- Home
- Entertainment
- TV Talk
- ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್ ಮಾಯವಾದ್ರೂ ಆಶ್ಚರ್ಯವಿಲ್ಲ!
ಸಂಜಯ್‌ನನ್ನು ಛೂ ಬಿಟ್ಟ ಕುತಂತ್ರಿ ರಮೇಶ್.. ನಿತ್ಯಾ ಕಣ್ಮುಂದೆನೇ ತೇಜಸ್ ಮಾಯವಾದ್ರೂ ಆಶ್ಚರ್ಯವಿಲ್ಲ!
Karna serial latest update: ಈಗಲೇ ನಿತ್ಯಾ ತೇಜಸ್ ಒಂದಾದರೆ ಕ್ರಮೇಣ ರಮೇಶ್ ಕುತಂತ್ರ ಬೇಗ ಆಚೆ ಬರುತ್ತದೆ. ಹಾಗಾಗಿ ಸಂಜಯ್ ತೇಜಸ್‌ನನ್ನು ತಡೆಯುವ ಸಾಧ್ಯತೆಯೂ ಇದೆ. ಇತ್ತ ಕರ್ಣನಿಗೆ ನಿಧಿ-ನಿತ್ಯಾ ಅಪ್ಪ ಅಮ್ಮನದು ಅಸಹಜ ಸಾವು ಎಂಬುದು ತಿಳಿದಿದೆ.

ಇದ್ದಕ್ಕಿದ್ದಂತೆ ತೇಜಸ್ ಪ್ರತ್ಯಕ್ಷ
ನಿತ್ಯಾಳಿಗೆ ತೇಜಸ್ ಸಿಕ್ಕಿಲ್ಲ ಎಂಬ ವಿಚಾರ ಬಿಟ್ಟು 'ಕರ್ಣ' ಧಾರಾವಾಹಿಯಲ್ಲಿ ಬಾಕಿ ಎಲ್ಲಾ ಸಾಂಗವಾಗಿ ನಡೆಯುತ್ತಿತ್ತು. ಸಹಜವಾಗಿ ವೀಕ್ಷಕರು ಖುಷಿಯಿಂದ ಸೀರಿಯಲ್ ವೀಕ್ಷಿಸುತ್ತಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ತೇಜಸ್ ಪ್ರತ್ಯಕ್ಷವಾಗಿದ್ದಾನೆ. ಅದೇ ಈಗ ಎಲ್ಲರಿಗೂ ಚಿಂತೆಯಾಗಿದೆ.
ಕರ್ಣನ ಮೇಲೆ ವಿಪರೀತ ಕೋಪ
ಕರ್ಣ ಧಾರಾವಾಹಿ ದೈನಂದಿನ ವೀಕ್ಷಕರಿಗೆ ಗೊತ್ತಿರುವ ಹಾಗೆ ತೇಜಸ್‌ಗೆ ಕರ್ಣನ ಮೇಲೆ ವಿಪರೀತ ಕೋಪವಿದೆ. ತನ್ನನ್ನು ಮದುವೆ ದಿನ ಕಿಡ್ನಾಪ್ ಮಾಡಿಸಿದ್ದು, ಚಿಕ್ಕಮಗಳೂರಿನ ಫಾರ್ಮ್ ಹೌಸ್‌ನಲ್ಲಿ ಕೂಡಿ ಹಾಕಿದ್ದು, ಒಟ್ಟಾರೆ ನನ್ನ ಈ ಸ್ಥಿತಿಗೆ ಕಾರಣವೇ ಕರ್ಣ ಎಂದು ತೇಜಸ್ ತಪ್ಪು ತಿಳಿದಿದ್ದಾನೆ.
ನಿತ್ಯಾ-ತೇಜಸ್ ಒಂದಾಗ್ತಾರಾ?
ಇದೀಗ ತೇಜಸ್ ನಿತ್ಯಾಳನ್ನು ಹುಡುಕಿಕೊಂಡು ಅವರ ಮನೆಯ ಬಳಿಯೇ ಬಂದಿದ್ದಾನೆ. ಈ ಸಂದರ್ಭದಲ್ಲಿ ಭಾವನನ್ನು ನೋಡಿದ ನಿಧಿ ತೇಜಸ್‌ಗೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಆಗ ತೇಜಸ್ ಇದಕ್ಕೆಲ್ಲಾ ನಾನು ಉತ್ತರ ನೀಡುತ್ತೇನೆ. ಆದರೆ ನಾನು ಮೊದಲು ನಿತ್ಯಾಳನ್ನು ಭೇಟಿಯಾಗಬೇಕು ಎನ್ನುತ್ತಾನೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನಪ್ಪಾ ಅಂದ್ರೆ ನಿತ್ಯಾ-ತೇಜಸ್ ಒಂದಾಗ್ತಾರಾ? ಎಂಬುದು.
