ಬಿಗ್‌ಬಾಸ್ ಸ್ಪರ್ಧಿ ನೈಜೀರಿಯನ್ ಕನ್ನಡಿಗ ಮೈಕಲ್ ಅಂತರಾಷ್ಟ್ರೀಯ ಮಾಡೆಲ್, ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ
ಕನ್ನಡದ ಬಿಗ್‌ಬಾಸ್ ಸೀಸನ್ 10 ಆರಂಭವಾಗಿದೆ. ಈ ಬಾರಿ ಗಮನ ಸೆಳೆದದ್ದು ನೈಜೀಯರಿಯನ್ ಕನ್ನಡಿಗ ಮೈಕಲ್ ಅಜಯ್. ಮೈಕಲ್ ಅಜಯ್ ತಮ್ಮ ಲುಕ್ ಮಾತ್ರವಲ್ಲದೆ, ಅಚ್ಚ ಕನ್ನಡದಲ್ಲಿ ಮಾತನಾಡುವ ಮೂಲಕವೂ ನಿರೂಪಕ ನಟ, ಸುದೀಪ್ ಜೊತೆಗೆ ನೆರದಿದ್ದವರ ಗಮನ ಸೆಳೆದರು. ಮೈಕೆಲ್ ಯಾರು? ಹಿನ್ನೆಲೆ ಏನು? ಅವರ ಸಾಧನೆಗಳು ಏನು ಎಂಬುದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
6 ಅಡಿ ಎತ್ತರದ ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರನಾಗಿರುವ ಮೈಕಲ್ ಅಜಯ್ ಹೂಡಿಕೆ ಬ್ಯಾಂಕಿಂಗ್ ಕ್ಷೇತ್ರದ ವಿಶ್ಲೇಷಕ. ಫಿಟ್‌ನೆಟ್ ತರಬೇತುದಾರನಾಗಿದ್ದಾರೆ.
ಮೈಕಲ್ ಅಜಯ್ ತನ್ನ 22 ನೇ ವಯಸ್ಸಿನಲ್ಲಿ ತನ್ನ ಮೊದಲ ಕಂಪನಿಯನ್ನು ಪ್ರಾರಂಭಿಸಿದರು. ಬಳಿಕ ರಿಯಾಲಿಟಿ ಶೋಗಳನ್ನು ಮಾಡಿದರು. ಇವರೊಬ್ಬ ಅಂತರರಾಷ್ಟ್ರೀಯ ಫ್ಯಾಷನ್ ಮಾಡೆಲ್ .
29 ವರ್ಷದ ಮೈಕಲ್ ಅಜಯ್ 1994ರಲ್ಲಿ ನೈಜೀರಿಯಾದ ಲಾಗೋಸ್ ನಲ್ಲಿ ಜನಿಸಿದ್ದು, ತಂದೆ ನೈಜೀರಿಯನ್ ಮತ್ತು ತಾಯಿ ಬೆಂಗಳೂರಿನವರಾಗಿದ್ದಾರೆ. ಇವರ ಅಜ್ಜ ಕೊಡಗು ಮೂಲದವರಂತೆ.
ತನಗೆ ಮೂರು ವರ್ಷವಿರುವಾಗ ಅಪ್ಪ- ಅಮ್ಮ ಬೇರೆಯಾಗಿ ವಿಚ್ಚೇದನ ಪಡೆದರು. ತಾಯಿಯ ಆಸರೆಯಲ್ಲೇ ಬೆಳೆದಿದ್ದೇನೆ ಎಂದು ಮೈಕಲ್ ಅಜಯ್ ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಸ್ಕೂಲ್ ಕಾಲೇಜು ಟೈಂ ನಲ್ಲಿ ರಾಷ್ಟ್ರಮಟ್ಟದ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದ ಮೈಕಲ್ ಅಜಯ್ ಓದಿದ್ದು, ತಮಿಳುನಾಡಿನಲ್ಲಿರುವ ಕೊಯಂಮತ್ತೂರ್ ನ ಪಿಎಸ್‌ಜಿ ಕಲಾ ಮತ್ತು ವಿಜ್ಞಾನ ಕಾಲೇಜುನಲ್ಲಿ, ಇಲ್ಲಿ ಬಿಎಸ್‌ಸಿ ಕಂಪ್ಯೂಟರ್ ಸೈನ್ಸ್ ಪದವಿ ಮಾಡಿದ್ದಾರೆ. ಮತ್ತು ಶಾಲಾ ದಿನಗಳನ್ನು ಊಟಿಯಲ್ಲಿ ಕಳೆದಿದ್ದಾರೆ.
