ಯಾರು ಈ ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು? ಈ ಸುಂದರ ಬೆಳದಿಂಗಳಲ್ಲಿ ಏನಾಯ್ತು?
ಕನ್ನಡಿಗರ ಮನಗೆದ್ದ ಗಾಯಕಿ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ ಕೋಗಿಲೆ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ಅಖಿಲಾ ಬಳಿಕ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ದಾಂಪತ್ಯ ಜೀವನದಲ್ಲಿನ ಎದುರಾಗಿರುವ ಬಿರುಗಾಳಿಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
- FB
- TW
- Linkdin
Follow Us
)
ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಗೆದ್ದ ಅಖಿಲಾ ಪಜಿಮಣ್ಣು ಹಲವು ವೇದಿಕೆಗಳ ಮೂಲಕ ಕಾಣಿಸಿಕೊಂಡಿದ್ದರೆ. ಕನ್ನಡ ಕೋಗಿಲೆ 1 ಹಾಗೂ 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿರುವ ಅಖಿಲಾ ಪಜಿಮಣ್ಣು ತಮ್ಮ ಸುಮಧುರ ಕಂಠದಿಂದ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನದಲ್ಲಿ ಅಡೆ ತಡೆಗಳು ಎದುರಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಮುಂಜಾನೆ ರಾಗ ಅನ್ನೋ ಕಾರ್ಯಕ್ರಮದಲ್ಲಿ ಅಖಿಲಾ ಪಜಿಮಣ್ಣು ನಿರೂಪಕಿಯಾಗಿ ಎಲ್ಲರ ಗಮನ ಸೆಳೆದಿದ್ದರು. ದಕ್ಷಿಣ ಕನ್ನಡ ಪುತ್ತೂರು ಮೂಲದ ಅಖಿಲಾ ಪಜಿಮಣ್ಣು ಹಾಡುಗಳನ್ನು ಬೇರೆ ಬೇರೆ ಜಾನರ್‌ನಲ್ಲಿ ಹಾಡಿ ಕೇಳುಗರ ಮೋಡಿ ಮಾಡಿದ್ದರು. ಈ ಸುಂದರ ಬೆಳಂದಿಗಳ, ಈ ತಂಪಿನ ಅಂಗಳದಲಿ ಹಾಡುಗಳ ಕವರ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿತ್ತು. ಇಷ್ಟೇ ಅಲ್ಲ ಅಖಿಲಾ ಹೊಸ ಪ್ರಯೋಗಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ಪ್ರಮುಖವಾಗಿ ಹಳೇ ಸಿನಿಮಾಗಳ ಮೆಲೋಡಿ ಹಾಡುಗಳಿಗೆ ಮರು ಜೀವ ನೀಡಿ ಮತ್ತೆ ಕೇಳಗರಲ್ಲಿ ಪುಳಕ ತರುತ್ತಿದ್ದರು. ಅಖಿಲಾ ಸುಮುಧುರ ಕಂಠಕ್ಕೆ ಮನಸೋಲದವರು ಯಾರೂ ಇಲ್ಲ. ಪ್ರತಿಭಾನ್ವಿತ ಗಾಯಕಿಯಾಗಿ ಕನ್ನಡಿಗರ ಮನಗೆದ್ದಿರುವ ಅಖಿಲಾ ಈಗಲೂ ಹಲವು ವೇದಿಕೆಗಳಲ್ಲಿ ತಮ್ಮ ಹಾಡಿನ ಮೂಲಕ ಸಂಗೀತ ಪ್ರೀಯರ ಮನತಣಿಸುತ್ತಿದ್ದಾರೆ.
ಕನ್ನಡ ಕೋಗಿಲೆ ಬಳಿಕ ಹಲವು ಗಾಯನ ರಿಯಾಲಿಟಿ ಶೋ ಹಾಗೂ ಇತರ ವೇದಿಕೆಗಳಲ್ಲೂ ಅಖಿಲಾ ಪಜಿಮಣ್ಣು ಕಾಣಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಅಖಿಲಾ ಪಜಿಮಣ್ಣು, ಧನಂಜಯ್ ಶರ್ಮಾ ಜೊತೆ ವಿವಾಹವಾಗಿದ್ದರು. ಬಳಿಕ ಅಮೆರಿಕದಲ್ಲಿ ನೆಲೆಸಿದ್ದ ಈ ಕುಟುಂಬ ಇದೀಗ ಬೇರೆಯಾಗಲು ನಿರ್ಧರಿಸಿರುವುದಾಗಿ ಮೂಲಗಳು ಹೇಳುತ್ತಿದೆ.
ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಗಂಡನ ಜೊತೆಗಿನ ಫೋಟೋ, ಟ್ರಿಪ್ ಫೋಟೋ, ವಿಡಿಯೋ ಸೇರಿದಂತೆ ತಮ್ಮ ಸಿಂಗಿಂಗ್, ಕಾರ್ಯಕ್ರಮ, ರಿಯಾಲಿಟಿ ಶೋ ಸೇರಿದಂತೆ ಹಲವು ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ಅಖಿಲಾ ಪಜಿಮಣ್ಣು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರು ಒಪ್ಪಿಗೆ ಮೇರೆಗೆ ಬೇರೆ ಬೇರೆಯಾಗಲು ನಿರ್ಧರಿಸಿದ ಬೆನ್ನಲ್ಲೇ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾ ಖಾತೆಗಳಿಂದ ದಾಂಪತ್ಯ ಜೀವನದ ಫೋಟೋಗಳು ಡಿಲೀಟ್ ಆಗಿದೆ. ಇದೀಗ ಅಖಿಲಾ ಪಜಿಮಣ್ಣು ಅವರ ಫೋಟೋಗಳು, ವಿಡಿಯೋಗಳು ಮಾತ್ರ ಸೋಶಿಯಲ್ ಮೀಡಿಯಾದಲ್ಲಿದೆ.