Amruthadhaare: ಗೌತಮ್ ಮುಂದೆ ಬಯಲಾದ 2 ರಹಸ್ಯ; ಇಬ್ಬರ ಅಂತ್ಯವೇ ಫುಲ್ ಸಸ್ಪೆನ್ಸ್
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮುಂದೆ ಭೂಮಿಕಾ ಮತ್ತು ದೀಪಿಕಾಳ ರಹಸ್ಯ ಬಯಲಾಗಿದೆ. ಹಾಗೆಯೇ ತಾಯಿ ಶಕುಂತಲಾಳ ಅಸಲಿ ಮುಖ ಕೂಡ ರಿವೀಲ್ ಆಗಿದೆ. ಮುಂದೆ ಜೈದೇವ್ ಮತ್ತು ಶಕುಂತಲಾ ಪಾತ್ರಗಳ ಅಂತ್ಯ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ಅಮೃತಧಾರೆ ಸೀರಿಯಲ್
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಎರಡು ಸತ್ಯಗಳು ಅನಾವರಣಗೊಳ್ಳಲಿದೆ. ವಿದೇಶದಿಂದ ಆಗಮಿಸಿರುವ ಗೌತಮ್ಗೆ ತನ್ನ ಮನೆಯಲ್ಲಿರೋದು ಭೂಮಿಕಾ ಅಲ್ಲ, ದೀಪಿಕಾ ಅನ್ನೋ ಸತ್ಯ ಬಹಿರಂಗಗೊಂಡಿದೆ. ಹಾಗೆಯೇ ತಾಯಿ ಶಕುಂತಲಾ ಬದಲಾಗಿಲ್ಲ ಎಂದ ಸ್ಪೋಟಕ ವಿಷಯವೂ ಗೌತಮ್ ಮುಂದೆ ರಿವೀಲ್ ಆಗಿದೆ.
ಭೂಮಿಕಾ-ದೀಪಿಕಾ
ಮನೆಯಲ್ಲಿರೋ ದೀಪಿಕಾ ಮೇಲೆ ಅನುಮಾನಗೊಂಡು ಆಕೆಯನ್ನು ಪಾರ್ಥ್ ಫಾಲೋ ಮಾಡಿದ್ದನು. ಪಾರ್ಥ ಹೇಳಿದಂತೆ ಆಸ್ಪತ್ರೆಗೆ ಬಂದ ಗೌತಮ್ಗೆ ಭೂಮಿಕಾ ಜೊತೆಯಲ್ಲಿ ದೀಪಿಕಾ ಇರೋದನ್ನು ನೋಡಿದ್ದಾನೆ. ಇತ್ತ ಭೂಮಿಕಾ ಗಂಡ ಗೌತಮ್ನನ್ನು ನೋಡುತ್ತಿದ್ದಂತೆ ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದ್ದಾಳೆ. ಹಾಗೆಯೇ ತನ್ನಂತೆಯೇ ಹೋಲುವ ದೀಪಿಕಾಳನ್ನು ಇಲ್ಲಿಗೆ ಕರೆದುಕೊಂಡು ಬಂದಿರೋದು ಶಕುಂತಲಾ ಎಂದು ಹೇಳಿದ್ದಾಳೆ.
ದೀಪಿಕಾಗೆ ಸಿಗಲಿದೆ ಕುಟುಂಬ
ಒಂದೆಡೆ ಭೂಮಿಕಾ-ದೀಪಿಕಾ ಪ್ರತಿರೂಪದ ಅನಾವರಣಗೊಂಡಿದ್ರೆ, ಅತ್ತ ಮಂದಾಕಿನಿ ತನಗೆ ಅವಳಿ ಮಕ್ಕಳು ಜನಿಸಿದ್ದ ವಿಷಯವನ್ನು ಸೊಸೆ ಮಹಿಮಾ ಮುಂದೆ ಹೇಳಿಕೊಂಡಿದ್ದಾಳೆ. ಇತ್ತ ತನ್ನವರಿಗಾಗಿ ಹುಡುಕಾಟ ನಡೆಸುತ್ತಿರೋ ದೀಪಿಕಾಗೆ ಕಳೆದುಕೊಂಡಿರುವ ಕುಟುಂಬ ಶೀಘ್ರದಲ್ಲಿಯೇ ಸಿಗಲಿದೆ.
ಕಥೆ ಮುಂದೇನು?
ಅಮೃತಧಾರೆ ಸೀರಿಯಲ್ ನಡೆಯುತ್ತಿರೋದು ಶಕುಂತಲಾ ಪಾತ್ರದಿಂದ, ಇನ್ನೇನು ಕಥೆ ಮುಗೀತು ಅಂದುಕೊಳ್ಳುವಷ್ಟರಲ್ಲಿ ಶಕುಂತಲಾಗೆ ಮತ್ತೆ ವಿಲನ್ ರೂಪಕ್ಕೆ ತೆಗೆದುಕೊಂಡು ಬರಲಾಗಿತ್ತು. ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದು, ಕೆಡಿ ಮಗ ಜೈದೇವ್ಗೆ ಶಕುಂತಲಾ ಬೆನ್ನುಲಾಬಿಗೆ ನಿಂತಿದ್ದಳು.
ಜೈದೇವ್-ಶಕುಂತಲಾ
ಹಾಗೆಯೇ ಎಷ್ಟೇ ತಪ್ಪುಗಳನ್ನು ಮಾಡಿದ್ರೆ ಚಿರಂಜೀವಿಯಂತೆ ಬದುಕಿ ಬರುತ್ತಿರೋ ಜೈದೇವ್ ಈ ಸೀರಿಯಲ್ ಪ್ರಮುಖ ಪಾತ್ರ. ಗೌತಮ್ ಮುಂದೆ ಜೈದೇವ್ ಜೊತೆಯಲ್ಲಿ ತಾಯಿ ಶಕುಂತಲಾಳ ನೀಚತನ ಬಯಲಾಗಿದೆ. ಅಕ್ಕ-ತಂಗಿಯನ್ನು ಒಂದಾಗಿಸಿ, ತಾಯಿ-ಮಗನ ಪಾತ್ರವನ್ನು ಹೇಗೆ ಅಂತ್ಯ ಮಾಡಲಾಗುತ್ತೆ ಅನ್ನೋದು ಕಥೆಯ ಮುಂದಿನ ಸಸ್ಪೆನ್ಸ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





