ನಟನೆ ಸೂಪರ್, ಟ್ಯಾಲೆಂಟ್ ಡಬಲ್… ಆದ್ರೂ ಈ ಇಬ್ಬರು ನಟಿಯರಿಗೆ ಚಾನ್ಸ್ ಸಿಗ್ತಿಲ್ಲಾ ಯಾಕೆ?
Viral Post: ಇವರು ಕನ್ನಡದ ಅದ್ಭುತ ಪ್ರತಿಭೆಗಳು, ನಟನೆ ಮಾಡೋದಾದ್ರೂ ಸೈ, ನಿರೂಪಣೆ ಮಾಡೋದಾದ್ರೂ ಸೈ, ನೃತ್ಯ, ಮಾತು, ಕಥೆ ಎಲ್ಲಾದರಲ್ಲೂ ಬೆಸ್ಟ್ . ಆದರೆ ಪ್ರತಿಭೆ ಬೆಟ್ಟದಷ್ಟಿದ್ದರೂ, ಕನ್ನಡ ಕಿರುತೆರೆ -ಹಿರಿತೆರೆಯಲ್ಲಿ ಇವರಿಗ್ಯಾಕೆ ಅವಕಾಶಗಳು ಸಿಗುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಕನ್ನಡದ ಜನಪ್ರಿಯ ನಟಿ-ನಿರೂಪಕಿಯರು
ಕನ್ನಡದಲ್ಲಿ ಹಲವಾರು ಜನಪ್ರಿಯ ನಿರೂಪಕಿಯರು, ನಟರು ಇದ್ದಾರೆ. ಆದರೆ ಹೆಚ್ಚಿನವರಿಗೆ ಅವಕಾಶದ ಕೊರತೆ ಇದೆ. ಅದರಲ್ಲೂ ಕನ್ನಡದ ಈ ಇಬ್ಬರು ನಟಿ-ನಿರೂಪಕಿಯರು, ಎಷ್ಟೊಂದು ಪ್ರತಿಭಾನ್ವಿತರು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಇಬ್ಬರಿಗೂ ಅವಕಾಶದ ಕೊರತೆ ಇದೆ. ಯಾಕೆ ಈ ನಟಿಯರಿಗೆ ಅವಕಾಶ ಸಿಗ್ತಿಲ್ಲ ಎಂದು ಕೇಳುತ್ತಿದ್ದಾರೆ ನೆಟ್ಟಿಗರು.
ಪ್ರತಿಭೆ ಇದ್ದರೂ ಅವಕಾಶ ಸಿಗುತ್ತಿಲ್ವಾ?
ಇವರು ಬೇರ್ಯಾರು ಅಲ್ಲ. ನಮ್ಮ ಕನ್ನಡದ ನಟಿ-ನಿರೂಪಕಿಯರಾದ ಕಾವ್ಯಾ ಶಾ ಮತ್ತು ಅನುಪಮಾ ಗೌಡ. ಇಬ್ಬರು ಸಹ ಅದ್ಭುತ ನಟಿಯರು. ಅನುಪಮಾ ಗೌಡಗೆ ಅದ್ಭುತ ನಟನೆಗಾಗಿ ರಾಜ್ಯ ಪ್ರಶಸ್ತಿ ಕೂಡ ಬಂದಿದೆ. ಕಾವ್ಯಾ ಶಾ ಸೋಶಿಯಲ್ ಮೀಡೀಯಾ ಮೂಲಕ ತಮ್ಮ ನಟನಾ ಕೌಶಲ್ಯ ತೋರಿಸುತ್ತಿದ್ದಾರೆ. ಆದರೆ ಹೆಚ್ಚಿನ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ಅನುಪಮಾ ಗೌಡ
ಅನುಪಮಾ ಗೌಡ ಬಾಲ ನಟಿಯಾಗಿ ಲಂಕೇಶ್ ಪತ್ರಿಕೆಯಲ್ಲಿ ನಟಿಸಿದ್ದರು. ಬಳಿಕ ಅಕ್ಕ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದವರು. ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದರು ಅನುಪಮಾ. ಇವರು ಆ ಕರಾಳ ರಾತ್ರಿ ಸಿನಿಮಾಕ್ಕಾಗಿ ಸೈಮಾ ಅವಾರ್ಡ್ ಮತ್ತು ತ್ರಯಂಬಕಂ ಸಿನಿಮಾಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದರು. ಕಳೆದ ಐದು ವರ್ಷಗಳಿಂದ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಯಾಕೆ ಯಾವ ಸಿನಿಮಾದಲ್ಲೂ ನಟಿಸಿಲ್ಲ?
