ನಿಶ್ಚಿತಾರ್ಥ ಮಾಡಿಕೊಂಡ 'ಪಾರು' ನಟ ಶರತ್; ಹುಡುಗಿ ಯಾರು ನೋಡಿ
ಪಾರು, ಪುಟ್ಮಲ್ಲಿ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟ ಶರತ್ ಪದ್ಮನಾಭ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಆದಿತ್ಯ ಪಾತ್ರದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ನಟ ಶರತ್ ಪದ್ಮನಾಭ್ ಮತ್ತು ದಿವ್ಯಶ್ರೀ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಿವ್ಯಶ್ರೀ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ.
ನಿಶ್ಚಿತಾರ್ಥಕ್ಕೆ ಕಿರುತೆರೆ ಮತ್ತು ಸ್ಯಾಂಡಲ್ವುಡ್ ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿ ಶುಭ ಹಾರೈಸಿದ್ದಾರೆ. ಮದುವೆ ದಿನಾಂಕದ ಬಗ್ಗೆ ಮಾಹಿತಿ ಲಭ್ಯವಿಲ್ಲ.
ಗ್ರಾಫಿಕ್ಟ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಶರತ್ ವೃತ್ತಿಯಲ್ಲಿ ಇಂಜಿನಿಯರ್. ಸ್ಟಾರ್ ಸುವರ್ಣ ವಾಹಿನಿಯಲ್ಲಿ ದಿಲೀಪ್ ರಾಜ್ ಪ್ರೊಡಕ್ಷನ್ ಹೌಸ್ ಸೀರಿಯಲ್ನಲ್ಲಿ ಶರತ್ ಮೊದಲ ಅಭಿನಯಿಸಿದ್ದು.
ನೀವು ಕರೆ ಮಾಡಿದ ಚಂದಾದಾರರು ಸಿನಿಮಾದಲ್ಲಿ ಶರತ್ ಅಭಿನಯಿಸಿದ್ದಾರೆ.ಪುಟ್ಮಲ್ಲಿ ಮತ್ತು ಪಾರು ಧಾರಾವಾಹಿಯಲ್ಲಿ ಸದ್ಯಕ್ಕೆ ನಟಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 69 ಸಾವಿರ ಫಾಲೋವರ್ಸ್ ಹೊಂದಿರುವ ಶರತ್ ಪದ್ಮನಾಭ್ ಪ್ರತಿ ಸಲವೂ ಜೀ ಕುಟುಂಬ ಅವಾರ್ಡ್ ಪಡೆದುಕೊಳ್ಳುತ್ತಾರೆ. ಪಾರು ಧಾರಾವಾಹಿ 1000 ಸಂಚಿಕೆ ಪೂರೈಸಿದೆ.