- Home
- Entertainment
- TV Talk
- ಅಮೆರಿಕ ಕನಸು ಹೊತ್ತಿದ್ದ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಗಾಳಿ, ಪತಿ ಧನಂಜಯ್ ಬಗ್ಗೆ ಇಲ್ಲಿದೆ ಮಾಹಿತಿ!
ಅಮೆರಿಕ ಕನಸು ಹೊತ್ತಿದ್ದ ಅಖಿಲಾ ಪಜಿಮಣ್ಣು ಸಂಸಾರದಲ್ಲಿ ಬಿರುಗಾಳಿ, ಪತಿ ಧನಂಜಯ್ ಬಗ್ಗೆ ಇಲ್ಲಿದೆ ಮಾಹಿತಿ!
ಗಾಯಕಿ (Singer) ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು (Akhila Pajimannu) ಮತ್ತು ಧನಂಜಯ್ ಶರ್ಮಾ (Dhananjai Sharma) ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಈ ಜೋಡಿ ಈಗ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾರೆ. ವಿಚ್ಛೇದನಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಮೆರಿಕದ ಕನಸು ಹೊತ್ತಿದ್ದ ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು (Akhila Pajimannu) ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಮೂರು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಧನಂಜಯ್ ಶರ್ಮಾ (Dhananjai Sharma) ಅವರನ್ನು ವಿವಾಹವಾಗಿದ್ದ ಸುಂದರಿಯ ಸಂಸಾರವೀಗ ವಿಚ್ಛೇದನದ ಬಾಗಿಲು ತಟ್ಟಿದೆ.
ಪುತ್ತೂರು ಕೋರ್ಟ್‌ನಲ್ಲಿ (Puttur Court) ಧನಂಜಯ್ ಶರ್ಮ ಹಾಗೂ ಅಖಿಲಾ ಪಜಿಮಣ್ಣು ವಿವಾಹ ವಿಚ್ಛೇದನಕ್ಕೆ (Divorce)ಇತ್ತೀಚೆಗೆ ಅರ್ಜಿ ಹಾಕಿದ್ದು, ಅಂತಿಮ ತೀರ್ಪು ಬರೋದು ಬಾಕಿ ಇದೆ. ಆದರೆ, ಇಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣವೇನು ಅನ್ನೋದು ಇನ್ನೂ ಗೊತ್ತಾಗಿಲ್ಲ.
ಮೂರು ವರ್ಷದ ಹಿಂದೆ ಮೈಸೂರಿನ ಧನಂಜಯ್ ಶರ್ಮ ಅವರನ್ನು ಅಖಿಲಾ ಪಜಿಮಣ್ಣು ಅದ್ದೂರಿಯಾಗಿ ವಿವಾಹವಾಗಿದ್ದರು. ಮಂಗಳೂರಿನಲ್ಲಿ ಇವರ ವಿವಾಹ ಸಮಾರಂಭ ನಡೆದಿತ್ತು.
ಮದುವೆಯಾದ ಕೆಲ ಸಮಯ ಭಾರತದಲ್ಲಿದ್ದ ಈ ಜೋಡಿ ಆ ಬಳಿಕ ಅಮೆರಿಕಕ್ಕೆ ಶಿಫ್ಟ್ ಆಗಿತ್ತು. ಅಮೆರಿಕ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸ್‌ನಲ್ಲಿ ಇವರು ವಾಸವಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಅಮೆರಿಕದ ವಿವಿಧ ಪ್ರದೇಶಗಳಿಗೆ ಟ್ರಿಪ್ ಮಾಡುವ ಫೋಟೋ ಹಂಚಿಕೊಂಡಿದ್ದ ಅಖಿಲಾ ಪಜಿಮಣ್ಣು, ಧನಂಜಯ್ ಟೆಸ್ಲಾ ಕಾರು ಖರೀದಿಸಿದ್ದಾಗ ಅದನ್ನು ಸಂಭ್ರಮದಿಂದ ವಿಡಿಯೋ ಮಾಡಿದ್ದರು.
ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ 2011 ರಿಂದ 2015ರವರೆಗೆ ವಿದ್ಯಾಭ್ಯಾಸ ಮಾಡಿದ್ದ ಧನಂಜಯ್, ಆ ಬಳಿಕ ನಾರ್ತ್ ಕ್ಯಾರೋಲಿನಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ಸ್ ಡಿಗ್ರಿ ಮಾಡಿದ್ದರು.
ಆ ಬಳಿಕ ತವರಿಗೆ ವಾಪಾಸಾಗಿದ್ದ ಅವರು 2015 ರಿಂದ 2017ರವರೆಗೆ ಬೆಂಗಳೂರಿನಲ್ಲಿ ನೋಕಿಯಾ ನೆಟ್‌ವರ್ಕ್‌ನಲ್ಲಿ R&D ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಬಳಿಕ 2018ರಲ್ಲಿ 11 ತಿಂಗಳು ಅಮೆರಿಕದ ನಾರ್ತ್ ಕ್ಯಾರೋಲಿನಾ ಏರಿಯಾದಲ್ಲಿನ ಎಕ್ಸ್‌ಟ್ರೀಮ್ ನೆಟ್‌ವರ್ಕ್ ಕಂಪನಿಯಲ್ಲಿ ಎಂಬಡೆಡ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಇದರ ನಡುವೆ ಅವರು ನಾರ್ತ್ ಕ್ಯಾರೋಲಿನಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಮಾಸ್ಟರ್ಸ್ ಪೂರೈಸಿದ್ದರು.
ಮಾಸ್ಟರ್ಸ್ ಮುಗಿದ ಬಳಿಕ ಸ್ಯಾನ್ ಹೋಸ್‌ನಲ್ಲಿ ಸಿಸ್ಕೋ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ2019ರಲ್ಲಿ ಸೇರಿದ್ದ ಧನಂಜಯ್ ಈಗಲೂ ಕೂಡ ಒಂದು ಪ್ರಮೋಷನ್‌ನೊಂದಿಗೆ ಅದೇ ಹುದ್ದೆಯಲ್ಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟೀವ್ ಆಗಿ ಇರದ ಧನಂಜಯ್ ಶರ್ಮ ಆಗೊಮ್ಮೆ ಈಗೊಮ್ಮೆ ಪತ್ನಿಯ ಜೊತೆಗಿನ ಫೋಟೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು.
ಆದರೆ, ವಿಚ್ಛೇದನದ ಸುದ್ದಿ ಗೊತ್ತಾಗುತ್ತಿದ್ದಂತೆ ತಮ್ಮ ಇನ್ಸ್‌ಟಾಗ್ರಾಮ್ ಅಕೌಂಟ್‌ಅನ್ನು ಅವರು ಡಿಲೀಟ್ ಮಾಡಿದ್ದು, ಇತ್ತೀಚೆಗೆ ಅಖಿಲಾ ಪಜಿಮಣ್ಣು ಅವರ ಜೊತೆಯಲ್ಲಿಯೇ ಕೋರ್ಟ್‌ಗೆ ಬಂದಿದ್ದರು ಎನ್ನಲಾಗಿದೆ.
ಇಬ್ಬರ ವಿಚ್ಛೇದನಕ್ಕೆ ಕಾರಣವೇನು ಅನ್ನೋದರ ಯಾವುದೇ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಈ ನಡುವೆ ಅಖಿಲಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಬೆಳಗ್ಗೆ ಸುವರ್ಣ ಸಂಕಲ್ಪ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.