- Home
- Entertainment
- TV Talk
- ಯಾಕೋ ವಿಶ್ವ, ನೀನು ಹಿಂಗೆ? ತಲೆ ತಲೆ ಚಚ್ಚಿಕೊಂಡ ವೀಕ್ಷಕರು, ಇತ್ತ ಚಿನ್ನುಮರಿ ಸನೀಹದಲ್ಲಿ ಸೈಕೋ ಜಯಂತ್
ಯಾಕೋ ವಿಶ್ವ, ನೀನು ಹಿಂಗೆ? ತಲೆ ತಲೆ ಚಚ್ಚಿಕೊಂಡ ವೀಕ್ಷಕರು, ಇತ್ತ ಚಿನ್ನುಮರಿ ಸನೀಹದಲ್ಲಿ ಸೈಕೋ ಜಯಂತ್
Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ವಿಶ್ವ ಮತ್ತು ಜಾನು ಮುಖಾಮುಖಿಯಾಗಿದ್ದಾರೆ. ತನು ಜೊತೆ ವಿಶ್ವನ ನಿಶ್ಚಿತಾರ್ಥ ನೆರವೇರಿದ ಸಂದರ್ಭದಲ್ಲಿಯೇ ವಿಶ್ವನಿಗೆ ಜಾನು ಸಿಕ್ಕಿದ್ದಾಳೆ. ಇಬ್ಬರ ಭೇಟಿಯ ನಂತರ ಮುಂದೇನು ಎಂಬುದು ಕುತೂಹಲ ಮೂಡಿಸಿದೆ.

ಸುಮಾರು ಸಂಚಿಕೆ ಬಳಿಕ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ವಿಶ್ವ ಮತ್ತು ಜಾನು ಮುಖಾಮುಖಿಯಾಗಿದ್ದಾರೆ. ಜಾನು ಸತ್ತಿದ್ದಾಳೆ ಒಳಗೊಳಗೆ ಕಣ್ಣೀರು ಹಾಕುತ್ತಿದ್ದ ವಿಶ್ವನಿಗೆ ಕೊನೆಗೂ ಆತನಿಗೆ ಪ್ರೇಯಸಿ ಜಾನು ಸಿಕ್ಕಿದ್ದಾಳೆ. ಜಾನು ಸಿಕ್ಕಿದ್ದು ಸ್ವಲ್ಪ ಲೇಟ್ ಆಗಿದೆ. ಕಾರಣ ತನು ಜೊತೆ ವಿಶ್ವನ ನಿಶ್ಚಿತಾರ್ಥ ನೆರವೇರಿದೆ. ಇತ್ತೀಚೆಗಷ್ಟೇ ತನು ಮೇಲೆ ವಿಶ್ವ ಆಕರ್ಷಿತನಾಗುತ್ತಿದ್ದ. ಈ ಸಂದರ್ಭದಲ್ಲಿಯೇ ವಿಶ್ವ ಮತ್ತು ಜಾನು ಮುಖಾಮುಖಿಯಾಗಿದ್ದಾರೆ. ಇಬ್ಬರ ಭೇಟಿಯ ನಂತರ ಮುಂದೇನು ಸೇರಿದಂತೆ ಹಲವು ಪ್ರಶ್ನೆಗಳು ವೀಕ್ಷಕರಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿವೆ.
ಇತ್ತ ಕಾಲೇಜಿನಲ್ಲಿ ವಿಶ್ವ ಪ್ರೀತಿಸುತ್ತಿದ್ದ ಹುಡುಗಿ ತಾನೇ ಎಂಬ ಸತ್ಯ ಜಾನುಗೆ ಅರಿವಾಗಿದೆ. ವಿಶ್ವನ ರೂಮ್‌ನಲ್ಲಿದ್ದ ಪ್ರೇಮದ ಓಲೆ, ಫೋಟೋಗಳೆಲ್ಲವನ್ನು ಜಾನು ನೋಡಿದ್ದಾಳೆ. ಇದೆಲ್ಲವನ್ನು ನೋಡಿದ ಜಾನು, ಇನ್ಮುಂದೆ ತಾನಿಲ್ಲಿರೋದು ಸೂಕ್ತವಲ್ಲ ಅನ್ನೋದು ತಿಳಿಯುತ್ತಿದ್ದಂತೆ ನರಸಿಂಹ-ಲಲಿತಾಗೂ ಹೇಳದೇ ಮನೆಯಿಂದ ಹೊರಟಿದ್ದಾಳೆ. ತನ್ನ ನಿಶ್ಚಿತಾರ್ಥದಲ್ಲಿ ಹಾಡು ಹೇಳಿದ್ದ ಚಂದನಾಳೇ ತನ್ನ ಜಾನು ಎಂದು ವಿಶ್ವನಿಗೆ ಗೊತ್ತಾಗಿತ್ತು. ಹಾಗಾಗಿ ಚಂದನಾಳನ್ನ ಬೆನ್ನತ್ತಿದ್ದ ವಿಶ್ವನಿಗೆ ಜಾನು ಸಿಕ್ಕಿದ್ದಾಳೆ.
