ಕನ್ನಡ ಕಿರುತೆರೆಯ ನಿರೂಪಕಿ ಅನುಪಮಾ ಗೌಡ, ಇತ್ತೀಚೆಗೆ ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಹುಟ್ಟುಹಬ್ಬಕ್ಕೆ ಶುಭಾಶಯಗಳು ಹರಿದು ಬಂದಿದೆ.
ಅನುಪಮಾ ಗೌಡ ಹುಟ್ಟುಹಬ್ಬಕ್ಕೆ ವಿವಿಧ ತಾರೆಯರು ಶುಭಾಶಯ ತಿಳಿಸಿದ್ದರು, ಆದರೆ ಒಬ್ಬರು ಮಾಡಿರುವಂತಹ ಸ್ಪೆಷಲ್ ವಿಶ್ ಇದೀಗ ಗಮನ ಸೆಳೆದಿದೆ.
ಅನುಪಮಾ ಬಹು ಕಾಲದ ಗೆಳೆಯ ಫೋಟೊಗ್ರಾಫರ್ ಆಗಿರುವ ರಾಘವ್ ಅನು ಹುಟ್ಟುಹಬ್ಬಕ್ಕೆ ಇಬ್ಬರ ಮುದ್ದಾದ ಹಲವು ಫೋಟೊಗಳನ್ನು ಶೇರ್ ಮಾಡಿ ವಿಶ್ ಮಾಡಿದ್ದಾರೆ.
ನನ್ನ 12 ವರ್ಷಗಳ ಎಲ್ಲಾ ಏರಿಳಿತಗಳನ್ನು ಕಂಡ ಈ ಅದ್ಭುತ ಮಹಿಳೆಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮ್ಮ ಅತ್ಯುತ್ತಮ ಆವೃತ್ತಿಯಾಗಿ ಮತ್ತು ನನ್ನನ್ನು ಸಹಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು.
ಸ್ನೇಹದ ಇನ್ನೂ ಅನೇಕ ಅದ್ಭುತ ವರ್ಷಗಳಿಗೆ. ಮುಂಬರುವ ಇನ್ನೂ ಅನೇಕ ಕಿರಿಕಿರಿ ದಿನಗಳಿಗಾಗಿ ನಿನ್ನನ್ನು ಸಿದ್ಧಪಡಿಸಿಕೊ! ಜನ್ಮದಿನದ ಶುಭಾಶಯಗಳು ಅನು ಎಂದು ವಿಶ್ ಮಾಡಿದ್ದಾರೆ.
ರಾಘವ್ ರಾಶಿ ರಾಶಿ ಫೋಟೊಗಳ ಜೊತೆ ವಿಶ್ ಮಾಡುತ್ತಿದ್ದಂತೆ, ಅನುಪಮಾ ಅಭಿಮಾನಿಗಳಲ್ಲಿ ಅನುಪಮಾಗೆ ಮತ್ತೆ ಲವ್ ಆಗಿದ್ಯಾ ಎನ್ನುವ ಸಂಶಯ ಮೂಡಿದೆ.
ಕೆಲವರು ಕಾಮೆಂಟ್ ಮಾಡಿ ಇವರಿಬ್ಬರೂ ಕಪಲ್ಸ್? ಪ್ರೀತಿಸ್ತಿದ್ದಾರ ಅಂತೆಲ್ಲಾ ಕೇಳಿದ್ದಾರೆ, ಅದಕ್ಕೇ ಕೆಲವರು ಇವರು ಕಪಲ್ಸ್ ಎಂದರೆ, ಇನ್ನೂ ಕೆಲವರು ಇಲ್ಲ ಬೆಸ್ಟ್ ಫ್ರೆಂಡ್ ಎಂದಿದ್ದಾರೆ.
ಇನ್ನೂ ಒಬ್ಬರು ಕಾಮೆಂಟ್ ಮಾಡಿ, ಅನುಪಮಾ ಕಣ್ಣಲ್ಲಿ ರಾಘವ್ ಮೇಲಿನ ಪ್ರೀತಿ ಕಾಣಿಸ್ತಿದೆ, ಇಬ್ಬರು ಜೋಡಿಯಾದರೆ ತುಂಬಾನೆ ಚೆನ್ನಾಗಿರುತ್ತೆ ಎಂದಿದ್ದಾರೆ.
ರಾಘವ್ ಮತ್ತು ಅನು ಹಲವಾರು ತಾಣಗಳಿಗೆ ಜೊತೆಯಾಗಿ ಟ್ರಾವೆಲ್ ಮಾಡಿದ್ದು, ಫೋಟೋಗಳನ್ನು ನೋಡಿದ್ರೆ ಇಬ್ಬರ ನಡುವೆ ಸುಂದರ ಬಾಂಧವ್ಯ ಕಾಣಿಸುತ್ತೆ.
ರಾಜ್ಯ ಪ್ರಶಸ್ತಿ ಸಂದರ್ಭದಲ್ಲೂ, ಅನು ಹುಟ್ಟುಹಬ್ಬದ ಸಂದರ್ಭದಲ್ಲಿ, ಟ್ರಾವೆಲ್, ಮನೆಯಲ್ಲಿ ಪೂಜೆ ಸಮಯದಲ್ಲೂ ರಾಘವ್ ಜೊತೆಯಾಗಿಯೇ ಇರುತ್ತಾರೆ. ಹಾಗಾಗಿ ಇವರಿಬ್ಬರೂ ಜೋಡಿಗಳು ಎನ್ನುವ ಸುದ್ದಿ ಇದೆ.
ಫ್ಯಾನ್ಸ್ ಇದು ಲವ್ ಎನ್ನುತ್ತಿದ್ದರೆ, ಅನುಪಮಾ ಮಾತ್ರ ವಿಶ್ ಮಾಡಿದ ರಾಘವ್ ಗೆ ಥ್ಯಾಂಕ್ಯೂ ಫ್ರೆಂಡು ಎಂದು ಕಾಮೆಂಟ್ ಮಾಡಿದ್ದಾರೆ.
ಅನುಪಮಾ ಹಿಂದೆ ಜಗನ್ ಜೊತೆ ರಿಲೇಶನ್ ಶಿಪ್’ನಲ್ಲಿದ್ದು, ನಂತರ ದೂರ ಆಗಿದ್ದರು. ಇದರಿಂದ ಅನುಪಮಾ ತುಂಬಾ ಕುಗ್ಗಿದ್ದರು. ಇದೀಗ ಮತ್ತೆ ಅನುಪಮಾಗೆ ಲವ್ ಆಗಿದ್ಯಾ? ಅವರೇ ಹೇಳಬೇಕು.