- Home
- Entertainment
- TV Talk
- Vadhu Serial: ಅಪ್ಪನ ಕನಸು ನನಸಾಗಲಿಲ್ಲ… ವಧುವಿಗೆ ಮದುವೆ ಆಗದೇ ಎಂಡ್ ಆಗೋಯ್ತು ಡಿವೋರ್ಸ್ ಲಾಯರ್ ಕಥೆ!
Vadhu Serial: ಅಪ್ಪನ ಕನಸು ನನಸಾಗಲಿಲ್ಲ… ವಧುವಿಗೆ ಮದುವೆ ಆಗದೇ ಎಂಡ್ ಆಗೋಯ್ತು ಡಿವೋರ್ಸ್ ಲಾಯರ್ ಕಥೆ!
ಮಗಳ ಮದುವೆಯ ಕನಸು ಕಂಡು ವಧು ಅಂತ ಹೆಸರಿಟ್ಟ ಅಪ್ಪನ ಕಥೆಯಿಂದ ಆರಂಭವಾದ ವಧು ಸೀರಿಯಲ್ ವಧುವಿನ ಮದುವೆಯಾಗದೇ, ತರಾತುರಿಯಲ್ಲಿ ಮುಕ್ತಾಯಗೊಂಡಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ ವಧು (Vadhu serial). ಧಾರಾವಾಹಿ ಆರಂಭವಾದಾಗ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಯಾಗಿತ್ತು. ಯಾಕಂದ್ರೆ ಇದೊಂದು ಡಿವೋರ್ಸ್ ಲಾಯರ್ ಮದುವೆ ಕಥೆಯಾಗಿದ್ದು, ಆರಂಭದಲ್ಲಿ ಟಿ ಎನ್ ಸೀತಾರಾಮ್ ಅವರನ್ನು ಸಹ ತೋರಿಸಲಾಗಿತ್ತು.
ಪ್ರೋಮೋದಲ್ಲಿ ‘ಲಾಯರ್ ಸಿಎಸ್‌ಪಿ’ ಆಗಿ ಟಿ ಎನ್ ಸೀತಾರಾಮ್ (T N Seetharam) ಅವರನ್ನು ನೋಡಿ ವೀಕ್ಷಕರು ಖುಷಿ ಪಟ್ಟಿದ್ದರು, ಹಲವು ವರ್ಷಗಳ ನಂತರ ಟಿಎನ್ ಎಸ್ ಅವರನ್ನು ತೆರೆ ಮೇಲೆ ನೋಡಬಹುದು ಎಂದು ಅಂದುಕೊಂಡಿದ್ದರು. ಆದರೆ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಅವರು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಅಷ್ಟೇ ಅಲ್ಲ ಇದೀಗ ಸೀರಿಯಲ್ ಆರಂಭವಾಗಿ ಕೇವಲ 5 ತಿಂಗಳಲ್ಲೇ ಸೀರಿಯಲ್ ಗೆ ಅಂತ್ಯ ಹಾಡಲಾಗಿದೆ. ಆದರೆ ವಧು ಕೊನೆಗೂ ವಧು ಆಗಲೇ ಇಲ್ಲ. ಅಷ್ಟೇ ಅಲ್ಲ ಕಥೆಗೆ ಸರಿಯಾಗಿ ಎಂಡಿಂಗ್ ಕೊಡದೇ ತರಾತುರಿಯಲ್ಲಿ ಸೀರಿಯಲ್ ಕೊನೆಗೊಳಿಸಲಾಗಿದೆ. ಇದರಿಂದ ವೀಕ್ಷಕರ ನಿರೀಕ್ಷೆ ಸುಳ್ಳಾಗಿಸಿದೆ.
