MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸೋನಾಲಿ ಫೋಗಟ್‌ to ಸಿದ್ಧಾರ್ಥ್ ಶುಕ್ಲಾ: ಚಿಕ್ಕ ವಯಸ್ಸಿನಲ್ಲೇ ಜಗತ್ತಿಗೆ ವಿದಾಯ ಹೇಳಿದ ಬಿಗ್‌ಬಾಸ್‌ ಸ್ಪರ್ಧಿಗಳು

ಸೋನಾಲಿ ಫೋಗಟ್‌ to ಸಿದ್ಧಾರ್ಥ್ ಶುಕ್ಲಾ: ಚಿಕ್ಕ ವಯಸ್ಸಿನಲ್ಲೇ ಜಗತ್ತಿಗೆ ವಿದಾಯ ಹೇಳಿದ ಬಿಗ್‌ಬಾಸ್‌ ಸ್ಪರ್ಧಿಗಳು

ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್ ಬಾಸ್' 16  (Big Boss) ನೇ ಸೀಸನ್ ಶೀಘ್ರದಲ್ಲೇ ಪ್ರಸಾರವಾಗಲಿದೆ. ಈ ಹಿಂದೆ, 'ಬಿಗ್ ಬಾಸ್' 14 ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಸಾಮಾಜಿಕ ಮಾಧ್ಯಮ ತಾರೆ, ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ಅವರ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ. ಆದರೆ ಸೋನಾಲಿಗಿಂತ ಮುಂಚೆಯೇ ಈ ರಿಯಾಲಿಟಿ ಶೋನ 6 ಸ್ಪರ್ಧಿಗಳು ಅಕಾಲಿಕವಾಗಿ ಜಗತ್ತಿಗೆ ವಿದಾಯ ಹೇಳಿದ್ದಾರೆ. 

2 Min read
Author : Suvarna News
Published : Aug 27 2022, 05:27 PM IST
Share this Photo Gallery
  • FB
  • TW
  • Linkdin
  • Whatsapp
18

ಸೋನಾಲಿ ಫೋಗಟ್ 23 ಆಗಸ್ಟ್ 2022 ರಂದು ಗೋವಾದಲ್ಲಿ ನಿಧನರಾದರು.   41 ವರ್ಷದ ಸೋನಾಲಿ  ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ  ಸೋನಾಲಿಯ ಪಿಎ ಸುಧೀರ್ ಸಂಗ್ವಾನ್ ಮತ್ತು ಆತನ ಸ್ನೇಹಿತ ಸುಖ್ವಿಂದರ್ ಆಕೆಗೆ ಬಲವಂತವಾಗಿ ಡ್ರಗ್ಸ್ ನೀಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ . ಪೊಲೀಸರು ಕೊಲೆ ತನಿಖೆ ನಡೆಸುತ್ತಿದ್ದಾರೆ.


 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

'ಬಾಲಿಕಾ ವಧು'ದಂತಹ ಧಾರಾವಾಹಿಗಳ ಮೂಲಕ ಛಾಪು ಮೂಡಿಸಿದ್ದ ಸಿದ್ಧಾರ್ಥ್ ಶುಕ್ಲಾ 'ಬಿಗ್ ಬಾಸ್' 13ನೇ ಸೀಸನ್ ನಲ್ಲಿ ಭಾಗವಹಿಸಿದ್ದಲ್ಲದೆ ಅದರ ವಿಜೇತರೂ ಆದರು. ಅವರು 2 ಸೆಪ್ಟೆಂಬರ್ 2021 ರಂದು ಹೃದಯ ಸ್ತಂಭನದಿಂದ ನಿಧನರಾದಾಗ ಅವರಿಗೆ ಕೇವಲ 40 ವರ್ಷ. ಅವರ ಹಠಾತ್ ನಿಧನದ ಸುದ್ದಿ ಜನರನ್ನು ಬೆಚ್ಚಿಬೀಳಿಸಿತ್ತು.

38

'ಬಿಗ್ ಬಾಸ್' 10ನೇ ಸೀಸನ್ ನಲ್ಲಿ ಸ್ವಾಮಿ ಓಂ ಸ್ಪರ್ಧಿಯಾಗಿ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದ್ದರು. ಅವರು 3 ಫೆಬ್ರವರಿ 2021 ರಂದು ಇಹಲೋಕ ತ್ಯಜಿಸಿದರು. ಆ ಸಮಯದಲ್ಲಿ ಅವರು 63 ವರ್ಷ ವಯಸ್ಸಿನವರಾಗಿದ್ದರು ಮತ್ತು ಅವರ ಮರಣದ ಸ್ವಲ್ಪ ಮೊದಲು ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು.


'
 

48

ಬಾಲಿಕಾ ವಧು' ಖ್ಯಾತಿಯ ಪ್ರತ್ಯೂಷಾ ಬ್ಯಾನರ್ಜಿ 1 ಏಪ್ರಿಲ್ 2016 ರಂದು ನಿಧನರಾದಾಗ, ಎಲ್ಲರೂ ಆಘಾತಕ್ಕೊಳಗಾಗಿದ್ದರು, ಏಕೆಂದರೆ ಆ ಸಮಯದಲ್ಲಿ ಅವರಿಗೆ ಕೇವಲ 24 ವರ್ಷ. 'ಬಿಗ್ ಬಾಸ್' 7ನೇ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಪ್ರತ್ಯೂಷಾ ಆತ್ಮಹತ್ಯೆ ಮಾಡಿಕೊಂಡರು. ಪ್ರತ್ಯೂಷಾಳ ಸ್ನೇಹಿತೆ ಕಾಮ್ಯಾ ಪಂಜಾಬಿ ತನ್ನ ಗೆಳೆಯ ರಾಹುಲ್ ರಾಜ್ ಸಿಂಗ್‌ನಿಂದ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಹಲವಾರು ವರದಿಗಳಲ್ಲಿ ಹೇಳಿವೆ.


