- Home
- Entertainment
- TV Talk
- ಅಬ್ಬಬ್ಬಾ..ಸೊಸೆಗೆ ತಕ್ಕಂತೆ ಮಾಡರ್ನ್ ಡ್ರೆಸ್ ಹಾಕಿದ ʼಲಕ್ಷ್ಮೀ ನಿವಾಸʼ ನಟಿ ಮಾನಸಾ ಮನೋಹರ್ ಅತ್ತೆ! ಗೋವಾ Photos
ಅಬ್ಬಬ್ಬಾ..ಸೊಸೆಗೆ ತಕ್ಕಂತೆ ಮಾಡರ್ನ್ ಡ್ರೆಸ್ ಹಾಕಿದ ʼಲಕ್ಷ್ಮೀ ನಿವಾಸʼ ನಟಿ ಮಾನಸಾ ಮನೋಹರ್ ಅತ್ತೆ! ಗೋವಾ Photos
'ಲಕ್ಷ್ಮೀ ನಿವಾಸ' ಹಾಗೂ ʼಜೊತೆ ಜೊತೆಯಲಿʼ ಧಾರಾವಾಹಿ ನಟಿ ಮಾನಸಾ ಮನೋಹರ್ ಕುಟುಂಬವು ಗೋವಾಕ್ಕೆ ತೆರಳಿದೆ. ಅಲ್ಲಿನ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

'ಲಕ್ಷ್ಮೀ ನಿವಾಸ' ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಕುಟುಂಬದ ಜೊತೆಗೆ ಗೋವಾ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಇಡೀ ಕುಟುಂಬ ಖುಷಿ ಕ್ಷಣ ಕಳೆದಿದೆ.
ಮಾನಸಾ ಮನೋಹರ್ ಅವರು ಸದ್ಯ ʼಲಕ್ಷ್ಮೀ ನಿವಾಸʼ ಧಾರಾವಾಹಿಯಿಂದ ಬ್ರೇಕ್ ಪಡೆದು ಕುಟುಂಬದ ಜೊತೆ ಗೋವಾ, ಊಟಿ ಎಂದು ಟ್ರಿಪ್ ಮಾಡಿದ್ದಾರೆ.
ಮಾನಸಾ ಮನೋಹರ್ ಅವರು ಪತಿ, ಅತ್ತೆ, ಮಾವನ ಜೊತೆಗೆ ತೆಗೆಸಿಕೊಂಡ ಫೋಟೋ ಇದು. "ನನ್ನ ಅತ್ತೆ ತುಂಬ ಸಪೋರ್ಟಿವ್" ಎಂದು ಮಾನಸಾ ಅವರು ಸಾಕಷ್ಟು ಬಾರಿ ಸಂದರ್ಶನದಲ್ಲಿ ಹೇಳಿದ್ದರು.
ಕನ್ನಡ ನಟಿ ಮಾನಸಾ ಮನೋಹರ್ ಅವರು ಈ ಹಿಂದೆ ಒಂದು ಮದುವೆಯಾಗಿ, ಮನಸ್ತಾಪದಿಂದ ಡಿವೋರ್ಸ್ ಪಡೆದಿದ್ದರು. ಇದು ಎರಡನೇ ಮದುವೆಯಾಗಿದೆ.
ಮಾನಸಾ ಮನೋಹರ್ ಅವರು ʼಜೊತೆ ಜೊತೆಯಲಿʼ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.
ಕನ್ನಡ ನಟಿ ಮಾನಸಾ ಮನೋಹರ್ ಅವರು ಕೊರೊನಾ ವೈರಸ್ ಆಗಿ ಲಾಕ್‌ಡೌನ್ ಆದ ಟೈಮ್‌ನಲ್ಲಿ ಹೋಮ್ ವರ್ಕೌಟ್ ಮಾಡಿ 12kg ತೂಕ ಇಳಿಸಿಕೊಂಡಿದ್ದರು.
ಮ್ಯಾನಿಫೆಸ್ಟೇಶನ್ ಮೂಲಕ ನನಗೆ ನನ್ನ ಇಷ್ಟದ ಹುಡುಗ ಸಿಕ್ಕಿದ್ದಾನೆ, ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ಮಾನಸಾ ಮನೋಹರ್ ಅವರು ಹೇಳಿದ್ದಾರೆ.
ಮಾನಸಾ ಮನೋಹರ್ ಅವರು ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರವನ್ನು ಮಾಡಿದ್ದಾರೆ. ಕಂಪ್ಲೀಟ್ ಟ್ರೆಡಿಷನಲ್ ಪಾತ್ರ ಇದಾಗಿದೆ.
ಫಿಟ್‌ನೆಸ್ ಕಡೆಗೆ ಗಮನ ಕೊಡುವ ನಟಿ ಮಾನಸಾ ಮನೋಹರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ.