- Home
- Entertainment
- TV Talk
- Naa Ninna Bidalaare: ದೆವ್ವ ಆದ್ರೆ ಏನಾಯ್ತು? ಗಂಡ-ಹೆಂಡ್ತಿ ಮಲಗಿರೋದನ್ನು ನೋಡೋದು ಎಷ್ಟು ಸರಿ?
Naa Ninna Bidalaare: ದೆವ್ವ ಆದ್ರೆ ಏನಾಯ್ತು? ಗಂಡ-ಹೆಂಡ್ತಿ ಮಲಗಿರೋದನ್ನು ನೋಡೋದು ಎಷ್ಟು ಸರಿ?
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ದೆವ್ವವಾಗಿರುವ ಅಂಬಿಕಾ, ಶರತ್ ಮತ್ತು ದುರ್ಗಾಳನ್ನು ಒಂದು ಮಾಡಲು ನಾನಾ ತಂತ್ರಗಳನ್ನು ಮಾಡುತ್ತಿದ್ದಾಳೆ. ಅವರಿಬ್ಬರು ಮಲಗಿದ್ದ ಕೋಣೆಗೆ ಬಂದು ಎಸಿ ತಾಪಮಾನ ಕಡಿಮೆ ಮಾಡಿ ಹತ್ತಿರ ತರುವ ಪ್ರಯತ್ನ ಮಾಡಿದ್ದಾಳೆ.

ನಾ ನಿನ್ನ ಬಿಡಲಾರೆ
ಜೀ ಕನ್ನಡ ವಾಹಿನಿಯ 'ನಾ ನಿನ್ನ ಬಿಡಲಾರೆ' ಸೀರಿಯಲ್ ಆರಂಭದಿಂದಲೂ ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಶರತ್ ಮತ್ತು ದುರ್ಗಾ ಮದುವೆಯಾಗಿದ್ರೂ ಸ್ನೇಹಿತರಾಗಿರಲು ನಿರ್ಧರಿಸಿದ್ದಾರೆ. ಆದ್ರೆ ಇವರಿಬ್ಬರನ್ನು ಒಂದು ಮಾಡಲು ದೆವ್ವವಾಗಿರೋ ಅಂಬಿಕಾ ಪ್ರಯತ್ನಿಸುತ್ತಿರುತ್ತಾಳೆ.
ಶರತ್‌ಗೆ ದುರ್ಗಾ ಬೆಸ್ಟ್ ಪೇರ್
ಶರತ್‌ಗೆ ದುರ್ಗಾ ಬೆಸ್ಟ್ ಪೇರ್ ಅಂತ ಗೊತ್ತಾಗುತ್ತಲೇ ಇಬ್ಬರಿಗೂ ಪ್ರೇಮಾಂಕುರವಾಗುವಂತೆ ಅಂಬಿಕಾ ಪ್ರಯತ್ನಿಸುತ್ತಿದ್ದಾಳೆ. ಈಗಾಗಲೇ ಅಪ್ಪ ಶಂಭು ಸಹಾಯದಿಂದ ಶರತ್ ಕನಸಿನಲ್ಲಿ ಬಂದು ದುರ್ಗಾಳನ್ನು ಪ್ರೀತಿಸುವಂತೆ ಅಂಬಿಕಾ ಹೇಳಿದ್ದಾಳೆ. ಈ ಕನಸಿನಿಂದಾಗಿ ಶರತ್ ಗೊಂದಲಕ್ಕೀಡಾಗಿದ್ದಾನೆ. ಶರತ್ ಮತ್ತು ದುರ್ಗಾ ಮಲಗಿದ್ದಾಗ ಕೋಣೆಗೆ ಅಂಬಿಕಾ ಬಂದಿರೋದಕ್ಕೆ ಕೆಲ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಂಬಿಕಾ ದೆವ್ವ
ಸೀರಿಯಲ್‌ನಲ್ಲಿ ಅಂಬಿಕಾ ದೆವ್ವ ಆಗಿರುವ ಕಾರಣ ಎಲ್ಲಿ ಬೇಕಾದ್ರೂ ಪ್ರತ್ಯಕ್ಷವಾಗುವ ಶಕ್ತಿಯಿದೆ. ಹಾಗಂತ ಎಲ್ಲೆಂದರಲ್ಲಿ ಬರೋದು ತಪ್ಪು. ಗಂಡ-ಹೆಂಡ್ತಿ ಮಲಗಿದ್ದಾಗ ಅಂಬಿಕಾ ಆಗಮಿಸಿರೋದು ತಪ್ಪು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಟೆಂಪ್ರೇಚರ್ ಮೈನಸ್
ಒಂದೇ ಬೆಡ್ ಮೇಲೆ ಮಲಗಿದ್ರೂ ಶರತ್ ಮತ್ತು ದುರ್ಗಾ ನಡುವೆ ತುಂಬಾ ಅಂತರವಿರುತ್ತದೆ. ಇದನ್ನು ನೋಡಿದ ಅಂಬಿಕಾ, ಇವರಿಬ್ಬರ ನಡುವೆ ನ್ಯಾಷನಲ್ ಹೈವೇ ಮಾಡಬಹುದು ಎಂದು ಹೇಳಿ ಎಸಿಯ ತಾಪಮಾನವನ್ನು ಇಳಿಕೆ ಮಾಡುತ್ತಾಳೆ. ಎಸಿ ಟೆಂಪ್ರೇಚರ್ ಮೈನಸ್ ಆಗುತ್ತಿದ್ದಂತೆ ಶರತ್ ಮತ್ತು ದುರ್ಗಾ ಹತ್ತಿರವಾಗುತ್ತಾರೆ.
ಇದನ್ನೂ ಓದಿ: Naa Ninna Bidalaare: ಶರತ್ ಮೇಲೆ ಲವ್ ಆಗ್ತಿದ್ದಂತೆಯೇ ಲುಕ್ಕೇ ಬದಲಾಯಿಸಿ ಹಾಟ್ ಅವತಾರದಲ್ಲಿ ದುರ್ಗಾ!
ಮಾಳವಿಕಾ ಹೊಸ ಪ್ಲಾನ್
ಮತ್ತೊಂದೆಡೆ ದೇವಸ್ಥಾನದ ಪುರಾತನ ಚಿನ್ನಾಭರಣಗಳ ಮೇಲೆ ಮಾಳವಿಕಾ ಕಣ್ಣು ಹಾಕಿದ್ದಾಳೆ. ಇದಕ್ಕಾಗಿ ದೇವಸ್ಥಾನಗಳಿಗೆ ದೇಣಿಗೆ ನೀಡಿ ಆಡಳಿತ ಮಂಡಳಿಯ ಟ್ರಸ್ಟಿಯಾಗಿದ್ದಾಳೆ. ಈ ವಿಷಯ ತಿಳಿದ ಶಂಭು, ಭವಿಷ್ಯದಲ್ಲಿ ಅಪಾಯವಿದ್ದು, ಮಗಳು ಅಂಬಿಕಾಗೆ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿದ್ದಾಳೆ. ಮತ್ತೊಂದೆಡೆ ಮಾಳವಿಕಾ ಸತ್ಯ ತಿಳಿದಿರುವ ಮಾಯಾ, ಮಂಕಾಗಿದ್ದಾಳೆ.
ಇದನ್ನೂ ಓದಿ: Naa Ninna Bidalaare Serial ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ಗೆ ಸರ್ಜರಿ; ಸದ್ಯ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