ಬೈಕ್ ಅಪಘಾತದಲ್ಲಿ ಮೈಕಲ್ ತನ್ನ ಕಾಲಿಗೆ ಏಟು ಮಾಡಿಕೊಂಡು ಎಲುಬು ಮುರಿದುಕೊಂಡಾಗ ಆ ಗಾಯದಿಂದ ಹೊರಬರಲು 4 ತಿಂಗಳಾಯ್ತು. ಹೀಗಾಗಿ ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನಕೊಟ್ಟರು. ಇದಕ್ಕಾಗಿ ಮೆಂಟಲ್ ಹೆಲ್ತ್ ಮತ್ತು ಫಿಸಿಕಲ್ ಹೆಲ್ತ್ ಬಗ್ಗೆ ಕೂಡ ಅಧ್ಯಯನ ಮಾಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಕಲ್ ಹಲವಾರು ಅಜಿಯೋ, ಆಲಿಯನ್ ಸೋಲಿ ಸೇರಿ ಹಲವಾರು ಬಟ್ಟೆ ಬ್ರ್ಯಾಂಡ್, ಕ್ರೀಡಾ ಬ್ರ್ಯಾಂಡ್ ಸೇರಿ ಅನೇಕ ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡಿದ್ದಾರೆ. ಮಾತ್ರವಲ್ಲ ಅನೇಕ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದಾರೆ.
ಮಾಡೆಲಿಂಗ್ ಜನಪ್ರಿಯತೆಯಿಂದ ಅನೇಕ ದೇಶಗಳನ್ನು ಸುತ್ತಿದ್ದೇನೆ ಎಂದು ಮೈಕಲ್ ಅಜಯ್ ಬಿಗ್‌ಬಾಸ್ ವೇದಿಕೆಯಲ್ಲಿ ಹೇಳಿದ್ದಾರೆ. ಈಗ ಮೈಕೆಲ್ ಬೆಂಗಳೂರಿನಲ್ಲಿ ಒಂದು ಬಾರ್ಬೆಕ್ಯೂ ಬರ್ಗರ್ ಶಾಪ್ ಹೊಂದಿದ್ದಾರೆ.
ಇನ್ನು ಡ್ರೆಡ್‌ಲಾಕ್ಸ್ (dreadlocks)ಹೆರ್ ಸ್ಟೈಲ್ ಮಾಡಿಸಿಕೊಂಡಿರುವ ಮೈಕಲ್ ತಲೆಸ್ನಾನ ಮಾಡಲು ಅರ್ಧಗಂಟೆ ತೆಗೆದುಕೊಳ್ಳುತ್ತಾರಂತೆ. 4 ವರ್ಷದಿಂದ ತಲೆ ಕೂದಲು ಬೆಳೆಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ನನ್ನ ಲುಕ್ ಗೆ ಕನ್ನಡ ಚಿತ್ರರಂಗದಲ್ಲಿ ವಿಲನ್ ರೋಲ್ ಸಿಕ್ಕರೆ ಚೆನ್ನಾಗಿರುತ್ತೆ. ನನಗೆ ವಿಲನ್ ರೋಲ್ ಇಷ್ಟ ಎಂದು ಸುದೀಪ್ ಮುಂದೆ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಫೀನಿಕ್ಸ್ ಮೆಗಾ ಮಾಡೆಲ್ ಹಂಟ್, ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ತಮ್ಮ ಫಿಟ್‌ನೆಸ್ ಮೂಲಕ 6 ತಿಂಗಳಲ್ಲಿ 25 ಕೆಜಿ ಮೈಕೆಲ್ ದೇಹ ಕರಗಿಸಿದ್ದರು. ಕನ್ನಡ , ಹಿಂದಿ ಸೇರಿ ಹಲವು ಭಾಷೆ ಬಲ್ಲವರಾಗಿದ್ದು, ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ.
ಇನ್ನು MTVಯ ಜನಪ್ರಿಯ ರಿಯಾಲಿಟಿ ಶೋ ರೋಡೀಸ್ ನ 18 ಆವೃತ್ತಿ, ರೋಡೀಸ್ ರೆವಲ್ಯೂಷನ್ ನಲ್ಲಿ ಮೈಕಲ್ ಅಜಯ್ ಕಾಣಿಸಿಕೊಂಡಿದ್ದರು. ಮತ್ತು ಅಲ್ಲಿ ರನ್ನರ್ ಅಪ್ ಆಗಿ ಟ್ರೋಪಿ ಗೆದ್ದಿದ್ದರು. ಈ ಬಾರಿ ಕನ್ನಡದಲ್ಲಿ ಬಿಗ್‌ಬಾಸ್ ಗೆಲ್ತಾರಾ ಕಾದು ನೋಡಬೇಕು.