ವಿಶ್ವನ ಮುಂದೆ ಜಾನು ತನ್ನ ಎಲ್ಲಾ ಕಷ್ಟಗಳನ್ನು ಹೇಳಿಕೊಳ್ಳಬಹುದು. ಗಂಡ ಜಯಂತ್ ಸೈಕೋ, ಆತನ ಅನುಮಾನದಿಂದ ತನಗೆ ಗರ್ಭಪಾತ ಆಯ್ತು. ಪ್ರಾಣ ಕಳೆದುಕೊಳ್ಳಲು ಹೋದರು ದೇವರ ಕೃಪೆಯಿಂದ ಜೀವ ಉಳಿಯಿತು. ಬದುಕು ನಿನ್ನ ಮನೆಗೆ ಕರೆದುಕೊಂಡು ಬಂತು ಎಂದು ಜಾನು ಹೇಳಿದ್ದಾಳೆ. ಆದ್ರೆ ಜಾನು ಕೇಳುವ ಪ್ರಶ್ನೆಗೆ ಉತ್ತರಿಸಲು ವಿಶ್ವ ಹಿಂದೇಟು ಹಾಕುತ್ತಿದ್ದಾನೆ. ಇದನ್ನು ನೋಡಿದ ವೀಕ್ಷಕರು, ಯಾಕೋ ವಿಶ್ವ ನೀನು ಹಿಂಗೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಜಾನು ನೇರವಾಗಿ ವಿಶ್ವನಿಗೆ ನೇರವಾಗಿಯೇ ನೀನು ಕಾಲೇಜಿನಲ್ಲಿ ಪ್ರೀತಿಸುತ್ತಿದ್ದ ಹುಡುಗಿಯ ಹೆಸರು ಏನು ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಲು ವಿಶ್ವ ತಡವರಿಸಿದ್ದಾನೆ. ಈಗಲಾದ್ರೂ ತನ್ನ ಪ್ರೀತಿಯನ್ನು ವಿಶ್ವ ಹೇಳಿಕೊಳ್ಳುತ್ತಾನಾ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಆದ್ರೆ ತನು ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರೋದು ವಿಶ್ವ ಸಂಕಷ್ಟದಲ್ಲಿ ಸಿಲುಕಿದ್ದಾನೆ. ವಿಶ್ವನ ಮೇಲೆಯೂ ಜಾನು ಕೋಪಿಸಿಕೊಂಡಿದ್ದು, ತನ್ನ ಗೆಳೆತನವನ್ನು ತಪ್ಪಾಗಿ ತಿಳಿದು ಮೋಸ ಮಾಡಿದ್ದಾನೆ ಎಂದು ಕಣ್ಣೀರು ಹಾಕಿದ್ದಾಳೆ.
ಇತ್ತ ಸೈಕೋ ಜಯಂತ್‌ಗೂ ಜಾನು ಬದುಕಿರೋದು ಖಚಿತವಾಗಿದೆ. ಜಾನು ಓದಿರುವ ಕಾಲೇಜಿಗೆ ತೆರಳಿ ಆಕೆಯ ಗೆಳೆಯರು ಯಾರು ಎಂದು ಪತ್ತೆ ಮಾಡಲು ಮುಂದಾಗಿದ್ದಾನೆ. ಆದ್ರೆ ಜಯಂತ್‌ಗೆ ಜಾಹ್ನವಿಯ ಬೆಸ್ಟ್ ಫ್ರೆಂಡ್ ಹೆಸರು ಮಾತ್ರ ಗೊತ್ತಾಗಿಲ್ಲ. ಜಾನು ಸಹ ಆತನನ್ನು ಗೂಬೆ ಎಂದು ಹೇಳಿದ್ದಳು. ಮನೆಯಲ್ಲಿ ಸಿಕ್ಕ ಚೀಟಿಯಲ್ಲಿಯೂ ಗೂಬೆ ಎಂದು ಹೆಸರಿತ್ತು. ಹಾಗಾಗಿ ಈ ಗೂಬೆ ಯಾರು ಅನ್ನೋ ಪ್ರಶ್ನೆ ಜಯಂತ್‌ನ ತಲೆಯಲ್ಲಿ ಕಾಡುತ್ತಿದೆ. ಇದೀಗ ಜಾನು, ವಿಶ್ವ ಮತ್ತು ಜಯಂತ್ ಮೂವರು ಒಂದೇ ಸಮಯದಲ್ಲಿ ಭೇಟಿಯಾದ್ರೆ ಹೇಗಿರುತ್ತೆ ಎಂದು ವೀಕ್ಷಕರು ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

