- Home
- Entertainment
- TV Talk
- Amruthadhaare: ಬೆಟ್ಟದಷ್ಟು ಪ್ರೀತಿ ಇದ್ರೂ ಭೂಮಿಕಾ, ಗೌತಮ್ನಿಂದ ದೂರವಿರಲು ಕಾರಣವೇನು? ಏನು ಆ ಗುಟ್ಟು?
Amruthadhaare: ಬೆಟ್ಟದಷ್ಟು ಪ್ರೀತಿ ಇದ್ರೂ ಭೂಮಿಕಾ, ಗೌತಮ್ನಿಂದ ದೂರವಿರಲು ಕಾರಣವೇನು? ಏನು ಆ ಗುಟ್ಟು?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಬ್ಬರನ್ನೊಬ್ಬರು ಪ್ರೀತಿಸಿದರೂ, ಒಂದು ಗುಟ್ಟಿನ ಕಾರಣದಿಂದ ದೂರವಾಗಿದ್ದಾರೆ. ಶಕುಂತಲಾಳ ಬೆದರಿಕೆಯೇ ಈ ವಿರಹಕ್ಕೆ ಕಾರಣವೇ ಅಥವಾ ಬೇರೆ ಸತ್ಯ ಅಡಗಿದೆಯೇ ಎನ್ನುವ ಕುತೂಹಲ ಹೆಚ್ಚಾಗಿದ್ದು, ಇಬ್ಬರ ಹಠದಿಂದಾಗಿ ಸತ್ಯ ಮಾತ್ರ ಹೊರಬರುತ್ತಿಲ್ಲ.

ಭೂಮಿಕಾ- ಗೌತಮ್ ದೂರ ದೂರ
ಅಮೃತಧಾರೆ (Amruthadhaare)ಯಲ್ಲಿ ಆದಷ್ಟು ಬೇಗ ಗೌತಮ್ ಮತ್ತು ಭೂಮಿಕಾ ಒಂದಾಗಲಿ ಎಂದು ವೀಕ್ಷಕರು ಹೇಳುತ್ತಲೇ ಬಂದಿದ್ದಾರೆ. ಇವರಿಬ್ಬರೂ ಬೇರೆ ಬೇರೆಯಾಗಿ ಇರುವುದನ್ನು ನೋಡಲು ಆಗ್ತಿಲ್ಲ. ಅವರ ಸಂಕಟ ಮುಗಿಸಿ. ಬೇಗ ಒಂದು ಮಾಡಿ ಎನ್ನುತ್ತಲೇ ಬಂದಿದ್ದಾರೆ.
ಬೆಟ್ಟದಷ್ಟು ಪ್ರೀತಿ
ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಬೆಟ್ಟದಷ್ಟು ಪ್ರೀತಿಯಿದೆ. ಗೌತಮ್, ಭೂಮಿಕಾಳನ್ನು ಸೇರಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಸೋತಿದ್ದಾನೆ. ಐದು ವರ್ಷಗಳ ಬಳಿಕ ಭೂಮಿಕಾ ಸಿಕ್ಕಾಗ ಆತ ಪಟ್ಟ ಖುಷಿ ಹಾಗೂ ನಂತರ ಭೂಮಿಕಾ ಹತ್ತಿರ ಬಾರದಾಗ ಪಟ್ಟ ನೋವು ವೀಕ್ಷಕರನ್ನು ಭಾವುಕರನ್ನಾಗಿಸಿದೆ.
ವಿಷಯ ಬೇರೆಯದ್ದೇ ಇದೆ
ಮಗಳ ವಿಷಯವನ್ನು ಮುಚ್ಚಿಟ್ಟ ಕಾರಣಕ್ಕೆ ಮಾತ್ರ ಭೂಮಿಕಾ, ತನ್ನಿಂದ ದೂರವಾಗಿಲ್ಲ ಎನ್ನುವ ಸತ್ಯ ಗೌತಮ್ಗೆ ಗೊತ್ತಿದೆ. ಇಲ್ಲಿಯವರೆಗೆ ವೀಕ್ಷಕರು ಕೂಡ ಅದನ್ನೇ ಅಂದುಕೊಂಡಿದ್ದರು. ಇಷ್ಟು ಕ್ಷುಲ್ಲಕ ಕಾರಣಕ್ಕೆ ಭೂಮಿಕಾ ದೂರವಾಗಿದ್ದು ವಿಚಿತ್ರವಾಗಿದೆ ಎಂದೇ ಅಂದುಕೊಂಡಿದ್ದರು.
ಭೂಮಿಕಾಗೆ ಪ್ರಾಮಿಸ್
ಆದರೆ, ಅಲ್ಲಿ ಇರುವುದೇ ಬೇರೆಯ ವಿಷಯ. ಇದೀಗ ಮಲ್ಲಿಯ ಬಳಿಯಿಂದ ಆ ವಿಷಯವನ್ನು ಕೆದಕಲು ಬಯಸಿದ್ದಾನೆ ಗೌತಮ್. ಆದರೆ ಭೂಮಿಕಾಳಿಗೆ ಪ್ರಾಮಿಸ್ ಮಾಡಿರುವ ಕಾರಣದಿಂದ ಆಕೆ ಬಾಯಿ ಬಿಡುತ್ತಿಲ್ಲ.
