಾನ ಮಾಡಬೇಡಿ.