- Home
- Entertainment
- TV Talk
- Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್‌ನ ಆರೈಕೆ ಮಾಡಲು ಭೂಮಿಕಾ ಮುಂದಾಗುತ್ತಾಳೆ. ಆದರೆ, ಇವರಿಬ್ಬರ ಸಂಬಂಧ ತಿಳಿಯದ ವಠಾರದವರು ಗೌತಮ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಭೂಮಿಕಾ ರಣಚಂಡಿಯ ಅವತಾರ ತಾಳಿ ಎಲ್ಲರಿಗೂ ತಕ್ಕ ಉತ್ತರ ನೀಡುತ್ತಾಳೆ.

ಇನ್ನೊಂದು ಹಂತಕ್ಕೆ
ಅಮೃತಧಾರೆ (Amruthadhaare) ಸೀರಿಯಲ್ ಈಗ ಇನ್ನೊಂದು ಹಂತಕ್ಕೆ ಹೋಗಿದೆ. ಒಂದೇ ವಠಾರದಲ್ಲಿ ಇದ್ದರೂ, ಗೌತಮ್ ಮತ್ತು ಭೂಮಿಕಾ ದೂರದೂರವಿದ್ದಾರೆ. ಆದರೆ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಗೌತಮ್ಗೆ ಜ್ವರ ಬಂದಿರೋ ವಿಷಯ ತಿಳಿದು ಭೂಮಿಕಾ ಕುಗ್ಗಿ ಹೋಗಿದ್ದಾಳೆ.
ಗೌತಮ್ ಆರೈಕೆಯಲ್ಲಿ ಭೂಮಿಕಾ
ಆತನ ಆರೈಕೆಯಲ್ಲಿ ಭೂಮಿಕಾ ನಿಂತಿದ್ದಾಳೆ. ಆದರೆ ವಠಾರದವರಿಗೆ ಇವರಿಬ್ಬರೂ ಗಂಡ-ಹೆಂಡತಿ ಎನ್ನೋದು ಗೊತ್ತಿಲ್ಲವಲ್ಲ. ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ತನ್ನ ವಿರುದ್ಧ ಮಾತನಾಡಿದರೆ ಭೂಮಿಕಾ ಸಹಿಸಿಕೊಳ್ಳುತ್ತಿದ್ದಳೇನೋ. ಆದರೆ ಅವರು ಮಾತನಾಡಿದ್ದು ಗೌತಮ್ ವಿರುದ್ಧ.
ಗಂಡನ ಬಗ್ಗೆ ಪ್ರಶ್ನೆ
ಮೊದಲಿಗೆ ಅವರ ಮನೆಯಿಂದ ಹೊರಕ್ಕೆ ಬಂದದ್ದನ್ನು ನೋಡಿದ ಹೆಂಗಸರು ಎಲ್ಲಿ ನಿಮ್ಮ ಗಂಡ ಕಾಣಿಸ್ತಾನೆ ಇಲ್ವಲ್ಲಾ. ಇದೆಲ್ಲಾ ಅವರು ನೋಡಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದಿದ್ದಾರೆ. ಅದಕ್ಕೆ ಭೂಮಿಕಾ ಕುದಿಯುತ್ತಿದ್ದರೂ ಸುಮ್ಮನಾಗಿದ್ದಾಳೆ.
ಗೌತಮ್ ಬಗ್ಗೆ ಮಾತು
ಬಳಿಕ ಸುಮ್ಮನಾಗದ ವಠಾರದವರು, ಗೌತಮ್ ಹೀಗೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಗಂಡನ ವಿರುದ್ಧ ಮಾತನಾಡಿದ್ದನ್ನು ನೋಡಿ ರಣಚಂಡಿ ಅವತಾರ ಎತ್ತೇಬಿಟ್ಟಿದ್ದಾಳೆ ಭೂಮಿಕಾ.
ಭೂಮಿಕಾ ಚಾಟಿ ಏಟು
ವಠಾರದ ಹೆಂಗಸರಿಗೆ ಚಾಟಿ ಏಟು ನೀಡಿದ್ದಾಳೆ. ಅವರು ಬಂದು ಐದು ವರ್ಷವಾಯ್ತು. ಒಮ್ಮೆಯಾದರೂ ಈ ವಠಾರದ ಹೆಣ್ಣುಮಕ್ಕಳ ಮೇಲೆ ಕೆಟ್ಟ ಕಣ್ಣು ಹಾಕಿದ್ದಾರಾ ಎಂದು ಪ್ರಶ್ನಿಸಿದ್ದಾಳೆ. ಅವರು ಹೊರಗಡೆ ಕೆಲವು ದಿನಗಳಿಂದ ಬರಲಿಲ್ಲ. ಅದನ್ನು ಯಾರಾದ್ರೂ ಗಮನಿಸಿ ಅವರಿಗೆ ಏನು ಆಗಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ರಾ ಎಂದು ಪ್ರಶ್ನಿಸಿದ್ದಾಳೆ.
ತಲೆ ತಗ್ಗಿಸಿದ ಮಹಿಳೆಯರು
ಅವಳ ಈ ರೌದ್ರಾವತಾರಕ್ಕೆ ಮಹಿಳೆಯರು ಸುಸ್ತಾಗಿ ತಲೆ ಬಗ್ಗಿಸಿ ನಿಂತಿದ್ದಾರೆ. ಅವರು ಎಷ್ಟೆಲ್ಲಾಮಂದಿಗೆ ಹೆಲ್ಪ್ ಮಾಡಿದ್ದಾರೆ. ನೀವು ಅವರಿಗೆ ಏನು ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ ಭೂಮಿಕಾ, ಅವರ ಬಗ್ಗೆ ಮಾತನಾಡಲು ನಿಮಗೆ ಯಾರಿಗೂ ಅರ್ಹತೆ ಇಲ್ಲ ಎಂದಿದ್ದಾಳೆ.