ಗುಡ್‌ನ್ಯೂಸ್ ನೀಡಿದ ಪಾರು; ಅಣ್ಣಯ್ಯ ಇನ್ಮುಂದೆ ಅಪ್ಪಯ್ಯ, ಇತ್ತ ರಾವಣ ದಹನದ ರಹಸ್ಯ!
ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ಗರ್ಭಿಣಿ ಎಂಬ ಸಿಹಿಸುದ್ದಿ ಹೊರಬಿದ್ದಿದೆ. ಈ ಸಂಭ್ರಮದ ನಡುವೆಯೇ, ನಾಗೇಗೌಡನ ಕುತಂತ್ರದಿಂದ ರಾಣಿ ಮತ್ತು ಮನು ಜೀವಕ್ಕೆ ಅಪಾಯ ಎದುರಾಗಿದ್ದು, ಅವರನ್ನು ರಾವಣನ ಗೊಂಬೆಗೆ ಕಟ್ಟಿಹಾಕಲಾಗಿದೆ.

ಅಣ್ಣಯ್ಯ ಸೀರಿಯಲ್
ಅಣ್ಣಯ್ಯ ಸೀರಿಯಲ್‌ನಲ್ಲಿ ಗುಡ್‌ನ್ಯೂಸ್ ಬಂದಿದ್ದು, ಪಾರು ತಾಯಿಯಾಗುತ್ತಿದ್ದಾಳೆ. ಈ ವಿಷಯವನ್ನು ಗುಂಡಮ್ಮ ಫೋನ್ ಮಾಡಿ ಶಿವುಗೆ ತಿಳಿಸಿದ್ದಾಳೆ. ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಅಣ್ಣಯ್ಯ ಸೀರಿಯಲ್ ವೀಕ್ಷಕರಿಗೆ ಗುಡ್‌ನ್ಯೂಸ್ ನೀಡಲಾಗಿದೆ.
ಮಾದಪ್ಪನ ಮನೆಗೆ ಬಂದ ಪಾರು
ಮಾದಪ್ಪನ ಮನೆಯಲ್ಲಿರುವ ಶಾರದಮ್ಮಳನ್ನು ನೋಡಲು ಪಾರು ಬಂದಿದ್ದಾಳೆ. ಪಾರು ಹಿಂದೆಯೇ ಶಿವು ಸಹ ಬಂದಿದ್ದನು. ಮಾದಪ್ಪನ ಮನೆಯಲ್ಲಿರೋದು ತನ್ನ ಸ್ವಂತ ಅತ್ತೆ ಎಂದು ಪಾರುಗೆ ಗೊತ್ತಿಲ್ಲ. ಗುಂಡಮ್ಮನ ಮುಂದೆ ತನ್ನ ಹೆಸರು ಶಾಂತಮ್ಮ ಎಂದು ಶಾರದಮ್ಮಾ ಹೇಳಿಕೊಂಡಿದ್ದಾಳೆ. ಹಾಗಾಗಿ ತಂಗಿ ಮನೆಯಲ್ಲಿರೋದು ತನ್ನ ತಾಯಿಯೇ ಎಂದು ಶಿವುಗೆ ಗೊತ್ತಿಲ್ಲ.
ಮಾದಪ್ಪನ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟ
ಮಾದಪ್ಪನ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿರುವಾಗಲೇ ಪಾರು ಪ್ರಜ್ಞೆ ಕಳೆದುಕೊಂಡಿದ್ದಾಳೆ. ಹೊಟ್ಟೆ ತೊಳಸಿದ ಹಾಗೆ ಅಗ್ತಿದೆ ಎಂದು ಪಾರು ಹೇಳಿದ್ದಾಳೆ. ಅಲ್ಲಿಗೆ ಬಂದ ಸೀನ, ತನ್ನಲ್ಲಿರುವ ಸ್ಮಾರ್ಟ್‌ವಾಚ್ ಕಟ್ಟಿದ್ರೆ ಪಾರು ಅಕ್ಕ ಗರ್ಭಿಣಿ ಹೌದೋ ಅಥವಾ ಅಲ್ಲವೋ ಎಂದು ತಿಳಿಯುತ್ತೆ ಎಂದು ಹೇಳಿದ್ದಾನೆ. ಪಾರು ಕೈಗೆ ವಾಚ್ ಕಟ್ಟಿದ ಸೀನ, ಗರ್ಭಿಣಿ ಎಂದು ಹೇಳಿ ಖುಷಿಯಿಂದ ಕುಣಿದಾಡಿದ್ದಾನೆ.
ರಾಣಿ-ಮನು ಜೀವಕ್ಕೆ ಅಪಾಯ!
ಆಸ್ತಿ ತಮ್ಮ ಕೈ ಸೇರಿದೆ ಎಂದು ಭ್ರಮೆಯಲ್ಲಿರುವ ನಾಗೇಗೌಡ, ರಾಣಿ ಮತ್ತು ಮನು ಪ್ರಾಣ ತೆಗೆಯಲು ಮುಂದಾಗಿದ್ದಾನೆ. ಇಬ್ಬರನ್ನು ಕಾಡಿಗೆ ಕಳುಹಿಸಿದ್ದಾನೆ. ಉಪಾಯವಾಗಿ ಇಬ್ಬರ ಪ್ರಜ್ಞೆ ತಪ್ಪಿಸಿ ಕಟ್ಟಿ ಹಾಕಿದ್ದಾನೆ. ಇಬ್ಬರನ್ನು ರಾವಣನ ಗೊಂಬೆಯಿಂದ ಕಟ್ಟಿ ಹಾಕಲಾಗಿದೆ. ಇದೇ ಗೊಂಬೆಗೆ ಪಾರು-ಶಿವು ಬೆಂಕಿ ಇಡ್ತಿರೋದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!
ಹೊಸ ತಿರುವು ಪಡೆದುಕೊಳ್ಳುತ್ತಾ ಅಣ್ಣಯ್ಯ?
ಅತ್ತೆಯನ್ನ ಹುಡುಕುತ್ತಿರುವ ಪಾರು ಪ್ರಯತ್ನಕ್ಕೆ ಬ್ರೇಕ್ ಬಿದ್ದು, ಧಾರಾವಾಹಿ ಹೊಸ ತಿರುವು ಪಡೆದುಕೊಳ್ಳುತ್ತಾ ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಮತ್ತೊಂದೆಡೆ ಸೀನನ ವಾಚ್ ಸುಳ್ಳು ಮಾಹಿತಿ ನೀಡಿರಬಹುದು ಎಂದು ವೀಕ್ಷಕರು ಅಂದಾಜಿಸುತ್ತಿದ್ದಾರೆ.
ಇದನ್ನೂ ಓದಿ: Zee Kutumba Awards: ನೆಚ್ಚಿನ ನಟ, ನಟಿ, ಜೋಡಿ ಸೇರಿ ಹಲವು ಪ್ರಶಸ್ತಿ ಘೋಷಣೆ- ನೀವು ಇಷ್ಟಪಟ್ಟದ್ದೂ ಇವರೇನಾ?