ಮುತ್ತು ಕೊಟ್ಟು ನನ್ನನ್ನು ರಿಜೆಕ್ಟ್ ಮಾಡಿಬಿಟ್ಟಳು; ವೇದಿಕೆ ಮೇಲೆ ಪತ್ನಿಯಿಂದ ಸತ್ಯ ತಿಳಿದುಕೊಂಡ ಸಂಜು ಬಸಯ್ಯ
ವೇದಿಕೆ ಮೇಲೆ ಪತ್ನಿಯಿಂದ ಹಲವು ವರ್ಷಗಳ ಹಿಂದೆ ನಡೆದ ಘಟನೆ ಬಗ್ಗೆ ಸತ್ಯ ತಿಳಿದುಕೊಂಡ ಸಂಜು ಬಸಯ್ಯ...
ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯತೆ ಪಡೆದ ಸಂಜು ಬಸಯ್ಯ ಪತ್ನಿ ಜೊತೆ ಜೋಡಿ ನಂ 1 ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಡಿಫರೆಂಟ್ ಕಪಲ್ ಎನ್ನು ಹೆಸರು ಕೂಡ ಪಡೆದಿದ್ದರು.
'ಆರ್ಕೆಸ್ಟ್ರಾದಲ್ಲಿ ಪಲ್ಲವಿನ ಭೇಟಿ ಮಾಡಿದ್ದು. ಮೊದಲು ಸ್ನೇಹಿತರಾಗಿರುತ್ತೀನಿ ಅದಾದ ಮೇಲೆ ಆಗಸ್ಟ್ 2019ನಲ್ಲಿ ಪ್ರಪೋಸ್ ಮಾಡುತ್ತೀವಿ. ನಿನ್ನ ಫ್ಯಾಮಿಲಿಗೆ ನನ್ನ ಫ್ಯಾಮಿಲಿ ಹೊಂದಿಕೊಳ್ಳಲ್ಲ ಬೇಡ ಎಂದು ಹೇಳುತ್ತಾರೆ.
ಕಿಸ್ ಕೊಟ್ಟಿ ರಿಜಿಕ್ಟ್ ಮಾಡುತ್ತಾಳೆ. ಯಾಕೆ ಕಿಸ್ ಕೊಟ್ಟು ಬೇಡ ಅಂದ್ರು ಗೊತ್ತಾಗಿಲ್ಲ ಅದಿಕ್ಕೆ ಆಕೆನೆ ಉತ್ತರ ಕೊಡಬೇಕು' 'ಅವತ್ತು ಯಾಕೆ ರಿಜೆಕ್ಟ್ ಮಾಡಿದೆ ಅಂದ್ರೆ.
ನಾನು ಮೊದಲೇ ಹೇಳಿದ ಹಾಗೆ...ಜನರ ದೃಷ್ಟಿ ಸರಿಯಾಗಿಲ್ಲ. ಸಂಜು ಬಸಯ್ಯ ಸೆಲೆಬ್ರಿಟಿ ಆಗಿದ್ದಾನೆ ಅದಿಕ್ಕೆ ಆಕೆ ಇಷ್ಟ ಪಟ್ಟಿದ್ದಾಳೆ ಇವಳೇ ಏನೋ ಮಾಡಿದ್ದಾಳೆ ಅನ್ನೋ ರೀತಿಯಲ್ಲಿ ನೋಡುತ್ತಾರೆ ಅಂತ ಭಯ ಇತ್ತು.
ನಿನ್ನನ್ನು ಬಿಟ್ಟು ಇರುವುದು ಇಷ್ಟ ಇರಲಿಲ್ಲ ಬಿಡಬಾರದು ಎಂದು ಕಿಸ್ ಕೊಟ್ಟೆ. ನಿನ್ನ ಮನಸ್ಸು ಬದಲಾಯಿಸಲಿ ಎಂದು ಮುತ್ತು ಕೊಟ್ಟೆ. ಇವತ್ತು ಸದಾ ನನ್ನ ಜೊತೆಯಾಗಿರಲಿ ಎಂದು ಮುತ್ತು ಕೊಡುತ್ತಿರುವೆ.
'ನನ್ನನ್ನು ನಂಬಿ ನನ್ನ ಕೈ ಹಿಡಿದಿದಕ್ಕೆ ನಿನ್ನ ಜೀವನ ಪೂರ್ತಿ ನಾನು ನಿನ್ನ ಕೈ ಬಿಡುವುದಿಲ್ಲ ನೀನು ನನ್ನ ಕೈ ಬಿಡಬೇಡ. ನಮ್ಮ ಅಪ್ಪ ಅಮ್ಮ ಅವರಿಗೆ ಇದುವರೆಗೂ ಒಂದು ಎದುರು ಮಾತು ಆಡಿಲ್ಲ. ನಮ್ಮ ಮನೆಗೆ ತಕ್ಕ ಸೊಸೆ ಬಂದಿದ್ದಾರೆ. ಬಹಳ ಖುಷಿಯಾಗಿದೆ.