- Home
- Karnataka Districts
- Uttara Kannada
- Chinnaswamy Stadium Stampede: 1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!
Chinnaswamy Stadium Stampede: 1 ವರ್ಷದ ಹಿಂದೆ ಮದುವೆ, ಪತಿಯನ್ನು ಬಿಟ್ಟಿರದ CA ಅಕ್ಷತಾ ಬಾರದೂರಿಗೆ ಪ್ರಯಾಣಿಸಿದ್ರು! ತಂದೆ ಕಣ್ಣೀರು!
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣವಾಗಿದ್ದು, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ರವೀಂದ್ರ ನಗರದ ಸೊಸೆ ಅಕ್ಷತಾ ಸಾವನ್ನಪ್ಪಿದ್ದಾರೆ. ಗಂಡನ ಎದುರೇ ಹೆಂಡತಿ ಅಕ್ಷತಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ.

ಒಂದು ವರ್ಷದ ಹಿಂದೆಯಷ್ಟೇ ಅಕ್ಷತಾ, ಆಯಶ್ ಮದುವೆಯಾಗಿದ್ದರು. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ದಂಪತಿ ವಾಸ ಮಾಡ್ತಿದ್ರು. ಪತಿ ಆಶಯ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು. ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಸ್ಟೇಡಿಯಂಗೆ ಬಂದಿದ್ರು. ಈ ವೇಳೆ ಕಾಲ್ತುಳಿತವಾಗಿ ಗಂಡನ ಎದುರೇ ಪತ್ನಿ ಸಾವನ್ನಪ್ಪಿದ್ದಾರೆ. ಮೃತ ಅಕ್ಷತಾ ಪೈ (26) ಮರಣೋತ್ತರ ಪರೀಕ್ಷೆ ಈಗಾಗಲೇ ಮುಕ್ತಾಯವಾಗಿದ್ದು, ಮೃತದೇಹ ಸಿದ್ದಾಪುರ ತಲುಪಿದೆ.
“ನಾನು ಅಳಿಯನಿಗೆ, ಹಿರಿ ಮಗಳಿಗೆ, ಕಿರಿ ಮಗಳಿಗೆ ಫೋನ್ ಮಾಡಿದಾಗ ಯಾರೂ ಫೋನ್ ರಿಸೀವ್ ಮಾಡಲಿಲ್ಲ. ರಾತ್ರಿ 10 ಗಂಟೆಗೆ ಮಗಳಿಗೆ ಹೀಗಾಯ್ತು ಅಂತ ಫೋನ್ ಬಂತು. ನನ್ನ ಇಬ್ಬರೂ ಮಕ್ಕಳು ಬುದ್ಧಿವಂತರು. ನನ್ನ ಮಗಳು ಸಿಎ ಮಾಡಿದ್ದು, ಮುಂದೆ ಏನಾದರೂ ಮಾಡಬೇಕು ಎಂದುಕೊಂಡಿದ್ದಳು” ಎಂದು ಅಕ್ಷತಾ ತಂದೆ ಮಾಧ್ಯಮದ ಜೊತೆ ಹೇಳಿದ್ದಾರೆ.
“ನನ್ನ ಮಗ-ಅಳಿಯ ಒಬ್ಬರಿಗೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಮನೆಗೆ ಬರುವಾಗಲೂ ಇಬ್ಬರೂ ಒಟ್ಟಿಗೆ ಬರುತ್ತಿದ್ದರು. ನನ್ನ ಅಳಿಯ ಕೂಡ ಬಿದ್ದಿದ್ದು, ಗಾಯ ಆಗಿತ್ತು. ಬೇರೆಯವರೊಬ್ಬರು ಎಬ್ಬಿಸಿದ್ದರು. ಆಮೇಲೆ ಅಲೆದಾಡಿದ ಬಳಿಕ ಬೋರಿಂಗ್ ಆಸ್ಪತ್ರೆಯಿಂದ ಅವರಿಗೆ ಫೋನ್ ಬಂದಿದೆ ಅಷ್ಟೇ. ನಾನು ಮಗಳ ಜೊತೆ ಅಪರೂಪಕ್ಕೆ ಮಾತಾಡುತ್ತಿದ್ದೆ. ನಾನು ಹಾರ್ಟ್ ಪೇಶಂಟ್, ಹೀಗಾಗಿ ನನಗೆ ನೇರವಾಗಿ ಯಾರೂ ವಿಷಯವನ್ನು ತಿಳಿಸಿರಲಿಲ್ಲ” ಎಂದು ಮೃತ ಅಕ್ಷತಾ ತಂದೆ ಹೇಳಿದ್ದಾರೆ.
