MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕರ್ಣನಿಗೆ ಪದೇ ಪದೇ ಆಘಾತ; ಇಷ್ಟು ದಿನ ತೊಂದ್ರೆ ಕೊಡ್ತಿದವರಿಂದಲೇ ಬಯಲಾಯ್ತು ರಹಸ್ಯ!

ಕರ್ಣನಿಗೆ ಪದೇ ಪದೇ ಆಘಾತ; ಇಷ್ಟು ದಿನ ತೊಂದ್ರೆ ಕೊಡ್ತಿದವರಿಂದಲೇ ಬಯಲಾಯ್ತು ರಹಸ್ಯ!

ಜೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ ನಕಲಿ ಸೀತಾಳಾಗಿ ಬಂದಿದ್ದ ಹೆಲೆನ್ ರಹಸ್ಯವನ್ನು ಸಂಜಯ್ ಮತ್ತು ಸುಮತಿ ಬಯಲು ಮಾಡಿದ್ದಾರೆ. ಇದರಿಂದ ತಾರಾಗೆ ದೊಡ್ಡ ಆಘಾತವಾಗಿದ್ದು, ನಿಧಿ ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿದ್ದಾಳೆ. ಇನ್ನೊಂದೆಡೆ ಭುವನೇಶ್ವರಿ ಮತ್ತು ಕರ್ಣ ಒಬ್ಬರಿಗೊಬ್ಬರು ಹತ್ತಿರವಾಗುತ್ತಿದ್ದಾರೆ.

1 Min read
Author : Mahmad Rafik
Published : Oct 26 2026, 12:04 PM IST
Share this Photo Gallery
  • FB
  • TW
  • Linkdin
  • Whatsapp
15
ಬಯಲಾಗುತ್ತಾ ತಾರಾ ಅಸಲಿ ಮುಖ?
Image Credit : Zee Kananda

ಬಯಲಾಗುತ್ತಾ ತಾರಾ ಅಸಲಿ ಮುಖ?

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುವ ಕರ್ಣ ಸೀರಿಯಲ್‌ನ ಇಂದಿನ ಸಂಚಿಕೆ ರೋಚಕ ತಿರುವು ಪಡೆದುಕೊಳ್ಳಲಿದೆ. ಹೌದು, ಕರ್ಣನ ಅಮ್ಮ ಎಂದು ಹೇಳಿಕೊಂಡು ಹೆಲೆನ್ ಬಂದಿದ್ದು, ತಾರಾ ತನ್ನ ಆಟ ಮುಂದುವರಿಸಿದ್ದಳು. ಇದೀಗ ತಾರಾಳ ತೆರೆ ಹಿಂದಿನ ಆಟಕ್ಕೆ ಸಂಜಯ್ ಮತ್ತು ಸುಮತಿ ಬ್ರೇಕ್ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಕಲಿ ಸೀತಾಳ ಅಪಹರಣ
Image Credit : Zee Kananda

ನಕಲಿ ಸೀತಾಳ ಅಪಹರಣ

ಸೀತಾ ಈ ಮನೆಯಲ್ಲಿರಬೇಕು ಅಂದ್ರೆ ಗಂಡನೊಂದಿಗೆ ಆಕೆಯ ಮದುವೆ ಮಾಡಿಸಬೇಕು ಅನ್ನೋದು ಕರ್ಣನ ತಾಯಿ ಮಾಲತಿ ಅಭಿಪ್ರಾಯವಾಗಿವೆ. ಮಾಲತಿ ಮಾತಿಗೆ ಅಜ್ಜಿ ಅನ್ನಪೂರ್ಣ ಸಹ ಸಹಮತ ವ್ಯಕ್ತಪಡಿಸುತ್ತಿದ್ದಾಳೆ. ಒಂದು ವೇಳೆ ಮನೆಯಲ್ಲಿರುವ ಸೀತಾ ಮದುವೆ ತಂದೆಯೊಂದಿಗೆ ನಡೆದ್ರೆ ತನ್ನ ಮುಂದಿನ ಭವಿಷ್ಯಕ್ಕೆ ಅಡ್ಡಿ ಎಂದು ಭಾವಿಸಿ ಸೂರಜ್ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದಾನೆ.

