BBK 12: ಸೊಸೆ ಬದಲಾಗಿ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನುಷ್ ತಾಯಿ ಹೇಳಿದ್ದೇನು?
ಬಿಗ್‌ಬಾಸ್ ಮನೆಗೆ ಆಗಮಿಸಿದ ಧನುಷ್ ತಾಯಿ ಮತ್ತು ಪತ್ನಿಯ ನಡುವೆ, ಧನುಷ್ ತನ್ನ ತಾಯಿಯನ್ನು ಆಯ್ಕೆ ಮಾಡಿಕೊಂಡರು. ನಂತರ, ಧನುಷ್ ತಾಯಿ ತಮ್ಮ ಮಗನಿಗೆ ಕೇವಲ 9 ತಿಂಗಳ ಮಗುವಾಗಿದ್ದಾಗಲೇ ಅವರ ಅಣ್ಣನ ಮಗಳೊಂದಿಗೆ ನಿಶ್ಚಿತಾರ್ಥ ಮಾಡಿಸಿದ್ದ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದರು.

ಧನುಷ್ ತಾಯಿ ಮತ್ತು ಪತ್ನಿ
ಬಿಗ್‌ಬಾಸ್ ಮನೆಗೆ ಧನುಷ್ ಅವರ ತಾಯಿ ಮತ್ತು ಪತ್ನಿ ಆಗಮಿಸಿದ್ದು, ಇಬ್ಬರ ಪೈಕಿ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಧನುಷ್ ತಾಯಿಯನ್ನು ಆಯ್ಕೆ ಮಾಡಿಕೊಂಡು ಬಿಗ್‌ಬಾಸ್ ಮನೆಯೊಳಗೆ ಕರೆದುಕೊಂಡು ಬಂದಿದ್ದಾರೆ.
ಸ್ಪರ್ಧಿಗಳ ಜೊತೆ ಧನುಷ್ ತಾಯಿ ಮಾತು
ಮನೆಯೊಳಗೆ ಬಂದ ಧನುಷ್ ತಾಯಿ ಸ್ಪರ್ಧಿಗಳ ಜೊತೆ ನಗುಮೊಗದಿಂದ ಮಾತನಾಡಿದ್ದಾರೆ. ಸ್ಪರ್ಧಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಧನುಷ್ ನಿಮ್ಮ ಬದಲಾಗಿ ಪತ್ನಿಯನ್ನು ಆಯ್ಕೆ ಮಾಡಿಕೊಂಡಿದ್ರೆ ನಿಮಗೆ ಹೇಗೆ ಅನ್ನಿಸುತ್ತಿತ್ತು ಎಂದ ಕೇಳಿದ್ದಾರೆ.
ಧನುಷ್ ನಿಶ್ಚಿತಾರ್ಥ
ನನ್ನ ಬದಲಾಗಿ ಸೊಸೆ ಮನೆಯೊಳಗೆ ಬಂದಿದ್ರೆ ನನಗೆ ಖುಷಿಯಾಗುತ್ತಿತ್ತು. ಆಕೆ ನನ್ನ ಅಣ್ಣನ ಮಗಳು, ಇಷ್ಟಪಟ್ಟು ಸೊಸೆ ಮಾಡಿಕೊಂಡಿದ್ದೇನೆ. ಅವಳು ಹುಟ್ಟಿದಾಗಲೇ ನಮ್ಮ ಧನುಷ್ ಹೆಂಡ್ತಿ ಎಂದು ಹೆಸರಿಟ್ಟಿದ್ದೆ. ಅವಳ ನಾಮಕರಣಕ್ಕೆ ಧನುಷ್ ಕೈಯಿಂದಲೇ ಉಂಗುರ ಹಾಕಿಸಿದ್ದೆ. ಇದೇ ನಿನ್ನ ನಿಶ್ಚಿತಾರ್ಥ ಎಂದು ಆತನಿಗೆ ಹೇಳಿದ್ದೆ. ಅವಳಿಗೆ ಆಗ 9 ತಿಂಗಳು ಎಂಬ ವಿಷಯವನ್ನು ತಿಳಿಸಿದರು.
ಧನುಷ್ ಮದುವೆ
ಒಂದು ವೇಳೆ ಧನುಷ್ ದೊಡ್ಡವನಾದ ಮೇಲೆ ಬೇರೆಯವರನ್ನು ಪ್ರೀತಿಸಿ ಮದುವೆಯಾಗಿದ್ರೆ ಏನು ಮಾಡ್ತಿದ್ದೀರಿ ಎಂದು ಗಿಲ್ಲಿ ನಟ ಕೇಳುತ್ತಾರೆ. ಅವನಿಗೆ ಬುದ್ಧಿ ಬಂದ್ಮೇಲೆಯೇ ನನ್ನ ಅಣ್ಣನ ಮಗಳೇ ನಿನ್ನ ಹೆಂಡ್ತಿ ಎಂದು ಹೇಳಿಕೊಂಡು ಬರುತ್ತಿದ್ದೆ. ಬೇರೆಯವರನ್ನು ಮದುವೆಯಾಗಿದ್ರೆ ಒಬ್ಬನೇ ಮಗ ಅಂತ ನೋಡದೇ ಮನೆಯಿಂದ ಹೊರಗೆ ಹಾಕುತ್ತಿದ್ದೆ ಎಂದು ಸೊಸೆ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: BBK 12: ಮನೆಗೆ ಬರುತ್ತಲೇ ರಕ್ಷಿತಾ ಶೆಟ್ಟಿಗೆ ಅಮ್ಮನಿಂದ ಕ್ಲಾಸ್; ಸೂಪರ್ ಅವಕಾಶ ಪಡೆದ ಪುಟ್ಟಿ
ಈಗ ಅದು ಬೇಡ
ಈ ಸಂಭಾಷಣೆಯಲ್ಲಿ ಮಧ್ಯೆ ಪ್ರವೇಶಿಸಿದ ಧನುಷ್, ಹೀಗೆಲ್ಲಾ ಹೇಳ್ತಿರಲಿಲ್ಲ. ಬೇರೆ ಏನೋ ಹೇಳುತ್ತಿದ್ದೆ ಅಂತ ಅಮ್ಮನಿಗೆ ಹೇಳಿದರು. ಈಗ ಅದು ಬೇಡ ಅಂತೇಳಿ ಅದೊಂದು ಬ್ಯಾಡ್ ವರ್ಡ್ ಎಂದು ಹೇಳಿ ಧನುಷ್ ತಾಯಿ ನಗುತ್ತಾರೆ. ಧನುಷ್ ಪತ್ನಿ ಬಿಗ್‌ಬಾಸ್ ಮನೆಯೊಳಗೆ ಬರ್ತಾರಾ ಅಥವಾ ಇಲ್ಲವಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
ಇದನ್ನೂ ಓದಿ: BBK 12: ರಕ್ಷಿತಾ ಶೆಟ್ಟಿ ಭ್ರಮೆಗೆ ಕಾವ್ಯಾ ಕೊಟ್ರು ತಿರುಗೇಟು! ಭವಿಷ್ಯ ನುಡಿದ ಬಿಗ್‌ಬಾಸ್ ವೀಕ್ಷಕರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

