- Home
- Entertainment
- TV Talk
- ಹುಡ್ಗೀರು 'ನನ್ನ ದೇಹ ನನ್ನ ಆಯ್ಕೆ' ಅಂದರೆ, ನೋಡುಗರು 'ಅವನ ಕಣ್ಣು ಅವನ ಆಯ್ಕೆ' ಅಂತಾರೆ! ಗಾಯಕಿ ಸುನೀತ ಹೇಳಿಕೆ ವೈರಲ್
ಹುಡ್ಗೀರು 'ನನ್ನ ದೇಹ ನನ್ನ ಆಯ್ಕೆ' ಅಂದರೆ, ನೋಡುಗರು 'ಅವನ ಕಣ್ಣು ಅವನ ಆಯ್ಕೆ' ಅಂತಾರೆ! ಗಾಯಕಿ ಸುನೀತ ಹೇಳಿಕೆ ವೈರಲ್
ಖ್ಯಾತ ಗಾಯಕಿ ಸುನೀತಾ ಸಂದರ್ಶನದಲ್ಲಿ ಮಹಿಳೆಯರ 'ನನ್ನ ದೇಹ ನನ್ನಿಷ್ಟ' ಎಂಬ ವಾದದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಾದರೆ ನೋಡುಗರು 'ಅವನ ಕಣ್ಣು ಅವನ ಆಯ್ಕೆ' ಎಂದೂ ಹೇಳಬಹುದಲ್ಲವೇ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಬಾಗಿದೆ.

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಸುನೀತಾ ಅವರು ತಮ್ಮ ಸುಮಧುರ ಧ್ವನಿಯಿಂದ ಮಾತ್ರವಲ್ಲದೆ, ತಮ್ಮ ನೇರ ನಡೆ-ನುಡಿಗಳಿಂದಲೂ ಹೆಸರುವಾಸಿಯಾದವರು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಹಿಳೆಯರ ವಸ್ತ್ರಧಾರಣೆ, ಸಿನಿಮಾದ ಸಾಮಾಜಿಕ ಜವಾಬ್ದಾರಿ ಮತ್ತು ಸಮಾನತೆಯ ಅರ್ಥದ ಬಗ್ಗೆ ಆಡಿರುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಸಿನಿಮಾಗಳಿಗೆ ಸಾಮಾಜಿಕ ಜವಾಬ್ದಾರಿ ಬೇಕು:
ಸಮಾಜದಲ್ಲಿ ನಡೆಯುವ ಘಟನೆಗಳನ್ನೇ ನಾವು ಸಿನಿಮಾದಲ್ಲಿ ತೋರಿಸುತ್ತಿದ್ದೇವೆ ಎಂದು ಸಿನಿಮಾ ತಯಾರಕರು ನೀಡುವ ಸಮರ್ಥನೆಯನ್ನು ಸುನೀತಾ ಕಟುವಾಗಿ ಟೀಕಿಸಿದ್ದಾರೆ. 'ಕಮರ್ಷಿಯಲ್ ಸಿನಿಮಾ ಇರಲಿ ಅಥವಾ ಯಾವುದೇ ಮಾದರಿಯ ಸಿನಿಮಾ ಇರಲಿ, ಸಮಾಜದ ಬಗ್ಗೆ ಅದಕ್ಕೊಂದು ಕನಿಷ್ಠ ಜವಾಬ್ದಾರಿ ಇರಲೇಬೇಕು. ಸಮಾಜ ಹಾಗಿದೆ ಅದಕ್ಕೆ ನಾವು ಸಿನಿಮಾ ಹೀಗೆ ತೆಗೆಯುತ್ತೇವೆ ಎನ್ನುವುದು ಸರಿಯಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಮೈ ಬಾಡಿ ಮೈ ರೈಟ್' ಎಂಬ ವಾದಕ್ಕೆ ಸುನೀತಾ ತರ್ಕ:
ಇತ್ತೀಚಿನ ದಿನಗಳಲ್ಲಿ 'ಮೈ ಬಾಡಿ ಮೈ ಚಾಯ್ಸ್' (My Body My Choice) ಅಥವಾ 'ನನ್ನ ದೇಹ ನನ್ನ ಹಕ್ಕು' ಎಂಬ ಘೋಷಣೆಗಳು ಜೋರಾಗಿ ಕೇಳಿಬರುತ್ತಿವೆ. ಇದರ ಬಗ್ಗೆ ವ್ಯಾವಹಾರಿಕವಾಗಿ ಮಾತನಾಡಿದ ಸುನೀತಾ, 'ಹುಡುಗಿಯರು ನನ್ನ ದೇಹ ನನ್ನಿಷ್ಟ ಎಂದು ತಮಗೆ ಇಷ್ಟಬಂದ ಬಟ್ಟೆ ಧರಿಸಿದಾಗ, ಎದುರಿಗಿರುವ ವ್ಯಕ್ತಿ 'ನನ್ನ ಕಣ್ಣು ನನ್ನಿಷ್ಟ' ಎಂದು ನೋಡಿದರೆ ಯಾರನ್ನು ತಪ್ಪು ಎನ್ನಲು ಸಾಧ್ಯ? ಯಾರ ಇಷ್ಟ ಅವರದ್ದು ಎಂದು ಸುಮ್ಮನಾಗಬೇಕಾಗುತ್ತದೆ' ಎಂದಿದ್ದಾರೆ.
