- Home
- Entertainment
- TV Talk
- ಕಲೆ ಇಲ್ಲರಿಗೂ ಇರುತ್ತೆ ನಸೀಬ್ ಕೆಲವರಿಗೆ ಮಾತ್ರ; ಗಿಚ್ಚಿ ಗಿಲಿಗಿಲಿ ಮಹಿತಾ ಬಗ್ಗೆ ತಾಯಿ ತನುಜಾ ಮಾತು!
ಕಲೆ ಇಲ್ಲರಿಗೂ ಇರುತ್ತೆ ನಸೀಬ್ ಕೆಲವರಿಗೆ ಮಾತ್ರ; ಗಿಚ್ಚಿ ಗಿಲಿಗಿಲಿ ಮಹಿತಾ ಬಗ್ಗೆ ತಾಯಿ ತನುಜಾ ಮಾತು!
ದಿನದಿಂದ ದಿನಕ್ಕೆ ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿರುವ ಪುಟ್ಟ ಹುಡುಗಿ ಮಹಿತಾ. ಮಗಳ ಯಸಸ್ಸಿಗೆ ತಾಯಿ ಕೊಡುಗೆ ಎಷ್ಟಿದೆ?

ಪತ್ರಿಕೋದ್ಯಮ ಲೋಕದಲ್ಲಿ ಅತಿ ಹೆಚ್ಚು ಹೆಸರು ಮಾಡಿದ ತನುಜಾ ಮತ್ತು ಪುತ್ರಿ ಮಹಿತಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.
ಗಾಯಕಿ ಹಾಗೂ ಕಲಾವಿದೆಯಾಗಿ ಗುರುತಿಸಿಕೊಂಡಿರುವ ತನುಜಾ ತಮ್ಮ ಪುತ್ರಿ ಮಹಿತಾ ಜೊತೆ ಸ್ಪರ್ಧಿಸಿ ರಿಯಾಲಿ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು.
ರಾಜಾ ರಾಣಿ ಹಿಟ್ ಆಗುತ್ತಿದ್ದಂತೆ ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಯಾಗಿ ಮಹಿತಾ ಆಯ್ಕೆ ಆದರು. ಅದ್ಭುತವಾಗಿ ನಟಿಸಿ ತಮಾಷೆ ಮಾಡುವ ಈ ಪುಟ್ಟನ ಯಶಸ್ಸಿಗೆ ತಾಯಿನೇ ಕಾರಣ.
'ಎಲ್ಲರಿಗೂ ಕಲೆ ಇರಬಹುದು ಆದರೆ ಕೆಲವರಿಗೆ ಮಾತ್ರ ನಸೀಬ್ ಇರುತ್ತೆ. ಜೀವನ ಒಂದು ಸಮಯದಲ್ಲಿ ನನಗೆ ಅರ್ಥ ಅಗುತ್ತೆ ನನಗೆ ನಸೀಬ್ ಇಲ್ಲ ಅಂತ ಅದೇ ಸಮಯಕ್ಕೆ ನಾನು ಪ್ರೆಗ್ನೆಂಟ್ ಎಂದು ತಿಳಿಯುತ್ತದೆ.' ಎಂದು ಮಹಿಳಾ ದಿನಚಾರಣೆ ವಿಶೇಷ ಎಪಿಸೋಡ್‌ನಲ್ಲಿ ತನುಜಾ ಮಾತನಾಡಿದ್ದಾರೆ.
' ನನ್ನ ವೃತ್ತಿ ಬದುಕಿನಿಂದ ಬ್ರೇಕ್ ತೆಗೆದುಕೊಂಡು ನನ್ನ ಮಗುವಿನ ಜೀವನ ನಿಲ್ಲಿಸಲೇ ಬೇಕು ಎಂದು ನಿಂತೆ. ಎರಡು ತಿಂಗಳ ಗರ್ಭಿಣಿ ಇದ್ದಾಗಿನಿಂದ ನನ್ನ ಸಂಪೂರ್ಣ ಸಮಯವನ್ನು ಅಕೆಗೆ ಕೊಟ್ಟೆ.' ಎಂದು ತನುಜಾ ಹೇಳಿದ್ದಾರೆ.
ಇಷ್ಟು ವರ್ಷ ನಾನು ಏನು ಕಲಿತಿರುವ ಅದನ್ನು ಟ್ಯಾಲೆಂಟ್ ಆಗಿ ನನ್ನ ಮಗಳ ಮೇಲೆ ಹಾಕಿದೆ. ಅಲ್ಲಿಂದ ನನ್ನ ಮಗಳು ಇಲ್ಲಿವರೆಗೂ ಬಂದು ನಿಂತಿದ್ದಾಳೆ. ಮಹಿತಾಯಿಂದ ನಾನು ಮತ್ತೆ ಮತ್ತೆ ವೇದಿಕೆ ಮೇಲೆ ಬರುತ್ತಿರುವುದಕ್ಕೆ ಖುಷಿಯಾಗುತ್ತಿದೆ.' ಎಂದಿದ್ದಾರೆ ತನುಜಾ.