- Home
- Entertainment
- TV Talk
- Bigg Boss ಮನೆಯೊಳಗೆ ಮಲ್ಲಮ್ಮ ಮತ್ತೊಮ್ಮೆ ಎಂಟ್ರಿ? ಏನಿದು ಸುದ್ದಿ? ಖುದ್ದು ಮಲ್ಲಮ್ಮ ಹೇಳಿದ್ದೇನು?
Bigg Boss ಮನೆಯೊಳಗೆ ಮಲ್ಲಮ್ಮ ಮತ್ತೊಮ್ಮೆ ಎಂಟ್ರಿ? ಏನಿದು ಸುದ್ದಿ? ಖುದ್ದು ಮಲ್ಲಮ್ಮ ಹೇಳಿದ್ದೇನು?
ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಮಲ್ಲಮ್ಮ ಅವರಿಗೆ ಸಖತ್ ಬೇಡಿಕೆ ಬಂದಿದೆ. ತಮ್ಮ ಎಲಿಮಿನೇಷನ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸಾಲ ತೀರಿಸಲು ಇನ್ನಷ್ಟು ದಿನ ಇರಬೇಕಿತ್ತು ಎಂದು ಮಲ್ಲಮ್ಮ ಕೂಡ ನೋವು ತೋಡಿಕೊಂಡಿದ್ದಾರೆ. ರೀ ಎಂಟ್ರಿ ಬಗ್ಗೆ ಮಲ್ಲಮ್ಮ ಹೇಳಿದ್ದೇನು?

ಮಲ್ಲನಿಗೆ ಡಿಮಾಂಡ್
Bigg Boss (ಬಿಗ್‌ಬಾಸ್) ಮನೆಯಿಂದ ಹೊರಕ್ಕೆ ಬಂದಿರುವ ಮಲ್ಲಮ್ಮ ಅವರಿಗೆ ಈಗ ಸಕತ್ ಡಿಮಾಂಡ್ ಇದೆ. ವಿವಿಧ ಮಾಧ್ಯಮಗಳು, ಯುಟ್ಯೂಬ್ ಚಾನೆಲ್‌ಗಳಲ್ಲಿ ಇವರದ್ದೇ ಹವಾ. ಬಿಗ್‌ಬಾಸ್‌ಗೆ ಹೋಗಿ ಬಂದರೂ ಕೆಲವರು ತೋರಿಸುವ ಅಹಂ ಮಲ್ಲಮ್ಮನವರಿಗೆ ಇಲ್ಲ. ಮೊದಲಿನಂತೆಯೇ ಅಷ್ಟೇ ಮುಗ್ಧತೆಯಿಂದ ಓಪನ್ ಆಗಿ ಮಾತನಾಡುತ್ತಿದ್ದಾರೆ ಮಲ್ಲಮ್ಮ.
ಅಭಿಮಾನಿಗಳ ಬೇಸರ
ಮಲ್ಲಮ್ಮ ಅವರು ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಜಗಳ ಮಾಡದೇ, ಎಲ್ಲರ ಅಮ್ಮ ಆಗಿದ್ದವರು. ಇಂಥವರಿಗೆ ಬಿಗ್‌ಬಾಸ್‌ನಲ್ಲಿ ಜಾಗ ಇಲ್ಲ. ಅಲ್ಲಿ ಏನಿದ್ದರೂ ಗಲಾಟೆ, ಗದ್ದಲ ಮಾಡುತ್ತಾ, ಲವ್ ಸೀನ್ ಕ್ರೀಯೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿ ಇರುವವರಿಗೆ ಮಾತ್ರ ಜಾಗ ಎಂದು ಹಲವರು ಇದಾಗಲೇ ಮಲ್ಲಮ್ಮನವರ ಎಲಿಮಿನೇಷನ್ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಒಳ್ಳೆಯ ಹೆಸರು ಮಾಡಿದವರು
ಅದೇನೇ ಇದ್ದರೂ ಬಿಗ್‌ಬಾಸ್‌ಗೆ ಹೋಗಿ ಒಳ್ಳೆಯ ಹೆಸರು ಮಾಡಿರುವ ಕೆಲವೇ ಕೆಲವು ಜನರಲ್ಲಿ ಮಲ್ಲಮ್ಮ ಅವರು ನಿಂತಿರುವುದೇ ಅವರ ಗೌರವಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.
ಮಲ್ಲಮ್ಮ ಅಸಮಾಧಾನ
ತಾವು ಬೇಗನೇ ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದಿರುವ ಬಗ್ಗೆ ಖುದ್ದು ಮಲ್ಲಮ್ಮ ಅವರಿಗೂ ನೋವು ಇದೆ. ಇನ್ನು ಸ್ವಲ್ಪ ದಿನವಿದ್ದರೆ ನನ್ನ ಸಾಲವೆಲ್ಲಾ ತೀರುತ್ತಿತ್ತು. ಆದರೆ ಬೇಗನೇ ಬಂದುಬಿಟ್ಟೆ ಎಂದಿದ್ದಾರೆ.
ಮತ್ತೊಮ್ಮೆ ಬಿಗ್‌ಬಾಸ್‌ಗೆ
ಇದೀಗ ಮಲ್ಲಮ್ಮ ಪುನಃ ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಮಾತನಾಡಿದ್ದಾರೆ. ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಮತ್ತೊಮ್ಮೆ ಬಿಗ್‌ಬಾಸ್‌ಗೆ ಹೋಗುವ ಅವಕಾಶ ಸಿಕ್ಕರೆ ಹೋಗುತ್ತೀರಾ ಎಂದು ಪ್ರಶ್ನಿಸಿದಾಗ, ಒಹೊ ಈಗಲೇ ಹೋಗುತ್ತೇನೆ. ಅದಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಭಾರಿ ಫೇಮಸ್
ಒಟ್ಟಿನಲ್ಲಿ ಮಲ್ಲಮ್ಮನವರು ಬಿಗ್‌ಬಾಸ್ ಮೂಲಕ ಭಾರಿ ಫೇಮಸ್ ಆಗಿದ್ದಾರೆ. ಇದೇ ಖ್ಯಾತಿಯನ್ನು ನೆತ್ತಿಗೆ ಏರಿಸಿಕೊಳ್ಳದೇ ಸೀದಾ ಸಾದಾ ಜೀವನ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಆಸೆ. ಅದೇ ರೀತಿ, ಅವರಿಗೆ ಮತ್ತೊಮ್ಮೆ ಬಿಗ್‌ಬಾಸ್‌ನಲ್ಲಿ ಅವಕಾಶ ಸಿಗಲಿ ಎನ್ನುತ್ತಿದ್ದಾರೆ ಫ್ಯಾನ್ಸ್.