ಬಟ್ಟೆಯ ಉದ್ದವನ್ನು ಹೆಚ್ಚಿಸಿಕೊಳ್ಳುವುದು ಅಥವಾ ಕಡಿಮೆ ಮಾಡಿಕೊಳ್ಳುವುದೇ ನಿಜವಾದ ಸ್ವಾತಂತ್ರ್ಯವಲ್ಲ ಎಂಬುದು ಅವರ ವಾದ. 'ನಮ್ಮ ಸುತ್ತಮುತ್ತಲಿನ ಪರಿಸರ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಗಮನಿಸುವುದು ಕೂಡ ಮುಖ್ಯ. ಕೇವಲ ಬಟ್ಟೆ ಅಥವಾ ಸಿಗರೇಟ್ ಸೇದುವುದು ಸಮಾನತೆಯಲ್ಲ (Equality). ಬದಲಾಗಿ, ಮನೆಯಲ್ಲಿ ಅಥವಾ ಸಮಾಜದಲ್ಲಿ ಒಬ್ಬ ಮಹಿಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ, ಪುರುಷರು ಅದಕ್ಕೆ ಎಷ್ಟು ಗೌರವ ನೀಡುತ್ತಾರೆ ಎಂಬ ಹಕ್ಕಿಗಾಗಿ ಮಹಿಳೆಯರು ಹೋರಾಡಬೇಕು' ಎಂದು ಹೇಳಿದ್ದಾರೆ.
ಜಾನ್ವಿ ಕಪೂರ್ ಪಾತ್ರದ ಬಗ್ಗೆ ಪರೋಕ್ಷ ಮಾತು:
ಸಂದರ್ಶನದ ವೇಳೆ 'ದೇವರ' ಸಿನಿಮಾದಲ್ಲಿನ ಜಾನ್ವಿ ಕಪೂರ್ ಪಾತ್ರದ ಚಿತ್ರಣದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, 'ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಯಾವುದೇ ವಿಷಯಕ್ಕೆ 'ಹೌದು' ಅಥವಾ 'ಇಲ್ಲ' ಎಂದು ಹೇಳುವ ಹಕ್ಕು ನಮಗಿದೆ. ಇದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಸಮಾಜದ ಹೆಣ್ಣುಮಕ್ಕಳಿಗೆ ಅನ್ವಯಿಸುತ್ತದೆ. ಜೀವನದಲ್ಲಿ ಎಲ್ಲೇ ಆದರೂ ಒಂದು ಗೆರೆ ಎಳೆಯಲು ಅಥವಾ ಫುಲ್ ಸ್ಟಾಪ್ ಇಡಲು ಯಾರದೂ ಬಲವಂತವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಗಾಯಕಿ ಸುನೀತಾ ಅವರ ಈ ವೈಚಾರಿಕ ಮಾತುಗಳು ಈಗ ಹೊಸ ಚರ್ಚೆಯನ್ನಂತೂ ಹುಟ್ಟುಹಾಕಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

