ಶ್ರೀಲಂಕಾದಲ್ಲಿನ ಲಕ್ಷ್ಮೀ ನಿವಾಸ ತಂಡದ ಮೋಜು ಮಸ್ತಿಯ ಫೋಟೋಗಳು
ಲಕ್ಷ್ಮೀ ನಿವಾಸ ಧಾರಾವಾಹಿ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ. ಸಿದ್ದೇಗೌಡ-ಭಾವನಾ ಪ್ರೀತಿ, ಜಯಂತ್-ಜಾಹ್ನವಿ ಮತ್ತೆ ಒಂದಾಗುವ ಪ್ರಯತ್ನ, ಮತ್ತು ಧಾರಾವಾಹಿಯಲ್ಲಿ ರೋಚಕ ತಿರುವುಗಳು ವೀಕ್ಷಕರಿಗೆ ಕುತೂಹಲ ಮೂಡಿಸಿವೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿ ಚಿತ್ರೀಕರಣ ಶ್ರೀಲಂಕಾದಲ್ಲಿ ನಡೆಯುತ್ತಿದೆ. ಸಿದ್ದೇಗೌಡರು- ಭಾವನಾ ಮತ್ತು ಜಯಂತ್-ಜಾಹ್ನವಿ ಜೋಡಿಯ ಚಿತ್ರೀಕರಣ ಮಾತ್ರ ಶ್ರೀಲಂಕಾದ ಸುಂದರ ಸ್ಥಳಗಳಲ್ಲಿ ನಡೆಯುತ್ತಿದೆ.
ಸಿದ್ದೇಗೌಡರು ಮತ್ತು ಭಾವನಾ ನಡುವೆ ಪ್ರೀತಿಯ ಹೂ ಅರಳಿದೆ. ಸಿದ್ದೇಗೌಡರು ತಮ್ಮ ಪ್ರೀತಿಯನ್ನು ಜೋರಾಗಿ ಭಾವನಾ ಮುಂದೆ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ ಜಯಂತ್ ಮತ್ತೆ ಜಾಹ್ನವಿ ಪ್ರೀತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.
ಶೂಟಿಂಗ್ ಜೊತೆಯಲ್ಲಿ ಧಾರಾವಾಹಿ ತಂಡದವರು ಶ್ರೀಲಂಕಾ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದರು. ಶೂಟಿಂಗ್ ಸಿಬ್ಬಂದಿಯೂ ಶ್ರೀಲಂಕಾದಲ್ಲಿ ಕಳೆದ ಸುಂದರ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸಿದ್ದೇಗೌಡ ಪಾತ್ರದಲ್ಲಿ ನಟಿಸುತ್ತಿರುವ ನಟ ಧನಂಜಯ್ ಇನ್‌ಸ್ಟಾಗ್ರಾಂನಲ್ಲಿ ಶ್ರೀಲಂಕಾ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದ್ಭುತ ಅನುಭವ, ಇದು ಅವಿಸ್ಮರಣೀಯ ಕ್ಷಣಗಳು. ಶ್ರೀಲಂಕಾ ಪ್ರಯಾಣದ ಪ್ರತಿ ಕ್ಷಣವನ್ನು ಆನಂದಿಸಿದ್ದೇವೆ. ಈ ಸುಂದರ ನೆನಪುಗಳನ್ನು ನೀಡಿದ ಜೀ ಕನ್ನಡಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಅಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಲ್ಲಿಯ ಸ್ಥಳೀಯ ಕಲಾವಿದರೊಂದಿಗೆ ಸೇರಿ ಭಾವನಾ ಮತ್ತು ಜಾಹ್ನವಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮತ್ತೊಂದೆಡೆ ಧಾರಾವಾಹಿ ರೋಚಕ ತಿರುವು ಪಡೆದುಕೊಂಡಿದೆ. ಸಿದ್ದೇಗೌಡರು ಮಾಡಿದ್ದ ಅಪಘಾತವನ್ನು ವೆಂಕಿ ತಲೆಗೆ ಕಟ್ಟಲು ಎಲ್ಲಾ ಸಿದ್ಧತೆಗಳು ನಡೆದಿವೆ. ಭಾವನಾ ಮತ್ತು ಸಿದ್ದೇಗೌಡರು ಶ್ರೀಲಂಕಾದಿಂದ ಬರೋವಷ್ಟರಲ್ಲಿ ಕೇಸ್ ಮುಚ್ಚಿ ಹಾಕಲು ಜವರೇಗೌಡ ಮತ್ತು ಮರೀಗೌಡ ಪ್ಲಾನ್ ಮಾಡಿಕೊಂಡಿದ್ದಾರೆ.
ಇತ್ತ ಜಯಂತ್ ಮೇಲೆ ಮುನಿಸಿಕೊಂಡಿರುವ ಚಿನ್ನುಮರಿ ಮತ್ತೆ ಮೊದಲಿನಂತೆ ಆಗ್ತಾಳಾ ಅನ್ನೋದರ ಬಗ್ಗೆ ಕುತೂಹಲ ಮೂಡಿಸಿದೆ. ಇದುವರೆಗೆ ತನಗೆ ಗರ್ಭಪಾತವಾಗಿರುವ ವಿಷಯವನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಂಡಿಲ್ಲ.