 

58

ಜೇಡ್ ಗೂಡಿ 'ಬಿಗ್ ಬಾಸ್' ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಂಡ ಇಂಗ್ಲಿಷ್ ಟಿವಿ ಪರ್ಸನ್‌ 2009ರಲ್ಲಿ ಆಕೆ ತೀರಿಕೊಂಡಾಗ ಆಕೆಗೆ ಕೇವಲ 27 ವರ್ಷ. ಜೇಡ್ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಾರಣ 'ಬಿಗ್ ಬಾಸ್' ಎಂಟ್ರಿ ಪಡೆದ 5 ದಿನಗಳ ನಂತರ ಕಾರ್ಯಕ್ರಮವನ್ನು ತೊರೆಯಬೇಕಾಯಿತು.

68

'ಬಿಗ್ ಬಾಸ್' ಕನ್ನಡ ಆವೃತ್ತಿಯ ಮೂರನೇ ಸೀಸನ್‌ನಲ್ಲಿ ಕಾಣಿಸಿಕೊಂಡ ನಟಿ ಜಯಶ್ರೀ ರಾಮಯ್ಯ ಅವರು 25 ಜನವರಿ 2021 ರಂದು ನಿಧನರಾದರು. ಬೆಂಗಳೂರು ಹೊರವಲಯದಲ್ಲಿರುವ ಸಂಧ್ಯಾ ಕಿರಣ್ ವೃದ್ಧಾಶ್ರಮ ಮತ್ತು ಪುನರ್ವಸತಿ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಸಮಯದಲ್ಲಿ ಆಕೆಗೆ ಕೇವಲ 30 ವರ್ಷ.

78

'ಬಿಗ್ ಬಾಸ್' ಮಲಯಾಳಂ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಗಾಯಕ ಸೋಮದಾಸ್ ಚೈತನೂರ್ 31 ಜನವರಿ 2021 ರಂದು ನಿಧನರಾದರು. ಆಗ ಅವರಿಗೆ 42 ವರ್ಷ. ಕೇರಳದ ಕೊಲ್ಲಂ ಜಿಲ್ಲೆಯ ಪಾರ್ಪಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೋಮದಾಸ್ ಹೃದಯಾಘಾತಕ್ಕೆ ಒಳಗಾದರು.

88

ಮಾಜಿ ಸ್ಪರ್ಧಿಗಳಲ್ಲದೆ, 'ಬಿಗ್ ಬಾಸ್ 14' ರ ಟ್ಯಾಲೆಂಟ್ ಮ್ಯಾನೇಜರ್ ಆಗಿದ್ದ ಪಿಸ್ತಾ ಧಕಡ್ ಜಗತ್ತಿಗೆ ವಿದಾಯ ಹೇಳಿದ್ದಾರೆ. ಸಾಯುವ ಸಮಯದಲ್ಲಿ ಆಕೆಗೆ ಕೇವಲ 24 ವರ್ಷ. 15 ಜನವರಿ 2021 ರಂದು, ಅವರು ಸಲ್ಮಾನ್ ಖಾನ್ ಅವರೊಂದಿಗೆ 'ವೀಕೆಂಡ್ ಕಾ ವಾರ್' ವಿಶೇಷ ಸಂಚಿಕೆಯನ್ನು ಚಿತ್ರೀಕರಿಸಿ, ಮನೆಗೆ ಮರಳಿದ್ದರು. ಆದರೆ ದಾರಿಯಲ್ಲಿ ಆಕೆಯ ಸ್ಕೂಟಿ ಹೊಂಡದಲ್ಲಿ ಬಿದ್ದು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಅಪಘಾತ ಅವರ ಪ್ರಾಣವನ್ನೇ ತೆಗೆದುಕೊಂಡಿತು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಸಲ್ಮಾನ್ ಖಾನ್
 
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Karna Serial- ಈ ನಿತ್ಯಾಗೆ ಸ್ವಲ್ಪವೂ ಬುದ್ಧಿ ಇಲ್ಲ: ನಟಿ ನಮ್ರತಾ ಗೌಡ ಮೇಲೆ ವೀಕ್ಷಕರು ಗರಂ
Recommended image2
Ramayana: ಕಣ್ಣಲ್ಲಿ ಅಹಂಕಾರ, ಮಾತಲ್ಲಿ ಗಾಂಭೀರ್ಯ; ರಾಮಾಯಣದಲ್ಲಿ ರಣಬೀರ್ ಕಪೂರ್‌ಗಿಂತ ಯಶ್‌ ಅಬ್ಬರವೇ ಜೋರು!
Recommended image3
'ಪ್ರೇಮದ ಊರಲಿ' ರಿಲೀಸ್ ಬೆನ್ನಲ್ಲೇ ಟ್ರೆಂಡಿಂಗ್ ಲಿಸ್ಟ್‌ಗೆ ಎಂಟ್ರಿ: ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ ಹಳೆಯ ಪ್ರೇಮಕಾವ್ಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved