MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅಪ್ಪ ತೀರಿಕೊಂಡ ಕೇವಲ 15 ದಿನಕ್ಕೆ Bigg Boss ಮನೆಗೆ ಎಂಟ್ರಿ ಕೊಟ್ಟಿದ್ದೇಕೆ ನಟಿ ಜಯಶ್ರೀ ರಾಜ್?

ಅಪ್ಪ ತೀರಿಕೊಂಡ ಕೇವಲ 15 ದಿನಕ್ಕೆ Bigg Boss ಮನೆಗೆ ಎಂಟ್ರಿ ಕೊಟ್ಟಿದ್ದೇಕೆ ನಟಿ ಜಯಶ್ರೀ ರಾಜ್?

Jayashree Raj Bigg Boss: ನಟಿ ಜಯಶ್ರೀ ರಾಜ್ ಅವರು ತಮ್ಮ ಬದುಕಿನ ಅತ್ಯಂತ ಕಷ್ಟದ ಹಂತದಲ್ಲಿ 'ಬಿಗ್ ಬಾಸ್' ಮನೆ ಪ್ರವೇಶಿಸಿದ ಹಿಂದಿನ ಅಸಲಿ ಕಾರಣ ಹಾಗೂ ಆ ಸಂದರ್ಭದಲ್ಲಿ ತಮಗಿದ್ದ ಭಾವನಾತ್ಮಕ ಮನಸ್ಥಿತಿಯನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

2 Min read
Author : Ashwini HR
Published : Oct 10 2026, 01:16 PM IST
Share this Photo Gallery
  • FB
  • TW
  • Linkdin
  • Whatsapp
14
ಬಿಗ್ ಬಾಸ್ ಮನೆಗೆ ಹೋದ ಅಸಲಿ ಕಾರಣ
Image Credit : Asianet News

ಬಿಗ್ ಬಾಸ್ ಮನೆಗೆ ಹೋದ ಅಸಲಿ ಕಾರಣ

ಬಿಗ್ ಬಾಸ್ ಮನೆಗೆ ಹೋದ ಅಸಲಿ ಕಾರಣ
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮನೆಗೆ ಹೋಗಲು ಸ್ಪರ್ಧಿಗಳು ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಆದರೆ, ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಖ್ಯಾತ ನಟಿ ಜಯಶ್ರೀ ರಾಜ್ ಅವರು ತಮ್ಮ ಬದುಕಿನ ಅತ್ಯಂತ ಕರಾಳ ದಿನಗಳಲ್ಲೇ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು! ಹೌದು. ತಂದೆ ತೀರಿಕೊಂಡ ಕೇವಲ 15 ದಿನಗಳಲ್ಲೇ ತಾವು ಬಿಗ್ ಬಾಸ್ ಮನೆಗೆ ಹೋದ ಅಸಲಿ ಕಾರಣ ಮತ್ತು ಆ ಸಂದರ್ಭದಲ್ಲಿದ್ದ ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಅಪ್ಪ ಹೋದ 15 ದಿನಕ್ಕೆ ಬಂದ ಆಫರ್
Image Credit : our own