Related Articles

Related image1
ಬೇರೆ ಯಾರನ್ನೋ ಅಮ್ಮನೆಂದು ಅಪ್ಪಿಕೊಂಡ ಕರ್ಣ! ಹೆಂಡ್ತಿ ಮುಖ ಗೊತ್ತಿರೋ ಅಪ್ಪ ರಮೇಶ್‌ಗೆ ಈ ಮೋಸ ತಿಳಿಯಲ್ವಾ?
Related image2
ಸೆಟ್‌ನಲ್ಲಿ ನಡೆಯೋದು ಕಿರಣ್‌ ರಾಜ್‌ಗೆ ಏನೂ ಗೊತ್ತಿರೋದಿಲ್ಲ! ಕರ್ಣ ನಿಧಿಯಲ್ಲಿ ಹೆಚ್ಚು ಟಚಪ್ ಮಾಡ್ಕೊಳ್ಳೋರು ಯಾರು?
35
ಸತ್ಯ ಒಪ್ಪಿಕೊಂಡ ಹೆಲೆನ್
Image Credit : Zee Kananda

ಸತ್ಯ ಒಪ್ಪಿಕೊಂಡ ಹೆಲೆನ್

ಸಂಜಯ್‌ನ ಈ ಕೆಲಸಕ್ಕೆ ಚಿಕ್ಕಮ್ಮ ಸುಮತಿ ಸಹ ಸಾಥ್ ನೀಡಿದ್ದಾಳೆ. ಸುಮತಿ ಮತ್ತು ಸಂಜಯ್ ಜೊತೆಯಾಗಿ ಸೀತಾಳನ್ನು ಕಿಡ್ನ್ಯಾಪ್ ಮಾಡೋದನ್ನು ನೋಡಿದ ನಿಧಿ, ಮೂವರನ್ನು ಫಾಲೋ ಮಾಡಿದ್ದಾಳೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಸೀತಾಳನ್ನು ಬಂಧಿಸಿಟ್ಟು ಬೆದರಿಸಿದ್ದಾರೆ. ಸಂಜಯ್ ಚಾಕು ಹಿಡಿಯುತ್ತಿದ್ದಂತೆ ಬಂಧನದಲ್ಲಿದ್ದ ಹೆಲೆನ್, ನಾನು ಸೀತಾ ಅಲ್ಲ ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾಳೆ.

45
ಸಾಕ್ಷಿ ಆಗ್ತಾಳ ನಿಧಿ?
Image Credit : Zee Kananda

ಸಾಕ್ಷಿ ಆಗ್ತಾಳ ನಿಧಿ?

ಈ ವಿಷಯ ತಿಳಿಯುತ್ತಿದ್ದಂತೆ ನೇರವಾಗಿ ಹೆಲೆನ್‌ಳನ್ನು ಮನೆಗೆ ಕರೆದುಕೊಂಡು ಬಂದಿರೋ ಸಂಜಯ್, ಈಕೆ ಕರ್ಣನ ಅಮ್ಮ ಅಲ್ಲ ಎಂಬ ಸತ್ಯವನ್ನು ಎಲ್ಲರ ಮುಂದೆ ಸ್ಪೋಟಿಸಿದ್ದಾನೆ. ಈ ವಿಷಯ ಕೇಳುತ್ತಿದ್ದಂತೆ ಅಲ್ಲಿಯೇ ನಿಂತಿದ್ದ ತಾರಾಗೆ ಬಿಗ್ ಶಾಕ್ ಆಗಿದೆ. ಮತ್ತೊಂದೆಡೆ ನಡೆದ ಎಲ್ಲ ಘಟನೆಗೂ ನಿಧಿ ಸಾಕ್ಷಿ ಆಗ್ತಾಳಾ ಅನ್ನೋದು ಕುತೂಹಲ ಮೂಡಿಸಿದೆ.

