BBK9 ಏನ್ ಗುರು ಇದು! ಬಿಗ್ ಬಾಸ್ ಮನೆಗೆ ಮತ್ತೆ ಸೋನು ಗೌಡ ಎಂಟ್ರಿ?
ಓಟಿಟಿ ನಂತರ ಮತ್ತೊಮ್ಮೆ ಬಿಬಿ ಮನೆ ಪ್ರವೇಶಿಸಲು ಅವಕಾಶ ಪಡೆದುಕೊಂಡ ಸೋನು ಗೌಡ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದು ನಿಜವೇ?

ಸೋಷಿಯಲ್ ಮೀಡಿಯಾ ಚೆಲುವೆ, ಟ್ರೋಲ್ ಕ್ವೀನ್ ಸೋನು ಶ್ರೀನಿವಾಸ್ ಗೌಡ ಓಟಿಟಿ ಬಿಗ್ ಬಾಸ್ ಸೀಸನ್ 1ರಲ್ಲಿ ಸ್ಪರ್ಧಿಸಿದ್ದರು. ಫಿನಾಲೆ ವಾರ ತಲುಪಿ ಫಿನಾಲೆ ರೌಂಡ್‌ನಲ್ಲಿ ಎಲಿಮಿನೇಟ್ ಆಗಿದ್ದರು.
ಇದೀಗ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರಲ್ಲಿ ಸೋನು ಗೌಡ ಸ್ಪರ್ಧಿಸಲಿದ್ದಾರೆ. ವೈಲ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಸೋನು ಟಿವಿ ಬಿಗ್ ಬಾಸ್ ಪ್ರವೇಶಿಸುವುದರ ಬಗ್ಗೆ ನೆಟ್ಟಿಗರಿಗೆ ಆಕ್ಷೇಪವಿದೆ. ಓಟಿಟಿಯಲ್ಲಿ ಗೆದ್ದವರಿಗೆ ಮಾತ್ರ ಬಿಬಿ 9 ಎಂಟ್ರಿ ಅಂದಿದ್ದರು ಯಾಕೆ ಈ ರೀತಿ ಮೋಸ ಮಾಡಬೇಕು? ಹೊಸ ಪ್ರತಿಭೆಗಳನ್ನು ಕರೆತನ್ನಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಸೋನುನೇ ಯಾಕೆ? ಎಂದು ಹಲವರು ಪ್ರಶ್ನೆ ಮಾಡಿದ್ದರು. ಈ ವಿಚಾರವನ್ನು ಎರಡು ರೀತಿ ನೋಡಬಹುದು. ಒಂದು ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಿರುವ ಮುಖ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಮತ್ತೊಂದು ಸೋನು ಇದ್ರೆ ರಾಕೇಶ್‌ಗೆ ಜೋಡಿ ಆಗುತ್ತಾರೆಂದು.
ಸೋನು ಓಟಿಟಿ ಪ್ರವೇಶ ಮಾಡಿದ್ದಾಗ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇಂಥವರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹರಡುತ್ತದೆ ನೀವು ದಯವಿಟ್ಟು ಈ ರೀತಿ ಸ್ಪರ್ಧಿಗಳನ್ನು ಕರೆಸಬೇಡಿ ಎನ್ನುತ್ತಿದ್ದರು.
ಅಲ್ಲದೆ ಸೋನು ಸ್ಮೋಕಿಂಗ್ ರೂಮ್ ಬಳಸುವುದು, ಮಾತನಾಡುವ ಶೈಲಿ ಹಾಗೂ ವರ್ತಿಸುತ್ತಿದ್ದ ರೀತಿಯನ್ನು ನೆಟ್ಟಿಗರು ಗಮನಿಸಿ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡರು.
ಈಗ ಮತ್ತೆ ಸೋನು ಗೌಡ ಎಂಟ್ರಿ ಕೊಡುವುದು ಎಷ್ಟ ಮಟ್ಟಕ್ಕೆ ಸರಿ ಅನ್ನೋದು ಚರ್ಚೆ ನಡೆಯುತ್ತಿದೆ. ಸಿಂಗಲ್ ಆಗಿದ್ದೆ ಅಂತ ರಾಕೇಶ್ ಅಮೂಲ್ಯಗೆ ಕ್ಲೋಸ್ ಆಗಿದ್ದಾನೆ, ಸೋನು ಎಂಟ್ರಿ ಕೊಟ್ಟರೆ ಯಾರ ಬಲೆಯಲ್ಲಿ ಬೀಳುತ್ತಾನೆ?