- Home
- Entertainment
- TV Talk
- 2 ನಿಮಿಷದಲ್ಲಿ ಸರಿ ಹೋಗದ ಸಮಸ್ಯೆ ಬಗ್ಗೆ ಯಾಕ್ರೀ ಮಾತಾಡ್ತೀರಿ? ಬೇಸತ್ತ ನಟಿ ಗೀತಾ ಭಾರತಿ ಭಟ್ ದಂಪತಿ
2 ನಿಮಿಷದಲ್ಲಿ ಸರಿ ಹೋಗದ ಸಮಸ್ಯೆ ಬಗ್ಗೆ ಯಾಕ್ರೀ ಮಾತಾಡ್ತೀರಿ? ಬೇಸತ್ತ ನಟಿ ಗೀತಾ ಭಾರತಿ ಭಟ್ ದಂಪತಿ
ಬ್ರಹ್ಮಗಂಟು ಹಾಗೂ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ತೂಕದ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರಾಜಾರಾಮ್ ಭಟ್ ಜೊತೆ ಗೀತಾ ಮದುವೆಯಾಗಿದೆ. ಆಗಲೂ ಕೆಲವರು ನೆಗೆಟಿವ್ ಮಾತನಾಡಿದ್ದರು. ಜೋಡಿ ನಂ 1 ಸೀಸನ್ 3 ಶೋನಲ್ಲಿ ಗೀತಾ ಭಾರತಿ ಭಟ್ ಮಾತನಾಡಿದ್ದಾರೆ.

ಗೀತಾ ಭಾರತಿ ಭಟ್, ರಾಜಾರಾಮ್ ಭಟ್ ಮದುವೆ
ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ 1 ಶೋ ಸೀಸನ್ 3 ಪ್ರಸಾರ ಆಗ್ತಿದೆ. ಈ ಶೋಗೆ ಗೀತಾ ಭಾರತಿ ಭಟ್ ಹಾಗೂ ರಾಜಾರಾಮ್ ಭಟ್ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಆಗ ದಪ್ಪ ಇರೋ ಬಗ್ಗೆ, ಕೆಲ ಜನರು ನೆಗೆಟಿವ್ ಆಗಿ ಮಾತನಾಡಿದ್ದರ ಬಗ್ಗೆ ಹೇಳಿದ್ದಾರೆ.
ಎರಡು ನಿಮಿಷದಲ್ಲಿ ಸರಿ ಹೋಗೋದಿಲ್ಲ
ಬೊಟ್ಟು ಸರಿ ಇಲ್ಲ, ಪಿನ್ ಹಾಕಿಲ್ಲ ಅಂದ್ರೆ ಸರಿ ಮಾಡಿಕೊಳ್ಳಬಹುದು, ಎರಡು ನಿಮಿಷ ಸಾಕು. ಆದರೆ ಎರಡು ನಿಮಿಷದಲ್ಲಿ ಸಣ್ಣ ಆಗೋಕೆ ಆಗೋದಿಲ್ಲ. ನಾವು ಎಲ್ಲಿ ಸಿಕ್ಕಿದರೂ ಕೂಡ ಅದೇ ಮಾತು ಒತ್ತಿ ಒತ್ತಿ ಅದನ್ನೇ ಕೇಳೋದು ಎಷ್ಟು ಸರಿ? ಚುಚ್ಚಿ ಹೇಳಿದರೆ ಕಷ್ಟ ಆಗುವುದು ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.
ಎಲ್ಲರಿಗೂ ಕಾರಣ ಹೇಳೋಕೆ ಆಗೋದಿಲ್ಲ
ನಾನು ಮೊದಲು ಫಿಟ್‌ನೆಸ್ ಜರ್ನಿ ಶುರು ಮಾಡಿ, ಸಣ್ಣ ಆಗಿದ್ದೆ, ಮತ್ತೆ ಹಾಗೆ ದಪ್ಪ ಆಗೋಕೆ ಯಾರಿಗೆ ಇಷ್ಟ ಆಗತ್ತೆ ಹೇಳಿ? ಅದಕ್ಕೆ ಅದರದ್ದೇ ಆದ ಕಾರಣ ಇರುತ್ತದೆ. ಎಲ್ಲರಿಗೂ ನಾನು ಕಾರಣ ಹೇಳಿಕೊಂಡು ಬರೋಕೆ ಆಗೋದಿಲ್ಲ. ನಾನು ಮತ್ತೆ ಪ್ರಯತ್ನಪಡ್ತಿದ್ದೀನಿ ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.
ಕೊಂಕು ಮಾತಾಡಬೇಡಿ
ಪ್ರತಿ ಬಾರಿ ಮಾತು ಬಂದಾಗ, ತೋರಿಸಿಕೊಳ್ಳೋದಿಲ್ಲ ಎಂದಾಗ ನಮ್ಮ ತಲೆಯಲ್ಲಿ ಯಾವ ವಿಷಯಗಳು ಓಡೋದಿಲ್ಲ, ಬೇಸರ ಮಾಡಿಕೊಳ್ಳೋದಿಲ್ಲ ಎಂದುಕೊಳ್ಳಬೇಡಿ, ಮನೆಗೆ ಹೋದಾಗ, ಒಬ್ಬರೇ ಇದ್ದಾಗ ಬೇಸರ ಆಗುವುದು. ಎರಡು ನಿಮಿಷದಲ್ಲಿ ಸರಿ ಮಾಡಲಾಗದ ವಿಷಯವನ್ನು ಪದೇ ಪದೇ ಹೇಳಿ ನೋವು ಮಾಡಬೇಡಿ ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.
ಪತ್ನಿ ಜೊತೆಗಿರುವೆ ಎಂದ ಪತಿ
ಅಂದಹಾಗೆ ಅವರ ಪತಿ ರಾಜಾರಾಮ್ ಭಟ್ ಕೂಡ ಮಾತನಾಡಿದ್ದು, “ಗಂಡನಾಗಿ ಅವಳ ಜೊತೆ ಬೆನ್ನೆಲುಬಾಗಿ ಇರೋದು ನನ್ನ ಕರ್ತವ್ಯ. ಅದನ್ನು ನಾನು ನಿಭಾಯಿಸ್ತಿದ್ದೀನಿ, ಈಗ ಈ ವೇದಿಕೆ ಸಿಕ್ಕಿದ್ದು, ಅದನ್ನು ಉಳಿಸಿಕೊಳ್ತೀನಿ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