ಇಬ್ಬರಲ್ಲೂ ಗುಟ್ಟು
ಆದರೆ, ಗೌತಮ್ ಎಲ್ಲಾ ಆಸ್ತಿ ಬಿಟ್ಟು ಬಂದಿದ್ದು ಯಾಕೆ ಎಂದು ಮಲ್ಲಿ ಪ್ರಶ್ನಿಸಿದಾಗ, ಅದನ್ನು ಗೌತಮ್ ಹೇಳುವುದಿಲ್ಲ. ಭೂಮಿಕಾ ಬಗ್ಗೆ ಹೇಳಿದ್ರೆ ಮಾತ್ರ ನಾನು ಈ ಬಗ್ಗೆ ಹೇಳ್ತೇನೆ ಅಂದಿದ್ದಾನೆ.
ಏನಿದು ಗುಟ್ಟು?
ಅಲ್ಲಿಗೆ ಇಬ್ಬರ ಸೀಕ್ರೇಟ್ ಒಬ್ಬರಿಗೆ ಒಬ್ಬರು ಗೊತ್ತಿಲ್ಲ. ಸದ್ಯ ವೀಕ್ಷಕರಿಗೆ ಗೌತಮ್ ಮನೆ ಬಿಟ್ಟು ಬಂದದ್ದು, ಡ್ರೈವರ್ ಕೆಲಸಕ್ಕೆ ಸೇರಿದ್ದು ಎಲ್ಲವೂ ಗೊತ್ತು. ಆದರೆ ಭೂಮಿಕಾಳಿಗೆ ಅಂಥದ್ದೇನಾಗಿದೆ ಎನ್ನುವುದು ಮಾತ್ರ ತುಂಬಾ ಗುಟ್ಟಾಗಿಯೇ ಉಳಿದಿದೆ.
ಶಕುಂತಲಾ ಕಾರಣ
ಭೂಮಿಕಾ ಮನೆಯಿಂದ ಹೊರಬರಲು ಕಾರಣ ಶಕುಂತಲಾ ಎನ್ನುವುದು ಗೊತ್ತು. ಆಕೆ, ಮನೆಬಿಟ್ಟು ಹೋಗದಿದ್ದರೆ ಗೌತಮ್ಗೆ ತೊಂದರೆ ಮಾಡುವುದಾಗಿ ಹೇಳಿದ್ದಳು. ಆದರೆ ಇದೊಂದೇ ಕಾರಣನಾ ಅಥವಾ ಬೇರೆ ಏನಾದ್ರೂ ಇದ್ಯಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಇಬ್ಬರಲ್ಲಿ ಒಬ್ಬರು ಸೋತರೆ?
ಗೌತಮ್ ಅಥವಾ ಭೂಮಿಕಾ ಇಬ್ಬರಲ್ಲಿ ಒಬ್ಬರು ತಮ್ಮ ಅಸಲಿ ವಿಷಯ ಬಿಚ್ಚಿಟ್ಟರೆ, ಮತ್ತೊಬ್ಬರು ಒಡಲಲ್ಲಿ ಮುಚ್ಚಿಟ್ಟುಕೊಂಡ ಗುಟ್ಟನ್ನು ಹೇಳುತ್ತಾರೆ. ಆದರೆ ಇಲ್ಲಿ ಇಬ್ಬರೂ ಹಟಮಾರಿಗಳು. ಇದೇ ಕಾರಣದಿಂದಾಗಲೇ ನಿಜ ಜೀವನದಲ್ಲಿಯೂ ಅದೆಷ್ಟೋ ದಾಂಪತ್ಯ ಜೀವನ ಹಾಳಾಗುವುದೂ ಇದೆ ಎನ್ನುವುದು ವೀಕ್ಷಕರ ಅಭಿಮತ.
ಮಲ್ಲಿಯಿಂದ ಬುದ್ಧಿ ಮಾತು
ಒಟ್ಟಿನಲ್ಲಿ, ಇಬ್ಬರ ಗುಟ್ಟೂ ರಟ್ಟಾಗಬೇಕು. ಇದಾಗಲೇ ಮಲ್ಲಿ ಭೂಮಿಕಾಗೆ ಬುದ್ಧಿ ಹೇಳಿದ್ದಾಳೆ. ಇಬ್ಬರೂಕುಳಿತು ಮನಸ್ಸು ಬಿಚ್ಚಿ ಮಾತನಾಡಿ ಎಂದಿದ್ದಾಳೆ. ಆದರೆ, ಇಬ್ಬರೂ ಅದನ್ನು ಮಾಡುತ್ತಿಲ್ಲ.