ಅನುಪಮಾ ಗೌಡ ಕೊನೆಯದಾಗಿ 2020ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ನಟಿಸಿದ್ದರು. ಯಾಕೆ ನಟಿಸುತ್ತಿಲ್ಲ, ಸಿನಿಮಾ ರಿಜೆಕ್ಟ್ ಮಾಡ್ತಿದ್ದೀರಾ ಎಂದು ಪತ್ರಕರ್ತರೊಬ್ಬರು ರಾಜ್ಯಪ್ರಶಸ್ತಿ ಸಂದರ್ಭ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಪಮಾ, ಸಿನಿಮಾ, ಒಳ್ಳೊಳ್ಳೆ ಪಾತ್ರಗಳು ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ. ಆದರೆ ನನಗೆ ಅವಕಾಶಗಳೆ ಸಿಗುತ್ತಿಲ್ಲ. ಈ ವಿಡಿಯೋ ನೋಡಿ ಆದ ಮೇಲಾದ್ರೂ ಅವಕಾಶ ಸಿಗಲಿ ಎಂದು ಹೇಳಿದ್ದಾರೆ.
ಕಾವ್ಯಾ ಶಾ
ನಟ ನಾಗೇಂದ್ರ ಶಾ ಪುತ್ರಿಯಾದ ಕಾವ್ಯಾ ಶಾ ಮಿಸ್ಟರ್ & ಮಿಸಸ್ ರಾಮಾಚಾರಿ, ಚಕ್ರವ್ಯೂಹ, ಮುಕುಂದ ಮುರಾರಿ, ತಾರೈ ಥಪ್ಪಟ್ಟೈ, ಲೌಡ್‌ಸ್ಪೀಕರ್, ಮೂಕಜ್ಜಿಯ ಕನಸುಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕನಟಿ ಆಗಿ ನಟಿಸಿದ್ದರು. ಅಪ್ಪ ನಟ, ಪತಿ ಜೀ ಕನ್ನಡದಲ್ಲಿ ಕೆಲಸ ಹಾಗೂ ನಿರ್ಮಾಪಕ. ಹಾಗಿದ್ದರೂ ನಟಿಗೆ ಹೆಚ್ಚಿನ ಸಿನಿಮಾ, ಸೀರಿಯಲ್ ಗಳಲ್ಲಿ ನಟನೆಗೆ ಅವಕಾಶವೇ ಸಿಗುತ್ತಿಲ್ಲ.
ಅವಕಾಶಗಳಿಂದ ವಂಚಿತೆ
ಕಾವ್ಯಾ ಇತ್ತೀಚೆಗೆ ಇನ್’ಸ್ಟಾಗ್ರಾಂ ವಿಡಿಯೋ ಮಾಡಿ ಚಿಕ್ಕ ವಯಸ್ಸಿಂದ ಚಿತ್ರರಂಗದಲ್ಲಿ ಪಳಗಿದ್ರು ಕೂಡ ನನಗೆ ಅವಕಾಶಗಳು ಸಿಗ್ತಾ ಇರಲಿಲ್ಲ ಮತ್ತು ಇವಾಗಲೂ ಕೂಡ ಸಿಗುತ್ತಿಲ್ಲ. ನನ್ನ ಧ್ವನಿ ಸರಿಯಿಲ್ಲ, ಪಾತ್ರಕ್ಕೆ ಸೂಟ್ ಆಗುತ್ತಿಲ್ಲ ಎಂದು ಹಲವಾರು ಬಾರಿ ರಿಜೆಕ್ಟ್ ಆಗಿದ್ದೇನೆ. ಒಮ್ಮೆ ಡಿಪ್ರೆಶನ್ ಗೂ ಹೋಗಿದ್ದೇನೆ. ಆದರೆ ಪತಿಯ ಬೆಂಬಲದಿಂದ ರೀಲ್ಸ್ ನಲ್ಲಿ ನಟನೆ ಮಾಡಿ, ಜನರಿಗೆ ತಲುಪಿದ್ದೇನೆ. ಮುಂದೊಂದು ದಿನ ನಟಿಸುವ ಅವಕಾಶ ಕೂಡ ಸಿಗಬಹುದು ಎಂದಿದ್ದಾರೆ. ಈ ಇಬ್ಬರು ಅದ್ಭುತ ಪ್ರತಿಭೆಗಳಿಗೆ ಯಾವಾಗ ಅವಕಾಶ ಸಿಗುತ್ತೆ ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