‘ವಧು’ ಧಾರಾವಾಹಿಯನ್ ಪ್ರೊಮೋ ನೆನಪಿದ್ಯಾ? ಸೀರಿಯಲ್ ಆರಂಭವಾಗಿದ್ದೆ ‘ಡಿವೋರ್ಸ್ ಲಾಯರ್ ಮದುವೆ ಕಥೆ’ ಎಂದು. ಆದರೆ, ಇದೀಗ ತರಾತುರಿಯಲ್ಲಿ ಸೀರಿಯಲ್ ಮುಗಿಸಿದ್ದಾರೆ. ವಧು ಮದುವೇನೂ ಆಗಿಲ್ಲ, ಅಪ್ಪನ ಕನಸು ಕೂಡ ಈಡೇರಿಲ್ಲ.ವಯಸ್ಸಾಗಿದ್ರೂ, ವಧು ಯಾಕೆ ಮದುವೆಯಾಗಿಲ್ಲ ಅನ್ನೋದಕ್ಕೆ ಕಾರಣ ಕೂಡ ಸಿಗಲಿಲ್ಲ.
ಎಲ್ಲರೂ ಅಂದುಕೊಂಡಂತೆ, ಪ್ರಿಯಾಂಕ ಮತ್ತು ಸಾರ್ಥಕ್ ಡಿವೋರ್ಸ್ ಆಗಿ ನಂತರ ವಧು ಮತ್ತು ಸಾರ್ಥಕ್ ಮದುವೆಯಾಗುತ್ತಾರೆ ಅಂತ. ಆದ್ರೆ ಅದು ಕೂಡ ಆಗಿಲ್ಲ. ಪ್ರಿಯಾಂಕ ಕೋಪ, ದ್ವೇಷ, ಇಲ್ಲಿವರೆಗೆ ಕ್ಯಾರಿ ಮಾಡಿಕೊಂಡು ಬಂದಿದ್ದ ಅಟಿಟ್ಯೂಡ್ ಎಲ್ಲವನ್ನೂ ನಿಮಿಷದಲ್ಲಿ ಮುಗಿಸಿದ್ದಾರೆ. ಆ ಮೂಲಕ ವೀಕ್ಷಕರ ಆಸೆಯೂ ಈಡೇರಲಿಲ್ಲ.
ವಧು ಸೀರಿಯಲ್ ನಿಧಾನವಾಗಿ ಸಾಗುತ್ತಿದ್ದರೂ, ವೀಕ್ಷಕರು ಈ ಕಥೆಯನ್ನು ಸಾರ್ಥಕ್ ಮತ್ತು ವಧು ಜೋಡಿಯನ್ನು ಇಷ್ಟಪಟ್ಟಿದ್ದರು. ಕೊನೆ ಪಕ್ಷ ವಧುವಿಗೆ ಸಾರ್ಥಕ್ ಜೊತೆ ಅಲ್ಲದೇ ಇದ್ದರೂ, ಯಾರ ಜೊತೆಯಲ್ಲಾದರು ಮದುವೆ ಮಾಡಿಸಿ ಸೀರಿಯಲ್ ಕೊನೆಗೊಳಿಸುತ್ತಿದ್ದರೆ, ಸೀರಿಯಲ್ ಟೈಟಲ್ ಗೊಂದು ಅರ್ಥ ಬರುತ್ತಿತ್ತು. ಆದರೆ ಅದ್ಯಾವುದು ಆಗದೇ ಆತುರಾತುರದಲ್ಲಿ ಸೀರಿಯಲ್ ಮುಗಿಸಿದ್ದು ಯಾಕೆ ಅನ್ನೋದು ಮಾತ್ರ ತಿಳಿದು ಬಂದಿಲ್ಲ.
ಈ ಧಾರಾವಾಹಿಯಲ್ಲಿ ದುರ್ಗಶ್ರೀ, ಅಭಿಷೇಕ್ ಶ್ರೀಕಾಂತ್, ವಿನಯ ಪ್ರಸಾದ್ (Vinaya Prasad), ಸೋನಿ ಮುಲೇವಾ, ಸುಧಾ ಬೆಳವಾಡಿ ಸೇರಿ ದೊಡ್ಡ ನಟ-ನಟಿಯರೇ ಬಳಗವೇ ಇತ್ತು ಈ ಧಾರಾವಾಹಿಯಲ್ಲಿ. ಆದರೆ ಕಥೆ ಪೂರ್ತಿ ಮಾಡದೇ ಕೇವಲ 99 ಸಂಚಿಕೆಗೆ ಸೀರಿಯಲ್ ಮುಗಿಸಿದ್ದು, ವೀಕ್ಷಕರಿಗೆ ಬೇಸರ ತಂದಿದೆ.