“ಆರ್‌ಸಿಬಿ ಪರೈಡ್ ಇತ್ತು ಅಂತ ನಮಗೆ ಗೊತ್ತಾಗಿತ್ತು. ನಾನು, ನನ್ನ ಹೆಂಡ್ತಿ ಇಬ್ಬರೂ ಹೋಗೋಣ ಅಂತ ಜೆರ್ಸಿ ಖರೀದಿ ಮಾಡಿ, ಆಫೀಸ್‌ಗೆ ರಜೆ ಹಾಕಿ ಇಬ್ಬರೂ ಪ್ಲ್ಯಾನ್ ಮಾಡಿ ಹೊರಟಿದ್ದೆವು. ಪರೈಡ್ ಇರಲಿಲ್ಲ, ಫ್ರೀ ಎಂಟ್ರೆನ್ಸ್ ಇದೆ ಅಂದರು. ನಾವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಟ್ 17 ಒಪನ್ ಇತ್ತು. ಸ್ಟೇಡಿಯಂ ತುಂಬ ಜನರು ಬಂದರು, ನೂಕು ನುಗ್ಗುಲು ಇತ್ತು. ನಾನು ಬ್ಯಾರೀಕೇಡ್ ಸೈಡ್‌ನಲ್ಲಿದ್ದೆ, ನನ್ನ ಪಕ್ಕದಲ್ಲಿ ಹೆಂಡ್ತಿ ಇದ್ದಳು, ನನ್ನ ಹೆಂಡ್ತಿ ನನ್ನ ಕೈ ಹಿಡಿದುಕೊಂಡು ಇದ್ದಳು. ನಮ್ಮನ್ನು ನೂಕಿದಾಗ ಹೆಂಡ್ತಿ, ಕೈತಪ್ಪಿ ಹೋದಳು. ನನ್ನ ಮುಂದೆಯೇ ಓರ್ವನ ಜೀವನ ಹೋಗಿತ್ತು. ಅಲ್ಲಿದ್ದವರ ಬಳಿ ನನ್ನ ಹೆಂಡ್ತಿ ಬಗ್ಗೆ ಕೇಳಿದಳು” ಎಂದು ಅಕ್ಷತಾ ಪತಿ ಆಶಯ್ ಹೇಳಿದ್ದಾರೆ.
“ವೈದೇಹಿ ಆಸ್ಪತ್ರೆಗೆ ಒಂದಷ್ಟು ಜನರನ್ನು ಕರೆದುಕೊಂಡು ಹೋಗಿದ್ದಾರೆ ಅಂತ ಹೇಳಿದ್ದರು. ಅಲ್ಲಿ ಹೋದಾಗಲೂ ಕೂಡ ನನ್ನ ಹೆಂಡ್ತಿ ಕಾಣಲಿಲ್ಲ. ಆಮೇಲೆ ಹೆಂಡ್ತಿ ತಂಗಿ, ಕಸಿನ್‌ಗೆ ಫೋನ್ ಮಾಡಿದ್ದೆ. ಆಮೇಲೆ ಬೋರಿಂಗ್ ಆಸ್ಪತ್ರೆಗೆ ಹೋದಾಗ ವೈದ್ಯರು, ನಿಮ್ಮ ಹೆಂಡ್ತಿಯನ್ನು ಕರೆದುಕೊಂಡು ಬರುವಾಗಲೇ ಸಾವಾಗಿದೆ ಎಂದಿದ್ದರು” ಎಂದು ಅಕ್ಷತಾ ಪೈ ಪತಿ ಹೇಳಿದ್ದಾರೆ.
ಇನ್ನು ಉತ್ತರಕನ್ನಡ ಜಿಲ್ಲೆಯ ಎಂಪಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.