'ನಾ ನಿನ್ನ ಬಿಡಲಾರೆ' ಅಂತಿದ್ದಾರೆ ನಟಿ ನೀತಾ ಅಶೋಕ್; ನಿಜಕ್ಕೂ ಏನ್ ಅಯ್ತು?
ಮತ್ತೆ ಕಿರುತೆರೆ ಮರುಳಿದ ನೀತಾ ಅಶೋಕ್...ಹಿಟ್ ಸಿನಿಮಾ

2014 ಯಶೋಧೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ನೀತಾ ಅಶೋಕ್ ನೀಲಾಂಬರಿ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.
2019ರಲ್ಲಿ ಜಬರದಸ್ತ್ ಶಂಕರ್ ತೆಲುಗು ಸಿನಿಮಾ ಮೂಲಕ ಸಿನಿಮಾ ಜರ್ನಿ ಶುರು ಮಾಡಿದ್ದು. 2022ರಲ್ಲಿ ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದರು.
ಇದೀಗ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಅದುವೇ ಜೀ ಕನ್ನಡ ವಾಹಿನಿಯಲ್ಲಿ 27ರಿಂದ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಎಂದು.
ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಅಂಬಿಕಾ ಎಂಬ ತಾಯಿ ಪಾತ್ರದಲ್ಲಿ ನೀತಾ ಮಿಂಚಲಿದ್ದಾರೆ. ಸೀರಿಯಲ್ ಪ್ರೋಮೋಗಳು ಸಖತ್ ವೈರಲ್ ಆಗುತ್ತಿದೆ.
ತಾಯಿ ಮತ್ತು ಮಗಳ ಬಾಂಧವ್ಯದ ಕಥೆಯನ್ನು ಹೇಳುತ್ತದೆ 'ನಾ ನಿನ್ನ ಬಿಡಲಾರೆ' ಧಾರಾವಾಹಿ. ಮಗಳ ಪಾತ್ರದಲ್ಲಿ ಪುಟಾಣಿ ಮಹಿಳಾ ಮಿಂಚುತ್ತಿದ್ದಾರೆ.
ಧಾರಾವಾಹಿಯಲ್ಲಿ ಅಂಬಿತಾ ಪಾತ್ರ ಕೊಲೆಯಾಗಿರುತ್ತದೆ. ಆದರೂ ನನ್ನ ಮಗಳು ಪುಟ್ಟ ಹುಡುಗಿ ಎಂದು ಬಿಟ್ಟು ಹೋಗಿರುವುದಿಲ್ಲ. ತನ್ನ ಮಗಳಿಗೆ ತಾಯಿಯನ್ನು ಹುಡುಕುತ್ತಿರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.