- Home
- Entertainment
- TV Talk
- Champa Shetty: ಅಣ್ಣಯ್ಯ ಸೀರಿಯಲ್ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ಉದಯ ವಾರ್ತೆಗಳು ನಿರೂಪಕಿ
Champa Shetty: ಅಣ್ಣಯ್ಯ ಸೀರಿಯಲ್ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಮಾಡಿದ ಉದಯ ವಾರ್ತೆಗಳು ನಿರೂಪಕಿ
ಅಣ್ಣಯ್ಯ ಧಾರಾವಾಹಿಯ ಸೌಭಾಗ್ಯ ಪಾತ್ರಕ್ಕೆ ಉದಯ ವಾರ್ತೆಗಳು ನಿರೂಪಕಿಯಾಗಿ ಜನಪ್ರಿಯತೆ ಪಡೆದಿದ್ದ ನಟಿ, ಕಂಠದಾನ ಕಲಾವಿದೆ ಚಂಪಾ ಶೆಟ್ಟಿ ಆಯ್ಕೆಯಾಗಿದ್ದಾರೆ.

ನೀವು ಉದಯ ವಾರ್ತೆಗಳನ್ನು ಕೇಳುತ್ತಿದ್ದ ಜನರಾಗಿದ್ರೆ ಇವರ ಮುಖ ನಿಮಗೆ ಖಂಡಿತವಾಗಿಯೂ ನೆನಪಿರುತ್ತೆ. ಇವರು ಯಾರು ಅನ್ನೋದು ಗೊತ್ತಾಯ್ತಾ? ಇವರು ನಿರೂಪಕಿ ಚಂಪಾ ಶೆಟ್ಟಿ (Champa Shetty) . ಉದಯ ವಾರ್ತೆಗಳಿಗೆ ಅಂದು ಧನಿಯಾಗಿದ್ದವರು ಇವರೇ.
ಉದಯ ವಾರ್ತೆಗಳು… ಓದುತ್ತಿರುವವರು ಚಂಪಾ ಶೆಟ್ಟಿ ಎನ್ನುತ್ತಾ, ವಾರ್ತೆಗಳನ್ನು (Udaya news anchor) ವೀಕ್ಷಕರ ಮನ ಮುಟ್ಟುವಂತೆ ತಲುಪಿಸುತ್ತಿದ್ದ ನಿರೂಪಕಿ, ಕಂಠದಾನ ಕಲಾವಿದೆ, ನಿರ್ದೇಶಕಿ, ನಟಿ ಚಂಪಾ ಶೆಟ್ಟಿ.
ಚಂಪಾ ಶೆಟ್ಟಿ ಬಹುಮುಖ ಪ್ರತಿಭೆ. ಇವರು ರಂಗಭೂಮಿ ಕಲಾವಿದರಾಗಿದ್ದು, ಹಲವಾರು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಇವರು ಕಾವೇರಿ, ನಾಕುತಂತಿ (Naaku Tanti), ಕುಂತಿ, ಪರಮ ಪಾದ, ಮುಕ್ತ ಮುಕ್ತ ಧಾರಾವಾಹಿಗಳಲ್ಲಿ ನಟಿಸಿದ್ದರು.
ಇದೀಗ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಅಣ್ಣಯ್ಯ ಧಾರಾವಾಹಿಯಲ್ಲಿ (Annayya Serial) ಪಾರ್ವತಿಯ ಅಮ್ಮ, ವೀರಭದ್ರನ ಮೊದಲ ಪತ್ನಿ ಸೌಭಾಗ್ಯ ಪಾತ್ರದಲ್ಲಿ ಬದಲಿ ಪಾತ್ರಧಾರಿಯಾಗಿ ಚಂಪಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಚಂಪಾ ಅವರ ಪ್ರೊಮೋ ಪ್ರಸಾರವಾಗಿದ್ದು, ಅಭಿಮಾನಿಗಳು ಇವರನ್ನು ಹಲವು ವರ್ಷಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ನೋಡಿ, ಸಂತಸ ವ್ಯಕ್ತ ಪಡಿಸಿದ್ದಾರೆ. ಒಬ್ಬ ಅದ್ಭುತ ಕಲಾವಿದೆಯನ್ನು ಮತ್ತೆ ಕಿರುತೆರೆಗೆ ಬರಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ.
ಅಂದ ಹಾಗೇ ರಂಗಭೂಮಿ ಕಲಾವಿದೆಯಾಗಿರುವ (theater Artist) ಚಂಪಾ ಶೆಟ್ಟಿ, ಹಯವದನ, ಮಂತೆಸ್ವಾಮಿ ಕಥಾ ಪ್ರಸಂಗ, ಸಿರಿ ಪುರಂದರ, ಆಷಾಡದ ಒಂದು ದಿನ ಎನ್ನುವ ಜನಪ್ರಿಯ ನಾಟಕಗಳಲ್ಲಿ ನಟಿಸಿದ್ದರು. ಅಲ್ಲದೆ ಇವರು ಕಂಠದಾನ ಕಲಾವಿದೆಯೂ ಆಗಿದ್ದು, ಹಲವು ಕಲಾವಿದೆಯರಿಗೆ ಕಂಠದಾನ ಮಾಡಿದ್ದಾರೆ.
ಇನ್ನು ಬೆಳಕಿನೆಡೆ ಮತ್ತು ಹರಿಕಥಾ ಪ್ರಸಂಗ ಸಿನಿಮಾಗಳಲ್ಲಿ ನಟಿಸಿರುವ ಚಂಪಾ ಶೆಟ್ಟಿ, ಅಮ್ಮಚ್ಚಿ ಎಂಬ ನೆನಪು, ಕೋಳಿ ಯೆಸ್ರು(Koli Yesru) ಎನ್ನುವ ಸಿನಿಮಾಗಳ ನಿರ್ದೇಶನ ಕೂಡ ಮಾಡಿದ್ದಾರೆ. ಅಲ್ಲದೇ ಕೋಳಿ ಯೆಸ್ರು ಸಿನಿಮಾ ಅಜಂತಾ ಎಲ್ಲೋರಾ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಪ್ರಶಸ್ತಿ, ಬೆಂಗಳೂರು ಅಂತಾರಾಷ್ಟ್ರೀಯ ಫಿಲಂ ಪ್ರಶಸ್ತಿ, ಒಟ್ಟಾವ ಇಂಡಿಯಾ ಸಿನಿಮಾ ಪ್ರಶಸ್ತಿಗಳನ್ನು ಸಹ ಪಡೆದಿದೆ.