55
ಮಗನ ಹುಡುಕಾಟದಲ್ಲಿ ಭುವನೇಶ್ವರಿ
Image Credit : Zee Kananda

ಮಗನ ಹುಡುಕಾಟದಲ್ಲಿ ಭುವನೇಶ್ವರಿ

ಇತ್ತ ಹೆಸರು ಬದಲಿಸಿಕೊಂಡು ಭುವನೇಶ್ವರಿ ಆಗಿರೋ ಸೀತಾ ಮತ್ತು ಕರ್ಣ ಒಬ್ಬರಿಗೊಬ್ಬರು ಹತ್ತಿರವಾಗುತ್ತಿದ್ದಾರೆ. ಕರ್ಣನ ಹೆಂಡತಿ ನಿಧಿ ತನ್ನ ಸ್ವಂತ ಅಣ್ಣನ ಮಗಳು ಎಂದು ತಿಳಿದಿರುವ ಭುವನೇಶ್ವರಿ, ಮನೆಗೆ ಕರೆಸಿ ರುಚಿಯಾದ ಊಟ ಸಹ ಹಾಕಿಸಿದ್ದಾಳೆ. ಕರ್ಣನಲ್ಲಿ ತನ್ನ ಮಗನನ್ನು ಕಾಣುತ್ತಿರೋ ಭುವನೇಶ್ವರಿಗೆ ಅವನೇ ತನ್ನ ಪುತ್ರ ಎಂಬ ಸತ್ಯ ಯಾವಾಗ ತಿಳಿಯುತ್ತೆ ಅನ್ನೋದನ್ನು ನಿರ್ದೇಶಕರು ಹೇಳಬೇಕಿದೆ.

ಸುಮತಿ ಮತ್ತು ಸಂಜಯ್‌ ಮಾಡಿದ ಈ ಪ್ಲಾನ್‌ನಿಂದಲೇ ನಕಲಿ ಸೀತಾಳ ಡ್ರಾಮಾ ಬಯಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಭವ್ಯಾ ಗೌಡ
ಕಿರಣ್ ರಾಜ್
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
Amruthadhaare: ಬ್ರೋ ಅದು ಭೂಮಿಕಾ ಅಲ್ಲ, ದೀಪಿಕಾ; ಬಯಲಾಗಿದ್ದು ಅರ್ಧ ಸತ್ಯ ಮಾತ್ರ
Recommended image2
ಉದ್ಯಮಿಯಾದ ಸರಿಗಮಪ ಗಾಯಕ ಬಾಳು ಬೆಳಗುಂದಿ; ಮ್ಯಾಚ್ ಬಾಕ್ಸ್ ಉದ್ಘಾಟನೆಗೆ ಹನುಮಂತ ಲಮಾಣಿ, ಮಾಳು ನಿಪನಾಳ ಸಾಥ್!
Recommended image3
ನಟಿ ಎನ್ನೋ ಕಾರಣಕ್ಕೆ ಮದುವೆ ಪ್ರಪೋಸಲ್ಸ್​ ರಿಜೆಕ್ಟ್​: ಕಲಾವಿದರ ರಿಯಲ್​ ಲೈಫ್​ ಸ್ಟೋರಿ ಹೇಳಿದ Rani Serial ಕಾವೇರಿ
Related Stories
Recommended image1
ಬೇರೆ ಯಾರನ್ನೋ ಅಮ್ಮನೆಂದು ಅಪ್ಪಿಕೊಂಡ ಕರ್ಣ! ಹೆಂಡ್ತಿ ಮುಖ ಗೊತ್ತಿರೋ ಅಪ್ಪ ರಮೇಶ್‌ಗೆ ಈ ಮೋಸ ತಿಳಿಯಲ್ವಾ?
Recommended image2
ಸೆಟ್‌ನಲ್ಲಿ ನಡೆಯೋದು ಕಿರಣ್‌ ರಾಜ್‌ಗೆ ಏನೂ ಗೊತ್ತಿರೋದಿಲ್ಲ! ಕರ್ಣ ನಿಧಿಯಲ್ಲಿ ಹೆಚ್ಚು ಟಚಪ್ ಮಾಡ್ಕೊಳ್ಳೋರು ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved