- Home
- Entertainment
- TV Talk
- ಮಗುವಿನ ನಿರೀಕ್ಷೆಯಲ್ಲಿರೋ ಮಾನಸಾ ಮನೋಹರ್ Lakshmi Nivasa Serial ಬಿಡ್ತಾರಾ? ಹೊಸ ಪಾತ್ರಧಾರಿ ಯಾರು?
ಮಗುವಿನ ನಿರೀಕ್ಷೆಯಲ್ಲಿರೋ ಮಾನಸಾ ಮನೋಹರ್ Lakshmi Nivasa Serial ಬಿಡ್ತಾರಾ? ಹೊಸ ಪಾತ್ರಧಾರಿ ಯಾರು?
Lakshmi Nivasa Kannada Serial Actress Manasa Manohar: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲು ಪಾತ್ರದಲ್ಲಿ ನಟಿ ಮಾನಸಾ ಮನೋಹರ್ ಅವರು ಅಭಿನಯಿಸುತ್ತಿದ್ದಾರೆ. ಈ ಪಾತ್ರ ಬಹಳ ಪ್ರಮುಖವಾದುದು. ಆದರೆ ಈ ಸೀರಿಯಲ್‌ನಿಂದ ಮಾನಸಾ ಹೊರಬರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ನೀಲು ಪಾತ್ರಧಾರಿ ಯಾರು?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನೀಲುಗೆ ಭಾವನಾಳನ್ನು ಕಂಡರೆ ಇಷ್ಟವೇ ಇಲ್ಲ. ಮನೆಯಲ್ಲಿ ಸಿದ್ದೇಗೌಡ್ರಿಗೆ ಬೆಲೆ ಕೊಡ್ತಾರೆ, ನನ್ನ ಗಂಡನಿಗೆ ಬೆಲೆ ಕೊಡೋದಿಲ್ಲ ಎಂದು ನೀಲುಗೆ ಬೇಸರವಿದೆ. ಸಿದ್ದೇಗೌಡ್ರು-ಭಾವನಾ ದೂರ ಆಗಬೇಕು ಎಂದು ನೀಲು ಪ್ರಯತ್ನ ಪಡುತ್ತಿದ್ದಾಳೆ.
ನೀಲು ಪಾತ್ರದ ಪ್ರಾಮುಖ್ಯತೆ ಇದೆ
ಈ ಸೀರಿಯಲ್‌ನಲ್ಲಿ ನೀಲು ದೊಡ್ಡ ಪ್ರಾಮುಖ್ಯತೆ ಇದೆ. ಆದರೆ ನೀಲು ಪಾತ್ರಧಾರಿ ನಟಿ ಮಾನಸಾ ಮನೋಹರ್ ಅವರು ಈ ಸೀರಿಯಲ್‌ನಲ್ಲಿ ಮುಂದುವರೆಯೋದು ಕಷ್ಟ ಇದೆ. ಹಾಗಾದರೆ ಏನು ಮಾಡ್ತಾರೆ?
ಮೊದಲ ಮಗುವಿನ ನಿರೀಕ್ಷೆ
ನೀಲು ಪಾತ್ರಧಾರಿ ಮಾನಸಾ ಮನೋಹರ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ಪ್ರೀತಂ, ಮಾನಸಾ ಮನೋಹರ್ ಅವರು ಮದುವೆಯಾಗಿದ್ದರು. ಇದು ಲವ್ ಮ್ಯಾರೇಜ್. ಈಗ ಈ ಜೋಡಿ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಲಿದೆ.
ಒಂದಿಷ್ಟು ಟೈಮ್ ಬ್ರೇಕ್ ತಗೋತಾರಾ?
ಮಾನಸಾ ಮನೋಹರ್ ಅವರು ಒಂದಿಷ್ಟು ದಿನಗಳ ಶೂಟಿಂಗ್ ಮಾಡಿದರೂ ಕೂಡ, ತಿಂಗಳುಗಳ ಕಾಲ ಬ್ರೇಕ್ ತಗೊಳ್ಳಬೇಕಾಗಿ ಬರಬಹುದು. ಮಗು ಹುಟ್ಟಿದ ಬಳಿಕ, ಮಾನಸಾ ಅವರು ಒಂದಿಷ್ಟು ಟೈಮ್ ಬ್ರೇಕ್ ತಗೋಬೇಕಾಗಿ ಬರುವುದು. ಹೀಗಾಗಿ ಮಾನಸಾ ಅವರು ಸೀರಿಯಲ್‌ನಿಂದ ಹೊರನಡೆದರೂ ಕೂಡ ಆಶ್ಚರ್ಯವಿಲ್ಲ.
ಯಾರು ಎಂಟ್ರಿ ಕೊಡ್ತಾರೆ?
ಮಾನಸಾ ಅವರು ಸೀರಿಯಲ್‌ನಿಂದ ಹೊರಬಂದರೆ, ಬೇರೆ ಪಾತ್ರಧಾರಿಗಳ ಆಗಮನವಾಗುವುದು. ಮಾನಸಾ ಅವರು ಹೊರಗಡೆ ಬಂದರೆ, ಯಾರು ಸೀರಿಯಲ್‌ಗೆ ಎಂಟ್ರಿ ಕೊಡ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