ಅಪ್ಪ ಹೋದ 15 ದಿನಕ್ಕೆ ಬಂದ ಆಫರ್

ಅಪ್ಪ ಹೋದ 15 ದಿನಕ್ಕೆ ಬಂದ ಆಫರ್
ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಜಯಶ್ರೀ ರಾಜ್, "ಅಪ್ಪ ತೀರಿಕೊಂಡಾಗ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು, ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತೋಚದ ಪರಿಸ್ಥಿತಿಯಲ್ಲಿದ್ದೆ. ಅಪ್ಪ ಹೋಗಿ ಕೇವಲ 15 ದಿನಗಳಾಗಿದ್ದಾಗ ನನಗೆ ಬಿಗ್ ಬಾಸ್ ಶೋಗೆ ಬರುವಂತೆ ಆಫರ್ ಬಂತು. ಆ ದುಃಖದ ಸಮಯದಲ್ಲಿ ತಾಯಿಯನ್ನು ಒಂಟಿಯಾಗಿ ಬಿಟ್ಟು ಹೋಗುವುದು ನನಗೆ ನಿಜಕ್ಕೂ ಕಷ್ಟವಾಗಿತ್ತು. ಆದರೆ ನನ್ನ ತಾಯಿ ತುಂಬಾ ಗಟ್ಟಿ ಮನಸ್ಸಿನವರು. 'ನೀನು ಹೋಗು, ಇಲ್ಲಿ ಎಲ್ಲವನ್ನೂ ನಾನು ಸಂಭಾಳಿಸಿಕೊಳ್ಳುತ್ತೇನೆ' ಎಂದು ಧೈರ್ಯ ತುಂಬಿ ಕಳುಹಿಸಿಕೊಟ್ಟರು," ಎಂದು ಹೇಳಿದ್ದಾರೆ.

Related Articles

Related image1
ಕಾಶಿನಾಥ್ ಜೊತೆ ನಟಿಸಿ ಕನ್ನಡಿಗರನ್ನು ನಗಿಸಿದ್ದ ಖ್ಯಾತ ನಟಿ ಈಗ ಜೀ ಕನ್ನಡದ ಹೊಸ ಸೀರಿಯಲ್‌ಗೆ ಎಂಟ್ರಿ!
Related image2
ನಟಿ ಸತ್ಯಭಾಮ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿರುವ ಮತ್ತೋರ್ವ ಹಿರಿಯ ನಟಿ ಮತ್ತೆ ಕಿರುತೆರೆಗೆ ಎಂಟ್ರಿ
34
"ನನ್ನನ್ನು ಯಾರೂ ಮಾತನಾಡಿಸಬಾರದು ಅಂತ ಅಲ್ಲಿಗೆ ಹೋದೆ"
Image Credit : our own

"ನನ್ನನ್ನು ಯಾರೂ ಮಾತನಾಡಿಸಬಾರದು ಅಂತ ಅಲ್ಲಿಗೆ ಹೋದೆ"

“ನನ್ನನ್ನು ಯಾರೂ ಮಾತನಾಡಿಸಬಾರದು ಅಂತ ಅಲ್ಲಿಗೆ ಹೋದೆ”
ಬಿಗ್ ಬಾಸ್ ಮನೆಗೆ ಹೋದ ಉದ್ದೇಶವನ್ನು ವಿವರಿಸಿದ ಅವರು, "ಆ ಸಮಯದಲ್ಲಿ ನನಗೆ ಯಾರಿಗೂ ಮುಖ ತೋರಿಸಲು ಇಷ್ಟವಿರಲಿಲ್ಲ. ಯಾರೂ ನನ್ನನ್ನು ಮಾತನಾಡಿಸಬಾರದು, ನನ್ನ ಬಗ್ಗೆ ಯಾರೂ ಏನನ್ನೂ ಕೇಳಬಾರದು ಅನ್ನೋ ಜಾಗಕ್ಕೆ ನಾನು ಹೋಗಬೇಕಿತ್ತು. ಅದೇ ಕಾರಣಕ್ಕಾಗಿ ಹೊರಜಗತ್ತಿನ ಸಂಪರ್ಕವೇ ಇಲ್ಲದ ಬಿಗ್ ಬಾಸ್ ಮನೆಗೆ ಹೋಗಲು ನಿರ್ಧರಿಸಿದೆ," ಎಂದು ತಮ್ಮ ಅಂದಿನ ನೋವಿನ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

44
"ಒಂದೂ ಎಪಿಸೋಡ್ ನೋಡಿರಲಿಲ್ಲ, ಕಾನ್ಸೆಪ್ಟೇ ಗೊತ್ತಿರಲಿಲ್ಲ!"
Image Credit : our own

"ಒಂದೂ ಎಪಿಸೋಡ್ ನೋಡಿರಲಿಲ್ಲ, ಕಾನ್ಸೆಪ್ಟೇ ಗೊತ್ತಿರಲಿಲ್ಲ!"