ಸಂಜಯ್‌ಗೆ ರಮೇಶ್ ಹೇಳಿದ್ದೇನು?
ಹೊಸ ಪ್ರೋಮೋದಲ್ಲಿ ತೋರಿಸಿರುವ ಹಾಗೆ ತೇಜಸ್-ನಿತ್ಯಾ ದೇವಸ್ಥಾನದ ಬಳಿ ಬಂದಿದ್ದಾರೆ. ಆದರೆ ಇದಕ್ಕೆ ರಮೇಶ್-ಸಂಜಯ್ ಅಡ್ಡಿಪಡಿಸಬಹುದು. ಏಕೆಂದರೆ ತೇಜಸ್ ತಪ್ಪಿಸಿಕೊಂಡಿರುವುದು ರಮೇಶ್ ಕಿವಿಗೆ ಬಿದ್ದಿದೆ. ಹಾಗಾಗಿ ಅವನು ಮಗ ಸಂಜಯ್‌ನನ್ನು ಕರೆದು "ನಿನಗೊಂದು ಟಾಸ್ಕ್ ಕೊಡುತ್ತೇನೆ. ನಿತ್ಯಾ ಮೇಲೆ ಕಣ್ಣಿಡು..ಎಲ್ಲಿಗೆ ಹೋಗ್ತಾಳೆ, ಬರ್ತಾಳೆ, ಯಾರನ್ನ ಭೇಟಿಯಾಗ್ತಾಳೆ..? ಹೀಗೆ ಎಲ್ಲದರ ಮೇಲೆ ನಿಗಾ ಇರಲಿ. ಅವರಿಬ್ಬರೂ ಒಂದಾಗಬಾರದು" ಎಂದಿದ್ದಾನೆ.
ಮುಂದೇನಾಗಬಹುದು?
ಇಲ್ಲಿ ಗಮನಿಸಬೇಕಾದದ್ದು ಮೊದಲನೆಯದಾಗಿ ನಿತ್ಯಾಗೆ ಈ ಹಿಂದೆ ಕರ್ಣನನ್ನು ಕಂಡರೆ ಆಗುತ್ತಿರಲಿಲ್ಲ. ಹಾಗಾಗಿ ಅವಳು ತೇಜಸ್ ಹೇಳುವ ಮಾತನ್ನು ಸುಲಭವಾಗಿ ನಂಬಬಹುದು. ಎರಡನೆಯದಾಗಿ ನಿತ್ಯಾ-ತೇಜಸ್ ಭೇಟಿಯಾದರೆ ಎಲ್ಲ ವಿಷಯ ಆಚೆ ಬರಬಹುದು ಎಂಬ ಭಯ ರಮೇಶ್ ಗ್ಯಾಂಗ್‌ಗೆ ಇದೆ.
ಇಷ್ಟೆಲ್ಲಾ ಮಾಡುತ್ತಿರುವುದು ಯಾತಕ್ಕಾಗಿ?
ಈಗಲೇ ನಿತ್ಯಾ ತೇಜಸ್ ಒಂದಾದರೆ ಕ್ರಮೇಣ ರಮೇಶ್ ಕುತಂತ್ರ ಬೇಗ ಆಚೆ ಬರುತ್ತದೆ. ಹಾಗಾಗಿ ಸಂಜಯ್ ತೇಜಸ್‌ನನ್ನು ತಡೆಯುವ ಸಾಧ್ಯತೆಯೂ ಇದೆ. ಇತ್ತ ಕರ್ಣನಿಗೆ ನಿಧಿ-ನಿತ್ಯಾ ಅಪ್ಪ ಅಮ್ಮನದು ಅಸಹಜ ಸಾವು ಎಂಬುದು ತಿಳಿದಿದೆ. ಈ ರಹಸ್ಯವನ್ನು ಭೇದಿಸುವ ವೇಳೆಗೆ ಕರ್ಣನಿಗೆ ತನ್ನ ಜನ್ಮ ರಹಸ್ಯ, ಮಾರಿಗುಡಿಗೂ ತನಗೂ ಇರುವ ಸಂಬಂಧ, ರಮೇಶ್ ಇಷ್ಟೆಲ್ಲಾ ಮಾಡುತ್ತಿರುವುದು ಯಾತಕ್ಕಾಗಿ? ಎಂಬುದೆಲ್ಲಾ ಗೊತ್ತಾಗಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

