ವಿಜಯಲಕ್ಷ್ಮಿ ದರ್ಶನ್ ಜೊತೆ ಶ್ವೇತಾ ಚಂಗಪ್ಪ; ಪಾರ್ಟಿ ಪ್ರಶ್ನಿಸಿದ ನೆಟ್ಟಿಗರು!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಶ್ವೇತಾ- ವಿಜಯಲಕ್ಷ್ಮಿ ಪೋಟೋ. ಎಲ್ಲಿ ಯಾವಾಗ ಗೊತ್ತಿಲ್ಲ ಅಂತಿದ್ದಾರೆ ನೆಟ್ಟಿಗರು....
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಶ್ವೇತಾ ಚಂಗಪ್ಪ ಮತ್ತು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ದರ್ಶನ್, ಶ್ವೇತಾ ಚೆಂಗಪ್ಪ, ಡಾಕ್ಟರ್ ಶ್ರುತಿ ಮತ್ತು ಮಜಾ ಟಾಕೀಸ್ ರೆಮೋ ಒಟ್ಟಿಗೆ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋ ಯಾವಾಗ? ಎಲ್ಲಿ? ಮತ್ತು ಯಾರು ಕ್ಲಿಕ್ ಮಾಡಿದ್ದರು ಎಂದು ತಿಳಿದು ಬಂದಿಲ್ಲ ಆದರೆ ವಿಜಯಲಕ್ಷ್ಮಿ ದರ್ಶನ್ ಫ್ಯಾನ್ ಫೇಜ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಪಿಂಕ್ ಬಣ್ಣದ ಮ್ಯಾಕ್ಸಿ ಡ್ರೆಸ್‌ನಲ್ಲಿ ವಿಜಯಲಕ್ಷ್ಮಿ ಕಾಣಿಸಿಕೊಂಡರೆ, ನೀಲಿ ಬಣ್ಣದ ಪ್ಯಾಂಟ್ ಮತ್ತು ವೈಟ್ ಬಣ್ಣದ ಶರ್ಟ್‌ನಲ್ಲಿ ಶ್ವೇತಾ ಚೆಂಗಪ್ಪ ಮಿಂಚಿದ್ದಾರೆ.
ಇದೇ ಮೊದಲು ಶ್ವೇತಾ ಚಂಗಪ್ಪ, ರೆಮೋ ಉರ್ಫ್ ರೇಖಾ ಮತ್ತು ವಿಜಯಲಕ್ಷ್ಮಿ ಒಟ್ಟಿಗೆ ಕಾಣಿಸಿಕೊಂಡಿರುವುದು. ಇದು ಯಾವ ಪಾರ್ಟಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.