“ಒಂದೂ ಎಪಿಸೋಡ್ ನೋಡಿರಲಿಲ್ಲ, ಕಾನ್ಸೆಪ್ಟೇ ಗೊತ್ತಿರಲಿಲ್ಲ!”
ಶೋ ಬಗ್ಗೆ ತಮಗಿದ್ದ ಅರಿವಿನ ಬಗ್ಗೆ ಸ್ವತಃ ನಗುತ್ತಲೇ ಮಾತನಾಡಿದ ನಟಿ, "ನಿಜ ಹೇಳಬೇಕೆಂದರೆ ಅದಕ್ಕೂ ಮುಂಚೆ ಪ್ರತಿಯೊಂದು ಸೀಸನ್‌ನಲ್ಲೂ ನನ್ನನ್ನು ಕರೆದಿದ್ದರು. ಆದರೆ ನನಗೆ ಆ ಶೋ ಕನೆಕ್ಟ್ ಆಗುತ್ತಿರಲಿಲ್ಲ. ನಾನು ಬಿಗ್ ಬಾಸ್‌ನ ಒಂದೇ ಒಂದು ಎಪಿಸೋಡ್ ಕೂಡ ನೋಡಿರಲಿಲ್ಲ, ಇವತ್ತಿನವರೆಗೂ ನನ್ನ ಎಪಿಸೋಡ್‌ಗಳನ್ನು ಕೂಡ ನಾನು ನೋಡಿಲ್ಲ! ಬಹುಶಃ ಶೋನ ಕಾನ್ಸೆಪ್ಟೇ ಗೊತ್ತಿಲ್ಲದೆ, ಪೂರ್ತಿ ಬ್ಲೈಂಡ್ ಆಗಿ, ಪೆದ್ದಿಯಂತೆ ಬಿಗ್ ಬಾಸ್ ಮನೆಗೆ ಹೋದ ಏಕೈಕ ವ್ಯಕ್ತಿ ನಾನೇ ಇರಬೇಕು," ಎಂದು ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
Bigg Boss Kannada: ನೋ ಕ್ಲಾಸ್; ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚ ಸುದೀಪ್
Recommended image2
ಅಮೃತಧಾರೆ ನಿರ್ದೇಶಕರ ಅದಲು-ಬದಲು ಆಟಕ್ಕೆ ವೀಕ್ಷಕರು ಕಂಗಾಲು, ಮಂತ್ರಕ್ಕೆ ತಿರುಮಂತ್ರ
Recommended image3
ನಟಿ ಸತ್ಯಭಾಮ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿರುವ ಮತ್ತೋರ್ವ ಹಿರಿಯ ನಟಿ ಮತ್ತೆ ಕಿರುತೆರೆಗೆ ಎಂಟ್ರಿ
Related Stories
Recommended image1
ಕಾಶಿನಾಥ್ ಜೊತೆ ನಟಿಸಿ ಕನ್ನಡಿಗರನ್ನು ನಗಿಸಿದ್ದ ಖ್ಯಾತ ನಟಿ ಈಗ ಜೀ ಕನ್ನಡದ ಹೊಸ ಸೀರಿಯಲ್‌ಗೆ ಎಂಟ್ರಿ!
Recommended image2
ನಟಿ ಸತ್ಯಭಾಮ ಬೆನ್ನಲ್ಲೇ ರಾಜಕೀಯದಲ್ಲಿ ಸಕ್ರಿಯವಾಗಿರುವ ಮತ್ತೋರ್ವ ಹಿರಿಯ ನಟಿ ಮತ್ತೆ ಕಿರುತೆರೆಗೆ ಎಂಟ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved