- Home
- Entertainment
- TV Talk
- Annayya Serial: ರಾಣಿ-ಮನು ಎಂಟ್ರಿಗೆ ಬೆಚ್ಚಿದ ನಾಗೇಗೌಡ; ನೀಚರಿಗೆ ಗೊತ್ತಿಲ್ಲ ಯಾವ ವಿಷಯ?
Annayya Serial: ರಾಣಿ-ಮನು ಎಂಟ್ರಿಗೆ ಬೆಚ್ಚಿದ ನಾಗೇಗೌಡ; ನೀಚರಿಗೆ ಗೊತ್ತಿಲ್ಲ ಯಾವ ವಿಷಯ?
ಆಸ್ತಿಗಾಗಿ ರಾಣಿ ಮತ್ತು ಮನು ಅವರನ್ನು ಮುಗಿಸಲು ನಂಜೇಗೌಡ ರೂಪಿಸಿದ ಸಂಚು ವಿಫಲವಾಗಿದೆ. ಸತ್ತರೆಂದು ಭಾವಿಸಿದ್ದ ಅವರಿಬ್ಬರೂ ಪಾರು ಸಹಾಯದಿಂದ ಪವಾಡಸದೃಶವಾಗಿ ಪಾರಾಗಿ ಮನೆಗೆ ಮರಳಿ, ನಂಜೇಗೌಡನಿಗೆ ಆಘಾತ ನೀಡಿದ್ದಾರೆ.

ರಾಣಿ ಮತ್ತು ಮನು
ಆಸ್ತಿಗಾಗಿ ರಾಣಿ-ಮನು ಜೀವ ತೆಗೆದು ಎಂದು ನಂಬಿದ್ದ ನಂಜೇಗೌಡನಿಗೆ ಬಿಗ್ ಶಾಕ್ ಎದುರಾಗಿದೆ. ಆಸ್ತಿ ಪತ್ರಕ್ಕೆ ರಾಣಿ ತಪ್ಪಾಗಿ ಸಹಿ ಹಾಕಿರೋದರಿಂದ ನಂಜೇಗೌಡನಿಗೆ ನಿರಾಸೆಯಾಗಿದೆ. ಸುಮತಿ ಮುಂದೆ ಬಂದು ಮನು ಮತ್ತು ರಾಣಿ ಕಾಡಿನಲ್ಲಿ ಹುಲಿಗೆ ಅಹಾರವಾಗಿದ್ದಾರೆ ಎಂದು ಸುಳ್ಳು ಹೇಳಿ ಕಣ್ಣೀರು ಹಾಕಿದ್ದನು.
ನಂಜೇಗೌಡನ ಮೊಸಳೆ ಕಣ್ಣೀರು
ನಂಜೇಗೌಡ ಮೊಸಳೆ ಕಣ್ಣೀರು ಹಾಕುತ್ತಿರುವಾಗಲೇ ಮನು ಮತ್ತು ರಾಣಿಯ ಗ್ರ್ಯಾಂಡ್ ಎಂಟ್ರಿಯಾಗಿದೆ. ಸತ್ತಿದ್ದಾರೆ ಎಂದು ನಂಬಿ ಸುಳ್ಳು ಕಥೆ ಕಟ್ಟಿದ್ದ ನಂಜೆಗೌಡನಿಗೆ ಆಶ್ಚರ್ಯವಾಗಿದೆ. ಆದ್ರೆ ನೀಚರಿಗೆ ರಾಣಿ ಮತ್ತು ಮನು ಹಿಂದೆ ಶಕ್ತಿಯಾಗಿ ಪಾರು ನಿಂತಿದ್ದಾಳ ಎಂಬ ವಿಷಯವೇ ಗೊತ್ತಿಲ್ಲ.
ರಾವಣ ದಹನ
ನಂಜೇಗೌಡ ಉಪಾಯವಾಗಿ ಮನು ಮತ್ತು ರಾಣಿಯನ್ನು ಕಾಡಿಗೆ ಕಳುಹಿಸಿದ್ದನು. ತನ್ನ ಚೇಲಾಗಳಿಂದ ಇಬ್ಬರ ಪ್ರಜ್ಞೆ ತಪ್ಪಿಸಿ ರಾವಣನ ಗೊಂಬೆ ಹಿಂದೆ ಕಟ್ಟಿ ಹಾಕಿದ್ದರು. ಗೊಂಬೆ ಹಿಂದೆ ಕಟ್ಟಲಾಗಿದ್ದ ಮನು ಮತ್ತು ರಾಣಿಯನ್ನು ಪಾರು ರಕ್ಷಣೆ ಮಾಡಿದ್ದಳು. ನಂತರ ಶಿವು ಜೊತೆಗೂಡಿ ರಾವಣನ ಗೊಂಬೆಗೆ ಬೆಂಕಿ ಹಚ್ಚಿದ್ದರು.
ಅಣ್ಣನಿಗೆ ಕಾಲ್ ಮಾಡಿದ ರಾಣಿ
ನಂಜೇಗೌಡನ ಮಾತು ಕೇಳಿ ಮಗ ಮತ್ತು ಸೊಸೆ ಸತ್ತಿದ್ದಾರೆ ಎಂದು ಸುಮತಿ ಕಣ್ಣೀರು ಹಾಕಿದ್ದಳು. ಮತ್ತೊಂದೆಡೆ ಕಾಡಿನೊಳಗೆ ಹೋದ ರಾಣಿ-ಮನು ಹಿಂದಿರುಗಿ ಬರದಕ್ಕೆ ಶಿವು ಆತಂಕಗೊಂಡಿದ್ದನು. ನಂತರ ರಾಣಿಯೇ ಕಾಲ್ ಮಾಡಿ ಸುರಕ್ಷಿತವಾಗಿರೋದನ್ನು ಅಣ್ಣನಿಗೆ ತಿಳಿಸಿದ್ದಳು.
ಇದನ್ನೂ ಓದಿ: ಭಯಪಡುತ್ತಲೇ ತನಗೂ, ಕ್ಯಾತರಿನ್ ಮಗನಿಗೂ ಇರುವ ಸಂಬಂಧದ ಸತ್ಯ ಹೇಳಲು ನಿರ್ಧರಿಸಿದ ಶಿವು
ಸತ್ಯ ಕೇಳಿದ ಪಾರು!
ಮಾವ ಶಿವು ತನ್ನಿಂದ ರಹಸ್ಯ ಮಾಡಿರುವ ವಿಷಯದ ಬಗ್ಗೆ ಪಾರು ನೇರವಾಗಿ ಕೇಳಿದ್ದಾಳೆ. ತಾನು ಭೇಟಿಯಾದ ಕ್ರಿಶ್ಚಿಯನ್ ಮಹಿಳೆ ಮತ್ತು ಆ ಮಗುವಿಗೆ ಏನು ಸಂಬಂಧ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಗೂಢಾಚಾರಿಕೆ ಮಾಡುವ ಬದಲು ನೇರವಾಗಿಯೇ ಗಂಡನನ್ನು ಪಾರು ಪ್ರಶ್ನೆ ಮಾಡಿದ್ದಾಳೆ.
ಇದನ್ನೂ ಓದಿ: Annayya Serial: ಗಂಡನನ್ನು ಬುಟ್ಟಿಗೆ ಹಾಕಿದ್ರೆ ಸುಮ್ನೆ ಬಿಡ್ತಾಳ ಗುಂಡಮ್ಮ, ಪಿಂಕಿಗೆ ಬಿತ್ತು ಪೊರಕೆ ಏಟು!