- Home
- Entertainment
- TV Talk
- Bigg Boss ಕನ್ನಡ ಸ್ಪರ್ಧಿಗಳಿಗೆ ಒಂದೇ ಒಂದು ಫೋನ್‌ಗೆ ಅವಕಾಶ: ಅಬ್ಬಬ್ಬಾ ಇಷ್ಟೊಂದು ರಾದ್ಧಾಂತನಾ?
Bigg Boss ಕನ್ನಡ ಸ್ಪರ್ಧಿಗಳಿಗೆ ಒಂದೇ ಒಂದು ಫೋನ್‌ಗೆ ಅವಕಾಶ: ಅಬ್ಬಬ್ಬಾ ಇಷ್ಟೊಂದು ರಾದ್ಧಾಂತನಾ?
ಬಿಗ್‌ಬಾಸ್ ಮನೆಯಲ್ಲಿ ಮೊಬೈಲ್ ಫೋನ್‌ಗೆ ಅವಕಾಶವಿಲ್ಲದಿದ್ದರೂ, ಒಂದು ವೇಳೆ ಒಂದೇ ಒಂದು ಫೋನ್ ಕೊಟ್ಟರೆ ಏನಾಗಬಹುದು ಎಂಬ ಚರ್ಚೆ ನಡೆದಿದೆ. ಗಿಲ್ಲಿ ನಟ ಆರಂಭಿಸಿದ ಈ ಚರ್ಚೆಯಲ್ಲಿ, ಸ್ಪರ್ಧಿಗಳು ಫೋನ್‌ಗಾಗಿ ಅದು ಒಡೆದು ಹೋಗುವವರೆಗೂ ಕಿತ್ತಾಡುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಫೋನ್‌ಗೆ ಅವಕಾಶವಿಲ್ಲ
ಬಿಗ್‌ಬಾಸ್ ಮನೆಯಲ್ಲಿ ಮೊಬೈಲ್ ಫೋನ್‌ಗೆ ಅವಕಾಶವಿಲ್ಲ. ಅಲ್ಲಿ ಇರುವವರೆಗೂ ಅದೆಷ್ಟೇ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ರೂ ಅವುಗಳನ್ನು ಬದಿಗೊತ್ತಿ ಬಿಗ್ಬಾಸ್ನಲ್ಲಿ ಲೈಫ್ ಲೀಡ್ ಮಾಡಬೇಕು.
ವೀಕ್ಷಕರಿಗೆ ಮನವಿ
ಬಿಗ್ಬಾಸ್ಗೆ ಆಯ್ಕೆಯಾದ ಬಳಿಕ, ತಮ್ಮ ಸ್ನೇಹಿತರು, ಕುಟುಂಬಸ್ಥರಿಗೆ ಫೋನ್ ಹ್ಯಾಂಡಲ್ ಮಾಡಲು ಕೊಟ್ಟು ಬರುತ್ತಾರೆ ಸ್ಪರ್ಧಿಗಳು. ಇದೇ ಕಾರಣಕ್ಕೆ ಅವರು ಸ್ಪರ್ಧಿಗಳ ಅಸಲಿ ಖಾತೆಯಿಂದ ಬಿಗ್‌ಬಾಸ್ ವೀಕ್ಷಕರಿಗೆ ಮನವಿ ಮಾಡಿಕೊಳ್ಳುತ್ತಿರುತ್ತಾರೆ.
ಫೋನ್ ಕೊಟ್ಟುಬಿಟ್ಟರೆ
ಆದರೆ, ಒಂದು ವೇಳೆ ಬಿಗ್‌ಬಾಸ್ ಮನೆಯಲ್ಲಿ ಫೋನ್ ಕೊಟ್ಟುಬಿಟ್ಟರೆ? ಒಂದೇ ಒಂದು ಫೋನ್ ಕೊಟ್ಟರೆ ಏನು ಆವಾಂತರ ಆಗುತ್ತದೆ ಎನ್ನುವ ಬಗ್ಗೆ ಜೋರಾಗಿ ಚರ್ಚೆನಡೆದಿದೆ!
ಚರ್ಚೆ ಆರಂಭ
ಈ ಬಗ್ಗೆ ಗಿಲ್ಲಿ ನಟ (Bigg Boss Gilli Nata) ಚರ್ಚೆ ಆರಂಭಿಸಿದ್ದಾರೆ. ಒಂದು ವೇಳೆ ಒಂದೇ ಒಂದು ಫೋನ್ ಕೊಟ್ಟು ಒಂದೇ ಒಂದು ಚಾರ್ಜರ್ ಕೊಟ್ಟರೆ ಏನಾಗುತ್ತೆ ಎನ್ನುವ ಬಗ್ಗೆ ಈ ಚರ್ಚೆ.
ಫೋನ್‌ಗಾಗಿ ಕಿತ್ತಾಟ
ಹೀಗೇನಾದರೂ ಆದರೆ ಬಿಗ್ಬಾಸ್ನ ಸ್ಪರ್ಧಿಗಳು ಎಲ್ಲಾ ವಿಷಯ ಬಿಟ್ಟು ಫೋನ್ಗಾಗಿಯೇ ಕಿತ್ತಾಡಲು ಶುರು ಮಾಡುತ್ತಾರೆ ಎಂದು ಚರ್ಚಿಸಿದ್ದಾರೆ. ಒಬ್ಬ ರೀಲ್ಸ್ ನೋಡ್ತಾ ಕೂತಿರ್ತಾನೆ. ಮತ್ತೊಬ್ಬನಿಗೆ ನಿದ್ದೆ ಬರದೇ ಸಿಟ್ಟು ಬರುತ್ತೆ. ಅಲ್ಲಿಂದ ಶುರುವಾಗುವ ಜಗಳ ತಾರಕಕ್ಕೇರುತ್ತೆ ಎಂದಿದ್ದಾರೆ ಗಿಲ್ಲಿ ನಟ.
ಒಡೆದು ಹೋಗೋವರೆಗೂ
ನನಗೆ ಬೇಕು, ನಿನಗೇ ಬೇಕು ಎಂದು ಮೊಬೈಲ್ ಫೋನ್ ಕೆಳಕ್ಕೆ ಬಿದ್ದು ಒಡೆದು ಹೋಗುವವರೆಗೂ ಕಿತ್ತಾಟ ಶುರು ಮಾಡುತ್ತಾರೆ ಎಂದು ಗಿಲ್ಲಿ ನಟ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

